ಮಂಗಳ ಸೂತ್ರ ಕಸಿವ ಮೋದಿ ಹೇಳಿಕೆ ನಿಜ : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟಾಂಗ್!

| N/A | Published : Mar 06 2025, 12:34 AM IST / Updated: Mar 06 2025, 05:08 AM IST

Congress President Mallikarjun Kharge (File Photo/ANI)

ಸಾರಾಂಶ

ದೇಶದಲ್ಲಿ ಚಿನ್ನದ ಅಡಮಾನ ಸಾಲ ಹೆಚ್ಚುತ್ತಿದೆ ಎಂಬ ಆರ್‌ಬಿಐ ವರದಿ ಪ್ರಸ್ತಾಪಿಸಿದ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿರುವ ವಿಪಕ್ಷ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಮಂಗಳಸೂತ್ರ ಕಸಿಯಲಾಗುತ್ತದೆ ಎನ್ನುವ ಮೋದಿ ಅವರ ಚುನಾವಣಾ ಸಮಯದ ಮಾತು ನಿಜವಾಗಿದೆ    ಎಂದು ಟಾಂಗ್ ನೀಡಿದ್ದಾರೆ.

ನವದೆಹಲಿ: ದೇಶದಲ್ಲಿ ಚಿನ್ನದ ಅಡಮಾನ ಸಾಲ ಹೆಚ್ಚುತ್ತಿದೆ ಎಂಬ ಆರ್‌ಬಿಐ ವರದಿ ಪ್ರಸ್ತಾಪಿಸಿದ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿರುವ ವಿಪಕ್ಷ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಮಂಗಳಸೂತ್ರ ಕಸಿಯಲಾಗುತ್ತದೆ ಎನ್ನುವ ಮೋದಿ ಅವರ ಚುನಾವಣಾ ಸಮಯದ ಮಾತು ನಿಜವಾಗಿದೆ. ಅವರ ಕಾಲದಲ್ಲಿ ಒತ್ತಾಯವಾಗಿ ಮಂಗಳಸೂತ್ರ ಅಡಮಾನ ಇಡಲಾಗುತ್ತಿದೆ’ ಎಂದು ಟಾಂಗ್ ನೀಡಿದ್ದಾರೆ. 

ಈ ಬಗ್ಗೆ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ಅವರು, ‘ನರೇಂದ್ರ ಮೋದಿ ಜೀ ನೀವು ಮಂಗಳಸೂತ್ರಗಳ  ಕಸಿಯುವಿಕೆ ಬಗ್ಗೆ ಮಾತನಾಡಿದ್ದೀರಿ. ಈಗ ನಿಜವಾಗಿದೆ. ನಿಮ್ಮ ಆಡಳಿತದಲ್ಲಿ ಮಹಿಳೆಯರು ತಮ್ಮ ಚಿನ್ನಾಭರಣ ಅಡಮಾನ ಇಡುವಂತೆ ಮಾಡಲಾಗುತ್ತಿದೆ. 

ನೀವು ನೋಟು ರದ್ಧತಿ ಮೂಲಕ ಮಹಿಳೆಯರ ಹಣವನ್ನು ಕಣ್ಮರೆಯಾಗುವಂತೆ ಮಾಡಿದ್ದೀರಿ. ಈಗ ಹಣದುಬ್ಬರ ಮತ್ತು ಮನೆಯ ಉಳಿತಾಯ ಕುಸಿಯುತ್ತಿರುವುದರಿಂದ ಅವರು ಆಭರಣಗಳನ್ನು ಅಡಮಾನ ಇಡುವಂತೆ ಮಾಡಲಾಗಿದೆ’ ಎಂದರು.

ಬ್ಯಾಂಕ್‌ಗಳು ಚಿನ್ನದ ಮೇಲೆ ನೀಡುವ ಸಾಲ, ವರ್ಷದಿಂದ ವರ್ಷಕ್ಕೆ ಶೇ.71.3ರಷ್ಟು ಏರಿಕೆಯಾಗಿ, ಡಿಸೆಂಬರ್‌ನಲ್ಲಿ 1.72 ಲಕ್ಷ ಕೋಟಿ ರು. ಆಗಿದೆ ಎಂದು ಆರ್‌ಬಿಐ ಹೇಳಿತ್ತು.