ಯಾತ್ರಿಕರು ಸಾಗುವ ರಸ್ತೆ ಹೋಟೆಲ್‌ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ ವಿಚಾರ ಸುಪ್ರೀಂ ಅಂಗಳಕ್ಕೆ

| Published : Jul 22 2024, 01:17 AM IST / Updated: Jul 22 2024, 05:00 AM IST

ಸಾರಾಂಶ

ಕಾವಡಿ ಯಾತ್ರಿಕರು ಸಾಗುವ ರಸ್ತೆಗಳಲ್ಲಿ ಹೋಟೆಲ್‌ ಮಾಲೀಕರು ತಮ್ಮ ಹೆಸರು ಪ್ರದರ್ಶನ ಮಾಡುವುದನ್ನು ಕಡ್ಡಾಯ ಮಾಡಿದ ಉತ್ತರಪ್ರದೇಶ ಸರ್ಕಾರದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ.

ಲಖನೌ: ಕಾವಡಿ ಯಾತ್ರಿಕರು ಸಾಗುವ ರಸ್ತೆಗಳಲ್ಲಿ ಹೋಟೆಲ್‌ ಮಾಲೀಕರು ತಮ್ಮ ಹೆಸರು ಪ್ರದರ್ಶನ ಮಾಡುವುದನ್ನು ಕಡ್ಡಾಯ ಮಾಡಿದ ಉತ್ತರಪ್ರದೇಶ ಸರ್ಕಾರದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ಸೋಮವಾರ ಈ ಅರ್ಜಿ ವಿಚಾರಣೆಗೆ ಬರಲಿದೆ.

ಕೆಲ ಹೋಟೆಲ್‌ಗಳಲ್ಲಿ ಸಸ್ಯಹಾರದ ಬದಲಾಗಿ ಮಾಂಸಾಹಾರ ವಿತರಣೆ ಮಾಡಲಾಗುತ್ತಿದ್ದು, ಇದು ಕಾವಾಡಿಗಳ ನಂಬಿಕೆಗೆ ಧಕ್ಕೆ ತರುತ್ತದೆ ಎಂಬ ಕಾರಣ ನೀಡಿ, ಸಿಎಂ ಯೋಗಿ ಸರ್ಕಾರ, ಭಕ್ತರಲ್ಲಿ ಗೊಂದಲ ನಿವಾರಣೆಗೆ ಇಂಥದ್ದೊಂದು ಆದೇಶ ಹೊರಡಿಸಿದೆ. ಇದನ್ನು ವಿಪಕ್ಷ ಮತ್ತು ಎನ್‌ಡಿಎದ ಕೆಲ ಪಕ್ಷಗಳು ಕೂಡಾ ವಿರೋಧ ಮಾಡಿವೆ.

ಅದರ ನಡುವೆಯೇ ಸೋಸಿಯೇನ್ ಆಫ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಎಂಬ ಸರ್ಕಾರೇತರ ಸಂಸ್ಥೆ ಭಾನುವಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿದೆ.