ಸಾರಾಂಶ
‘14 ಕೋಟಿ ಸದಸ್ಯರನ್ನು ಹೊಂದುವ ಮೂಲಕ ಬಿಜೆಪಿಯು ಇಡೀ ಜಗತ್ತಿನಲ್ಲಿ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭಾನುವಾರ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದ ಸಂಭ್ರಮದ ಹೊತ್ತಿನಲ್ಲೇ ಬಿಜೆಪಿ ಈ ಮಹತ್ವದ ಸಾಧನೆ ಮಾಡಿದೆ.
ಮೋದಿ 75ನೇ ಹುಟ್ಟುಹಬ್ಬಕ್ಕೂ ಹೊಸ ಮೈಲುಗಲ್ಲು
ದೇಶಾದ್ಯಂತ 240 ಸಂಸದರು, 1600 ಶಾಸಕ ಬಲವಿಶಾಖಪಟ್ಟಣಂ: ‘14 ಕೋಟಿ ಸದಸ್ಯರನ್ನು ಹೊಂದುವ ಮೂಲಕ ಬಿಜೆಪಿಯು ಇಡೀ ಜಗತ್ತಿನಲ್ಲಿ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭಾನುವಾರ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದ ಸಂಭ್ರಮದ ಹೊತ್ತಿನಲ್ಲೇ ಬಿಜೆಪಿ ಈ ಮಹತ್ವದ ಸಾಧನೆ ಮಾಡಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘14 ಕೋಟಿ ಸದಸ್ಯರನ್ನು ಹೊಂದುವ ಮೂಲಕ ಬಿಜೆಪಿಯು ವಿಶ್ವದಲ್ಲೇ ಅತಿ ದೊಡ್ಡ ರಾಜಕೀಯ ಪಕ್ಷವಾಗಿದೆ. ಇವರಲ್ಲಿ 2 ಕೋಟಿ ಸದಸ್ಯರು ಸಕ್ರಿಯರಾಗಿದ್ದಾರೆ. ದೇಶದ 20 ರಾಜ್ಯಗಳಲ್ಲಿ ಎನ್‌ಡಿಎ ಹಾಗೂ 13 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳಿವೆ. 240 ಲೋಕಸಭಾ ಸಂಸದರು. ಸುಮಾರು 1,500 ಶಾಸಕರು ಹಾಗೂ 170ಕ್ಕೂ ಅಧಿಕ ವಿಧಾನ ಪರಿಷತ್ ಸದಸ್ಯರನ್ನು ಬಿಜೆಪಿ ಹೊಂದಿದೆ’ ಎಂದು ತಿಳಿಸಿದರು.ಪ್ರಧಾನಿ ಮೋದಿಯವರ ಸರ್ಕಾರವನ್ನು ‘ಜವಾಬ್ದಾರಿಯುತ’ ಮತ್ತು ‘ಸ್ಪಂದಿಸುವ’ ಸರ್ಕಾರ ಎಂದು ಬಣ್ಣಿಸಿದ ಅವರು, ಈ ಹಿಂದಿನ ಸರ್ಕಾರಗಳು ನಿಷ್ಕ್ರಿಯವಾಗಿದ್ದು, ಅಭಿವೃದ್ಧಿಹೀನ ಆಡಳಿತ ನೀಡಿದ್ದವು ಎಂದು ಟೀಕಿಸಿದರು.