3 ದಿನ ಉಪವಾಸ ಮಾಡಿ ಪ್ರಧಾನಿ ನರೇಂದ್ರ ಮೋದಿ ಸಂದರ್ಶನ : ಅಮೆರಿಕ ಪಾಡ್‌ಕಾಸ್ಟರ್‌!

| N/A | Published : Feb 10 2025, 01:46 AM IST / Updated: Feb 10 2025, 05:34 AM IST

ಸಾರಾಂಶ

ಈ ತಿಂಗಳ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸಂದರ್ಶಿಸಲಿರುವ ಅಮೆರಿಕ ಪಾಡ್‌ಕಾಸ್ಟರ್‌ ಲೆಕ್ಸ್ ಫ್ರಿಡ್‌ಮನ್, ಮೋದಿಯವರನ್ನು ‘ಅತ್ಯಂತ ಆಕರ್ಷಕ ಮನುಷ್ಯ’ ಎಂದು ಬಣ್ಣಿಸಿದ್ದು, 3 ದಿನ ಉಪವಾಸ ಮಾಡಿ ಅವರನ್ನು ಸಂದರ್ಶಿಸುವುದಾಗಿ ತಿಳಿಸಿದ್ದಾರೆ.

ವಾಷಿಂಗ್ಟನ್‌: ಈ ತಿಂಗಳ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸಂದರ್ಶಿಸಲಿರುವ ಅಮೆರಿಕ ಪಾಡ್‌ಕಾಸ್ಟರ್‌ ಲೆಕ್ಸ್ ಫ್ರಿಡ್‌ಮನ್, ಮೋದಿಯವರನ್ನು ‘ಅತ್ಯಂತ ಆಕರ್ಷಕ ಮನುಷ್ಯ’ ಎಂದು ಬಣ್ಣಿಸಿದ್ದು, 3 ದಿನ ಉಪವಾಸ ಮಾಡಿ ಅವರನ್ನು ಸಂದರ್ಶಿಸುವುದಾಗಿ ತಿಳಿಸಿದ್ದಾರೆ.

ತಮ್ಮ ದೀರ್ಘಾವಧಿ ಸಂದರ್ಶನಗಳಿಂದಲೇ ಖ್ಯಾತರಾಗಿರುವ ಫ್ರಿಡ್‌ಮನ್, ಪ್ರಧಾನಿ ಮೋದಿಯವರೊಂದಿಗೆ ಹಲವು ಗಂಟೆಗಳ ಕಾಲ ಮಾತನಾಡಲು ಎದುರು ನೋಡುತ್ತಿದ್ದೇನೆ. ಮೋದಿಯವರು ಕೈಗೊಳ್ಳುವ ಬಹುದಿನಗಳ ಉಪವಾಸ ವ್ರತವನ್ನು ಗಮನಿಸಿದ್ದು, ಅವರ ಸಂದರ್ಶನಕ್ಕೆ ಮೊದಲು ನಾನು ಕೂಡಾ 48 ರಿಂದ 72 ಗಂಟೆಗಳ ಉಪವಾಸ ಕೈಗೊಳ್ಳಲಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಪರ್ಪ್ಲೆಕ್ಸಿಟಿ ಎಐನ ಸಿಇಒ ಅರವಿಂದ್ ಶ್ರೀನಿವಾಸ್ ಅವರು ಫ್ರಿಡ್‌ಮನ್ ಪೋಸ್ಟ್‌ಗೆ ಪ್ರತಿಕ್ರಿಯಿಸಿ, ‘ಅವರು ಅದ್ಭುತ’ ಎಂದಿದ್ದಾರೆ. ಫ್ರಿಡ್‌ಮನ್ ಟೆಸ್ಲಾ ಸಿಇಒ ಎಲಾನ್ ಮಸ್ಕ್, ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಮತ್ತು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೇರಿದಂತೆ ಅನೇಕ ಉನ್ನತ ವ್ಯಕ್ತಿಗಳನ್ನು ಸಂದರ್ಶಿಸಿದ್ದಾರೆ. ಅವರ ಯೂಟ್ಯೂಬ್ ಚಾನೆಲ್ 45.5 ಲಕ್ಷ ಚಂದಾದಾರರನ್ನು ಹೊಂದಿದೆ.