ಸಾರಾಂಶ
ಕನ್ನಡಪ್ರಭ ವಾರ್ತೆ ಕಲ್ಯಾಣಪುರಇಲ್ಲಿನ ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿ ದರ್ಬಾರ್, ಐ.ಕ್ಯೂ.ಎ.ಸಿ. ಸಹಯೋಗದೊಂದಿಗೆ ಇತ್ತೀಚೆಗೆ ಸಂಜೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಾದ ಮಣಿ ನಾಲ್ಕೂರು ಅವರ ನೇತೃತ್ವದಲ್ಲಿ ‘ಕತ್ತಲ ಹಾಡು’ ಎನ್ನುವ ವಿನೂತನ ಕಾರ್ಯಕ್ರಮ ಕಾಲೇಜಿನ ವರಾಂಡದಲ್ಲಿ ನಡೆಯಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಉಡುಪಿ ಎಂ.ಜಿ.ಎಂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ.ಎಲ್. ಸಾಮಗ ಕಾರ್ಯಕ್ರಮವ್ನನು ದೀಪ ಬೆಳಗಿಸಿ ಉದ್ಘಾಟಿಸಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ಕತ್ತಲ ಹಾಡು ಕಾರ್ಯಕ್ರಮ ಆಯೋಜಿಸಿದ್ದು ಹೆಚ್ಚು ಪ್ರಸ್ತುತ ಎಂದು ಹೇಳಿದರು.ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ವೆ.ರೇ.ಫಾ ವಲೇರಿಯನ್ ಮೆಂಡೋನ್ಸಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವ, ನಾದಮಣಿ ನಾಲ್ಕೂರು ಅವರ ಪರಿಚಯವನ್ನು ಮಾಡಿದರು.ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳು, ಪೋಷಕರು, ಹಳೆ ವಿದ್ಯಾರ್ಥಿಗಳು, ನಾಗರೀಕರು ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಸಭಾ ಕಾರ್ಯಕ್ರಮದ ನಂತರ ಸಂಜೆ 6.30ರಿಂದ ರಾತ್ರಿ 8ರ ತನಕ ನಾದ ಮಣಿ ನಾಲ್ಕೂರು ಅವರ ಮಧುರವಾದ ಕಂಠಸಿರಿಯಲ್ಲಿ ಮಾನವೀಯತೆಯನ್ನು ಪಸರಿಸುವ ಸಾಮರಸ್ಯವನ್ನು ಬಿತ್ತುವ ಹಾಗೂ ಭರವಸೆಯ ಹಾಡುಗಳನ್ನು ಹಾಡಿದರು.ಈ ಸಂದರ್ಭದಲ್ಲಿ ಕಾಲೇಜಿನ ವರಾಂಡದಲ್ಲಿ ಸುತ್ತಲಿನ ವಿದ್ಯುತ್ ದೀಪಗಳ ಆರಿಸಿ ತುಂಬು ಕತ್ತಲೆಯ ನಡುವೆ 1000 ಸಣ್ಣ ಹಣತೆಗಳನ್ನು ಉರಿಸಿ ಹಾಡಿಸಿದ ಈ ಕಾರ್ಯಕ್ರಮ ನೋಡುವವರ ಕಣ್ಣಿಗೆ ಮನಮೋಹಕವಾಗಿತ್ತು.