ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆಗೆ ಚಾಲನೆ

| Published : Oct 03 2025, 01:07 AM IST

ಸಾರಾಂಶ

ನಗರಗಳು ಮತ್ತು ಪಟ್ಟಣಗಳ ಉದ್ಯಾನವನಗಳ ಸ್ವಚ್ಛತೆ ಕಾಪಾಡುವುದು. ರಸ್ತೆಗಳು, ಚರಂಡಿಗಳು, ಮತ್ತು ಕೆರೆಗಳಲ್ಲಿ ತ್ಯಾಜ್ಯ ಸಂಗ್ರಹವಾಗದಂತೆ ನೋಡಿಕೊಳ್ಳುವುದು. ತ್ಯಾಜ್ಯ ವಿಲೇವಾರಿ ಮತ್ತು ಸ್ವಚ್ಛತೆ ನಿಯಮ ಉಲ್ಲಂಘಿಸುವವರ ಮೇಲೆ ದಂಡ ವಿಧಿಸುವುದು ಮತ್ತು ಅಗತ್ಯವಿದ್ದರೆ ಎಫ್.ಐ.ಆರ್ ದಾಖಲಿಸುವುದು ಕಾರ್ಯಪಡೆಯ ಕೆಲಸ.

ಕನ್ನಡಪ್ರಭ ವಾರ್ತೆ ಕೋಲಾರಕೋಲಾರ ಜಿಲ್ಲೆಯಲ್ಲಿ ಸ್ವಚ್ಛತಾ ಕಾರ್ಯಕ್ಕಾಗಿ ಜಿಲ್ಲಾಡಳಿತವು ನಗರಸಭೆಯೊಂದಿಗೆ ‘ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆ’ ಎಂಬ ವಿಶೇಷ ತಂಡವನ್ನು ರಚಿಸಿದ್ದು, ವಿಶೇಷ ಪಡೆಯ ವಾಹನಕ್ಕೆ ಗುರುವಾರ ಜಿಲ್ಲಾಧಿಕಾರಿ ಡಾ.ಎಂ.ಆರ್‌. ರವಿ ಚಾಲನೆ ನೀಡಿದರು.

ನಗರದ ಗಾಂಧೀ ವೃತ್ತದಲ್ಲಿ ಶೇಷ ಪಡೆಯ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲೇ ಇಂಥ ಯೋಜನೆ ಮೊದಲಬಾರಿಗೆ ಕೋಲಾರದಲ್ಲಿ ಜಾರಿಯಾಗುತ್ತಿದ್ದು, ಸಾರ್ವಜನಿಕರ ಸಹಭಾಗಿತ್ವ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಸ್ವಚ್ಛತೆ ಕಾಪಾಡುವ ಉದ್ದೇಶ

ಈ ಕಾರ್ಯಪಡೆಯು ನಗರಸಭೆ ಮತ್ತು ಪುರಸಭೆಗಳ ವ್ಯಾಪ್ತಿಯಲ್ಲಿನ ಉದ್ಯಾನವನಗಳು, ರಸ್ತೆಗಳು, ಚರಂಡಿಗಳು ಮತ್ತು ಕೆರೆಗಳ ಸ್ವಚ್ಛತೆ ನಿರ್ವಹಿಸುತ್ತದೆ. ಅಲ್ಲದೆ, ಸಾರ್ವಜನಿಕರಲ್ಲಿ ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆ ಬಗ್ಗೆ ಅರಿವು ಮೂಡಿಸುವುದು, ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ತಡೆಯುವುದು, ಹಾಗೂ ಕಾನೂನು ಉಲ್ಲಂಘಿಸುವವರ ಮೇಲೆ ಕ್ರಮ ಕೈಗೊಳ್ಳುವುದು ಇದರ ಮುಖ್ಯ ಜವಾಬ್ದಾರಿಗಳು ಎಂದು ತಿಳಿಸಿದರು. ನಗರಗಳು ಮತ್ತು ಪಟ್ಟಣಗಳ ಉದ್ಯಾನವನಗಳ ಸ್ವಚ್ಛತೆ ಕಾಪಾಡುವುದು. ರಸ್ತೆಗಳು, ಚರಂಡಿಗಳು, ಮತ್ತು ಕೆರೆಗಳಲ್ಲಿ ತ್ಯಾಜ್ಯ ಸಂಗ್ರಹವಾಗದಂತೆ ನೋಡಿಕೊಳ್ಳುವುದು. ತ್ಯಾಜ್ಯ ವಿಲೇವಾರಿ ಮತ್ತು ಸ್ವಚ್ಛತೆ ನಿಯಮ ಉಲ್ಲಂಘಿಸುವವರ ಮೇಲೆ ದಂಡ ವಿಧಿಸುವುದು ಮತ್ತು ಅಗತ್ಯವಿದ್ದರೆ ಎಫ್.ಐ.ಆರ್ ದಾಖಲಿಸುವುದು.

ಕಾರ್ಯಪಡೆಯ ಕಾರ್ಯ ವಿಧಾನ ಕಾರ್ಯಪಡೆಯು ಪ್ರತಿ ದಿನ ಬೆಳಗ್ಗೆ ೬ ರಿಂದ ೯ ರವರೆಗೆ ಮತ್ತು ಸಂಜೆ ೫ ರಿಂದ ೮ ರವರೆಗೆ ಕಾರ್ಯನಿರ್ವಹಿಸಿ, ನಗರಗಳನ್ನು ಪರಿವೀಕ್ಷಣೆ ಮಾಡುತ್ತದೆ. ಅನೈರ್ಮಲ್ಯವಿರುವ ಪ್ರದೇಶಗಳನ್ನು (ಬ್ಲಾಕ್ ಸ್ಪಾಟ್‌ಗಳನ್ನು) ಗುರುತಿಸಿ, ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಕಾರ್ಯಪಡೆ ಮೊದಲಿಗೆ ಕೋಲಾರ ನಗರಸಭೆಯಲ್ಲಿ ಯಶಸ್ವಿಯಾಗಿ ಕಾರ್ಯಗತಗೊಳಿಸಿ, ಬಳಿಕ ಇತರ ಪುರಸಭೆ ಮತ್ತು ನಗರಸಭೆಗಳಲ್ಲಿ ವಿಸ್ತರಿಸುವ ಯೋಜನೆ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಎಂ.ಮಲ್ಲೇಶ್ ಬಾಬು, ಜಿಲ್ಲಾ ರಕ್ಷಣಾಧಿಕಾರಿ ಡಾ.ಬಿ.ನಿಖಿಲ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಮೇಶ್, ಉಪಾಧ್ಯಕ್ಷೆ ಸಂಗೀತ, ಸದಸ್ಯರು ರಾಮಯ್ಯ, ನಗರಸಭೆ ಆಯುಕ್ತ ನವೀನ್ ಚಂದ್ರ ಇದ್ದರು.