ಕಾಂಚಾಣದ ಹಾಸಿಗೆಯಲ್ಲಿ ಭ್ರಷ್ಟಾಚಾರ ಆರೋಪಿ ಶಯನ!

| Published : Mar 28 2024, 12:48 AM IST / Updated: Mar 28 2024, 08:14 AM IST

ಕಾಂಚಾಣದ ಹಾಸಿಗೆಯಲ್ಲಿ ಭ್ರಷ್ಟಾಚಾರ ಆರೋಪಿ ಶಯನ!
Share this Article
  • FB
  • TW
  • Linkdin
  • Email

ಸಾರಾಂಶ

ಸುಖದ ಸುಪ್ಪತ್ತಿಗೆಯಲ್ಲಿ ಮಲಗುವುದು ಎಲ್ಲರ ಕನಸಾಗಿರುತ್ತದೆ. ಹಾಗೆಯೇ ಇಲ್ಲೊಬ್ಬ ಭ್ರಷ್ಟ ರಾಜಕಾರಣಿ ಕಾಂಚಾಣದಿಂದ ಆವೃತವಾಗಿರುವ ಹಾಸಿಗೆಯಲ್ಲಿ ಮಲಗಿರುವ ದೃಶ್ಯ ವೈರಲ್‌ ಆಗಿದೆ.

ಗುವಾಹಟಿ: ಸುಖದ ಸುಪ್ಪತ್ತಿಗೆಯಲ್ಲಿ ಮಲಗುವುದು ಎಲ್ಲರ ಕನಸಾಗಿರುತ್ತದೆ. ಹಾಗೆಯೇ ಇಲ್ಲೊಬ್ಬ ಭ್ರಷ್ಟ ರಾಜಕಾರಣಿ ಕಾಂಚಾಣದಿಂದ ಆವೃತವಾಗಿರುವ ಹಾಸಿಗೆಯಲ್ಲಿ ಮಲಗಿರುವ ದೃಶ್ಯ ವೈರಲ್‌ ಆಗಿದೆ.

ಅಸ್ಸಾಂನ ಉಡಾಲ್‌ಗುರಿ ಜಿಲ್ಲೆಯ ಭೈರಾಗೂರಿಯಲ್ಲಿ ಗ್ರಾಮಾಭಿವೃದ್ದಿ ಸಮಿತಿಯ ಅಧ್ಯಕ್ಷನಾಗಿದ್ದ ಬೋಡೋಲ್ಯಾಂಡ್‌ ಪಕ್ಷದ ನಾಯಕ ಬೆಂಜಮಿನ್‌ ಬಸುಮಾತಾರಿ ಈ ರೀತಿ 500 ರು. ನೋಟಿನ ಮೇಲೆ ಮಲಗಿದ್ದಾನೆ. ಆತನ ಫೋಟೋ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡಿದೆ.

ಈತ ಗ್ರಾಮದಲ್ಲಿ ಹಲವು ಸರ್ಕಾರಿ ಯೋಜನೆಗೆ ಫಲಾನುಭವಿಗಳಿಂದ ಲಂಚ ಪಡೆಯುತ್ತಿರುವ ಕುರಿತು ಆರೋಪವಿದೆ.

ಪಕ್ಷದಿಂದ ವಜಾ:ವಿಡಿಯೋ ವೈರಲ್‌ ಬೆನ್ನಲ್ಲೇ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬೋಡೋಲ್ಯಾಂಡ್‌ ಪಕ್ಷ, ಕಳೆದ ಜ.10ರಂದೇ ತನ್ನ ಪ್ರಾಥಮಿಕ ಸದಸ್ಯತ್ವದಿಂದ ಕಿತ್ತು ಹಾಕಿರುವುದಾಗಿ ತಿಳಿಸಿದೆ.