ಯಾವುದೇ ಷರತ್ತು ಇಲ್ಲದ ಸೇರ್ಪಡೆಯಾಗಿದ್ದು ಇಲ್ಲಿನ ಕಾರ್ಯಕರ್ತರ ಜತೆ ಸೇರಿ ಬೂತ್ ಮಟ್ಟದಿಂದ ಜೆಡಿಎಸ್‌ ಪಕ್ಷ ಸಂಘಟಿಸಲು ಶ್ರಮಿಸುವುದಾಗಿ ನೂತನ ಸೇರ್ಪಡೆ ಮುಖಂಡರಾದ ಸೋಲಾರ್‌ ಅಭಿವೃದ್ಧಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕರಾದ ಗುಜ್ಜನಡು ಜಿ.ವಿ.ಬಲರಾಮ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಪಾವಗಡ ಯಾವುದೇ ಷರತ್ತು ಇಲ್ಲದ ಸೇರ್ಪಡೆಯಾಗಿದ್ದು ಇಲ್ಲಿನ ಕಾರ್ಯಕರ್ತರ ಜತೆ ಸೇರಿ ಬೂತ್ ಮಟ್ಟದಿಂದ ಜೆಡಿಎಸ್‌ ಪಕ್ಷ ಸಂಘಟಿಸಲು ಶ್ರಮಿಸುವುದಾಗಿ ನೂತನ ಸೇರ್ಪಡೆ ಮುಖಂಡರಾದ ಸೋಲಾರ್‌ ಅಭಿವೃದ್ಧಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕರಾದ ಗುಜ್ಜನಡು ಜಿ.ವಿ.ಬಲರಾಮ್‌ ಹೇಳಿದರು.

ತಾಲೂಕು ಜೆಡಿಎಸ್‌ ಘಟಕದ ವತಿಯಿಂದ ಪಟ್ಟಣದ ಶ್ರೀ ಕಣಿವೆ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸೋಲಾರ್ ಅಭಿವೃದ್ಧಿ ನಿಗಮದ ನಿವೃತ್ತ ವ್ಯವಸ್ಥಾಪಕ,ಜಿ.ವಿ. ಬಲರಾಮ್‌ ಗಣ್ಯರು ಸಮ್ಮುಖದಲ್ಲಿ ಜೆಡಿಎಸ್‌ ಸೇರ್ಪಡೆಯಾದ ಬಳಿಕ ಮಾತನಾಡಿದರು.

ಯಾವುದೇ ಆಸೆ ಆಕಾಂಕ್ಷೆ ಇಲ್ಲದೆ ಪಕ್ಷದ ತಾಲೂಕು ಮುಖಂಡರ ಸಮ್ಮುಖದಲ್ಲಿ ಜೆಡಿಎಸ್‌ ಸೇರ್ಪಡೆ ಸಂತಸ ತಂದಿದೆ. ಇಲ್ಲಿಯೆ ಇದ್ದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ಕೇಂದ್ರ ಸಚಿವರಾದ ಎಚ್‌.ಡಿ.ಕುಮಾರಸ್ವಾಮಿ ಇತರೆ ಪಕ್ಷದ ರಾಜ್ಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ತಾಲೂಕಿನಲ್ಲಿ ಜೆಡಿಎಸ್‌ ಸದೃಢವಾಗಿ ಕಟ್ಟಲು ಶ್ರಮಿಸುವುದಾಗಿ ಹೇಳಿದರು.

ತಾಲೂಕಿನ ರೈತ ಹಾಗೂ ಸರ್ವತೋಮುಖ ಅಭಿವೃದ್ಧಿ ಹಿನ್ನೆಲೆಯಲ್ಲಿ ಕಳೆದ 10ವರ್ಷದ ಹಿಂದೆ ಬೇರೆ ಜಿಲ್ಲೆಗಳಿಗೆ ಹೋಗಬೇಕಿದ್ದ ಸೋಲಾರ್ ಪಾರ್ಕನ್ನು ಪಾವಗಡಕ್ಕೆ ತಂದಿದ್ದೇನೆ. ಕಾರ್ಯಕರ್ತರ ಜತೆ ಸೇರಿ ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟಿಸುವುದಾಗಿ ತಿಳಿಸಿದರು. ಮುಂಬರುವ ಸ್ಥಳೀಯ ಹಾಗೂ ಎಲ್ಲಾ ಚುನಾವಣೆಗಳಲ್ಲೂ ಜೆಡಿಎಸ್ ಪಕ್ಷವನ್ನು ಗೆಲ್ಲಿಸುವ ಗೆಲ್ಲಿಸುವ ಪ್ರಾಮಾಣಿಕ ಪ್ರಯತ್ನ ಹೋರಾಟ ಮಾಡಲಿದ್ದು ತಾಲೂಕಿನಲ್ಲಿ ಅಧಿಕಾರದ ಹೊಸ ಬದಲಾವಣೆ ತರುವ ನಿಟ್ಟಿನಲ್ಲಿ ಪಣತೊಟ್ಟು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ. ನಾನು ಇಲ್ಲಿನ 2028ರ ವಿಧಾನಸಭಾ ಚುನಾವಣೆಯ ಟಿಕೆಟ್ ನನಗೆ ಅಲ್ಲದಿದ್ದರೆ 2038ಕ್ಕೆ ನೀಡಲಿ ನಾನು ಜೆಡಿಎಸ್ ಪಕ್ಷದ ಕಾರ್ಯಕರ್ತನಾಗಿ ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ವಿವರಿಸಿದರು. ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ರಾಜ್ಯ ಜೆಡಿಎಸ್‌ ಉಪಾಧ್ಯಕ್ಷ ಎನ್‌.ತಿಮ್ಮಾರೆಡ್ಡಿ, ಜೆಡಿಎಸ್‌ ಮಾಜಿ ಜಿಲ್ಲಾಧ್ಯಕ್ಷ ಆರ್‌.ಸಿ.ಅಂಜಿನಪ್ಪ ಪಕ್ಷ ಸಂಘಟನೆ ಕುರಿತು ಮಾತನಾಡಿದರು. ಇದೇ ವೇಳೆ ಹಿರಿಯ ಮುಖಂಡರಾದ ಎಸ್‌.ಕೆ.ರೆಡ್ಡಿ, ಭೀಮನಕುಂಟೆ ಸತ್ಯಪ್ಪ, ರಾಜಶೇಖರಪ್ಪ, ತಾಲೂಕು ಅಧ್ಯಕ್ಷ ಎನ್.ಎ.ಈರಣ್ಣ, ಮುಖಂಡರಾದ ಬಲರಾಮರೆಡ್ಡಿ, ಕೋಟಗುಡ್ಡ ಅಂಜಿನಪ್ಪ, ಸಣ್ಣಾ ರೆಡ್ಡಿ, ಅಕ್ಕಲಪ್ಪ ನಾಯ್ಡು, ರಾಜಗೋಪಾಲ್ ಹಾಗೂ ಇತರೆ ಅನೇಕ ಮಂದಿ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರಿದ್ದರು.