ಸಾರಾಂಶ
ಬಿಜೆಪಿ ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ಪಕ್ಷ. ಅಂಥ ಮಹಾನ್ ಪಕ್ಷದ ಸದಸ್ಯರಾಗಿರುವುದು ಹೆಮ್ಮೆಯ ಸಂಗತಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ದೇಶದ ನೆರೆ ಹೊರೆ ರಾಷ್ಟ್ರಗಳು ದೇಶವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸುತ್ತಿವೆ. ದೇಶದ ಒಳಗಿನ ದುಷ್ಟರು ರಾಷ್ಟ್ರದ ಸಾರ್ವಭೌಮತೆಗೆ ಧಕ್ಕೆ ತರುವ ಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಸುಭದ್ರ ದೇಶ ಮತ್ತು ಹಿಂದುತ್ವ ರಕ್ಷಣೆಗಾಗಿ ಬಿಜೆಪಿ ಅಗತ್ಯವಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.ಶನಿವಾರ ಇಲ್ಲಿನ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ನಡೆದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತ ಮಾತೆ, ಪಂಡಿತ ದೀನದಯಾಳ ಶರ್ಮಾ ಮತ್ತು ಶಾಮಪ್ರಸಾದ ಮುಖರ್ಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಪಕ್ಷದ ಕಾರ್ಯಕರ್ತರು ಪಕ್ಷದ ಮಹಾನ್ ನಾಯಕರಾದ ಪಂಡಿತ ದೀನದಯಾಳ ಶರ್ಮಾ, ಶಾಮಪ್ರಸಾದ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ, ಲಾಲ ಕೃಷ್ಣ ಆಡ್ವಾಣಿ ಸೇರಿದಂತೆ ಅನೇಕ ಮುಖಂಡರ ಪಕ್ಷ ನಿಷ್ಠೆಯನ್ನು ತಮ್ಮಲ್ಲಿ ಅಳವಡಿಕೊಳ್ಳಬೇಕು. ಪಕ್ಷದ ಸೇವೆಯೊಂದಿಗೆ ದೇಶದ ಸೇವೆಗೆ ಮುಂದಾಗಬೇಕು ಎಂದು ತಿಳಿಸಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಶ್ರೀಶೈಲ ಬೀಳಗಿ ಮಾತನಾಡಿ, ಬಿಜೆಪಿ ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ಪಕ್ಷ. ಅಂಥ ಮಹಾನ್ ಪಕ್ಷದ ಸದಸ್ಯರಾಗಿರುವುದು ಹೆಮ್ಮೆಯ ಸಂಗತಿ ಎಂದರು.ಧರೆಪ್ಪ ಉಳ್ಳಾಗಡ್ಡಿ, ಸುರೇಶ ಅಕ್ಕಿವಾಟ, ಮಹಾವೀರ ಕೊಕಟನೂರ, ಬಾಬಾಗೌಡ ಪಾಟೀಲ, ಬಸವರಾಜ ಭದ್ರನ್ನವರ, ಜಿ.ಎಸ್. ಗೊಂಬಿ, ಮಹಾಂತೇಶ ಹಿಟ್ಟಿನಮಠ, ಶಿವಾನಂದ ಬುದ್ನಿ, ಶಿವಾನಂದ ಕಾಗಿ, ರವಿ ಕೊರ್ತಿ, ದುರ್ಗವ್ವ ಹರಿಜನ, ಚಿದಾನಂದ ಹೊರಟ್ಟಿ, ರವಿ ಕರಲಟ್ಟಿ, ಪ್ರವೀಣ ಧಬಾಡಿ, ಸುರೇಶ ಅವಕ್ಕನವರ, ಆನಂದ ಕಂಪು, ಭೀಮಶಿ ಪಾಟೀಲ ಸೇರಿದಂತೆ ಅನೇಕರು ಇದ್ದರು.