ಸಾರಾಂಶ
ವರ್ಜೀನಿಯಾದಲ್ಲಿ ಸೆನೆಟರ್ ಆಗಿರುವ ಬೆಂಗಳೂರು ಮೂಲದ ಸುಹಾಸ್ ಸುಬ್ರಹ್ಮಣ್ಯಂ ಅಮೆರಿಕ ಸಂಸತ್ತಿಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ವಾಷಿಂಗ್ಟನ್: ಅಮೆರಿಕದ ವರ್ಜೀನಿಯಾ ರಾಜ್ಯದ ಸೆನೆಟರ್ ಆಗಿರುವ ಬೆಂಗಳೂರು ಮೂಲದ ಸುಹಾಸ್ ಸುಬ್ರಹ್ಮಣ್ಯಂ (37), ಇದೀಗ ಅಮೆರಿಕದ ಸಂಸತ್ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಸುಹಾಸ್ 2019ರಲ್ಲಿ ವರ್ಜೀನಿಯಾದ ಜನರಲ್ ಅಸೆಂಬ್ಲಿಗೆ, 2023ರಲ್ಲಿ ವರ್ಜೀನಿಯಾ ಸ್ಟೇಟ್ ಸೆನೆಟ್‌ಗೆ ಆಯ್ಕೆಯಾದ ಮೊದಲ ಭಾರತೀಯ ಮೂಲದ ಅಮೆರಿಕನ್ ವ್ಯಕ್ತಿ, ಮೊದಲ ಹಿಂದೂ, ಮೊದಲ ದಕ್ಷಿಣ ಏಷ್ಯಾದ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದರು.
ಸದ್ಯ ಸುಹಾಸ್ ಕಣಕ್ಕೆ ಇಳಿಯಲು ನಿರ್ಧರಿಸಿರುವ ಕ್ಷೇತ್ರದ ಹಾಲಿ ಸಂಸದೆ, ಡೆಮಾಕ್ರೆಟ್ ಪಕ್ಷದ ಜೆನ್ನಿಫರ್ ಈ ಬಾರಿ ತಾವು ಕಣಕ್ಕೆ ಇಳಿಯುವುದಿಲ್ಲ ಎಂದು ಘೋಷಿಸಿದ್ದಾರೆ. ಸುಹಾಸ್ ಪೋಷಕರು ಈ ಹಿಂದೆ ಬೆಂಗಳೂರಿನಿಂದ ಅಮೆರಿಕಕ್ಕೆ ವಲಸೆ ಹೋಗಿದ್ದರು.