ಸಾರಾಂಶ
ಕೇವಲ ಎರಡು ಮುಕ್ಕಾಲು ಅಡಿ ಉದ್ದವಿರುವ ಜ್ಯೋತಿ ನಾಗಪುರದಲ್ಲಿ ಮತ ಚಲಾವಣೆ ಮಾಡಿ ಗಮನ ಸೆಳೆದಿದ್ದಾರೆ.
ನಾಗಪುರ: ಲೋಕಸಭೆಗೆ ಶುಕ್ರವಾರ ನಡೆದ ಮೊದಲ ಹಂತದ ಚುನಾವಣೆ ವೇಳೆ ವಿಶ್ವದ ಅತ್ಯಂತ ಕುಬ್ಜ ಮಹಿಳೆ ಎಂಬ ದಾಖಲೆ ಹೊಂದಿರುವ ಜ್ಯೋತಿ ತಮ್ಮ ಮತ ಚಲಾಯಿಸಿದ್ದಾರೆ.
ಎರಡು ಮುಕ್ಕಾಲು ಅಡಿ ಉದ್ದವಿರುವ (62.8 ಸೆಂ.ಮೀ.) ಜ್ಯೋತಿ ತಮ್ಮ ಮನೆ ಬಳಿಯಿರುವ ಮತಗಟ್ಟೆಗೆ ತಮ್ಮ ಕುಟುಂಬಸ್ಥರೊಂದಿಗೆ ಆಗಮಿಸುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ಜನ ಆಕೆಯನ್ನು ನೋಡಲು ಮುಗಿಬಿದ್ದರು. ಈಕೆಗೆ ಇದು ಎರಡನೇ ಲೋಕಸಭಾ ಚುನಾವಣೆಯಾಗಿದ್ದು, 2011ರಲ್ಲಿ ತಮ್ಮ 18ನೇ ಜನ್ಮದಿನದಂದು ಜಗತ್ತಿನ ಕುಬ್ಜ ಮಹಿಳೆ ಎಂಬುದಾಗಿ ಗಿನ್ನೆಸ್ ದಾಖಲೆಗೆ ಪಾತ್ರರಾಗಿದ್ದರು.
ಇವರನ್ನು ಚುನಾವಣಾ ಆಯೋಗ ಮತದಾನದ ರಾಯಭಾರಿಯಾಗಿಯೂ ಬಳಸಿಕೊಂಡಿದ್ದು, ಕಳೆದ ತಿಂಗಳಷ್ಟೇ ಅವರು ಎಲ್ಲರೂ ಮತದಾನ ಮಾಡುವಂತೆ ಕರೆ ನೀಡಿದ್ದರು.