ಹೈದರಾಬಾದ್‌ನಲ್ಲಿ ಬೃಹತ್ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ತೆಲಂಗಾಣದ ಇಬ್ಬರು ಶಂಕಿತ ಐಸಿಸ್ ಉಗ್ರರನ್ನು ಭಾನುವಾರ ಆಂಧ್ರಪ್ರದೇಶ ಮತ್ತು ತೆಲಂಗಾಣ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು ಸಯೀದ್ ಸಮೀರ್ (28) ಮತ್ತು ಸಿರಾಜ್-ಉರ್-ರೆಹಮಾನ್ (29) ಎಂದು ಗುರುತಿಸಲಾಗಿದೆ.

 ಹೈದರಾಬಾದ್: ಹೈದರಾಬಾದ್‌ನಲ್ಲಿ ಬೃಹತ್ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ತೆಲಂಗಾಣದ ಇಬ್ಬರು ಶಂಕಿತ ಐಸಿಸ್ ಉಗ್ರರನ್ನು ಭಾನುವಾರ ಆಂಧ್ರಪ್ರದೇಶ ಮತ್ತು ತೆಲಂಗಾಣ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು ಸಯೀದ್ ಸಮೀರ್ (28) ಮತ್ತು ಸಿರಾಜ್-ಉರ್-ರೆಹಮಾನ್ (29) ಎಂದು ಗುರುತಿಸಲಾಗಿದೆ.

‘ಸಾಮಾಜಿಕ ಮಾಧ್ಯಮದ ಮೂಲಕ ಇವರಿಬ್ಬರ ಪರಿಚಯವಾಗಿತ್ತು. ಆ ಬಳಿಕ ಐಸಿಸ್‌ಗಾಗಿ ಕೆಲಸ ಮಾಡಲು ಆರಂಭಿಸಿದ್ದರು. ಆನ್ಲೈನ್ ಮೂಲಕ ಸ್ಫೋಟಕಗಳನ್ನು ಖರೀದಿಸಿ ವಿಜಿಯನಗರಂನಲ್ಲಿ ಪ್ರಯೋಗ ನಡೆಸಿದ್ದರು. ಈ ಪ್ರಯೋಗದ ಯಶಸ್ಸಿನೊಂದಿಗೆ, ಸೌದಿ ಅರೇಬಿಯಾದಲ್ಲಿರುವ ಉಗ್ರನ ನೆರವಿನೊಂದಿಗೆ ಹೈದರಾಬಅದ್‌ನಲ್ಲಿ ದೊಡ್ಡ ಸ್ಫೋಟವನ್ನು ಕೈಗೊಳ್ಳುವ ಸಂಚು ರೂಪಿಸಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರವಷ್ಟೇ ಮುಂಬೈ ವಿಮಾನ ನಿಲ್ದಾಣದಲ್ಲಿ ಇಬ್ಬರು ಶಂಕಿತ ಐಸಿಸ್ ಉಗ್ರರನ್ನು ಪೊಲೀಸರು ಬಂಧಿಸಿದ್ದರು. ಅದರ ಬೆನ್ನಲ್ಲೆ ಇನ್ನಿಬ್ಬರ ಸೆರೆಯಾಗಿದೆ.