ಕೋರ್ಟ್‌ನಲ್ಲೇ ಮತ ಎಣಿಕೆ: ಇತಿಹಾಸ ಸೃಷ್ಟಿ

| Published : Feb 21 2024, 02:03 AM IST / Updated: Feb 21 2024, 08:05 AM IST

ಸಾರಾಂಶ

ಚಂಡೀಗಢ ಮೇಯರ್‌ ಚುನಾವಣೆಗೆ ಸಂಬಂಧಿಸಿದಮತೆ ನ್ಯಾಯಾಲಯದಲ್ಲೇ ಮತಎಣಿಕೆ ಮಾಡುವ ಮೂಲಕ ಹೊಸಡಿತಿಹಾಸ ಸೃಷ್ಟಿಯಾಗಿದೆ.

ನವದೆಹಲಿ: ಚಂಡೀಗಢದ ಮೇಯರ್ ಚುನಾವಣೆಯ ಮತ ಎಣಿಗೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದ್ದು, ಇತಿಹಾಸ ಸೃಷ್ಟಿಯಾಗಿದೆ.

ಇದು ಅತ್ಯಂತ ಅಪರೂಪದ ವಿದ್ಯಮಾನ ಎಂದು ಬಣ್ಣಿಸಲಾಗಿದೆ.

ಚುನಾವಣಾಧಿಕಾರಿಯು 8 ವಿಪಕ್ಷಗಳ ಮತಗಳನ್ನು ಅಸಿಂಧು ಎಂದು ಘೋಷಿಸಿದ್ದರು.

ಇದನ್ನು ಪ್ರಶ್ನಿಸಿ ಆಪ್‌-ಕಾಂಗ್ರೆಸ್‌ ಕೂಟ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು.

ಹೀಗಾಗಿ ಈ 8 ಮತಗಳನ್ನು ಮುಖ್ಯ ನ್ಯಾ। ಡಿ.ವೈ. ಚಂದ್ರಚೂಡ್ ಅವರ ಪೀಠವು ಕೋರ್ಟ್‌ ರೂಂನಲ್ಲೇ ಎಣಿಸಿತು.