ಉಡುಪಿ: ತೆಂಕನಿಡಿಯೂರು ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ಸುಮಾರು 4 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ಕುಮ್ಮೆಕೆರೆ ಕಾಮಗಾರಿಯನ್ನು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹಾಲೆರೆದು ಉದ್ಘಾಟಿಸಿದರು.ನಂತರ ಮಾತನಾಡಿದ ಶಾಸಕರು, ಈ ಗ್ರಾಮದಲ್ಲಿ ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕುಮ್ಮಕೆರೆಯ ಅಭಿವೃದ್ಧಿಗೆ ವಿಶೇಷ ಆದ್ಯತೆ ವಹಿಸಿದ್ದು, ಮುಂದೆ ಕ್ಷೇತ್ರದ ಎಲ್ಲ ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಈ ಮೂಲಕ ಅಂತರ್ಜಲವನ್ನು ಪುನಶ್ಚೇತನಗೊಳಿಸಿ ಗ್ರಾಮದ ಕೃಷಿ ಚಟುವಟಿಕೆಗಳಿಗೆ ಪೂರಕ ವಾತಾವರಣ ನಿರ್ಮಿಸಲಾಗುತ್ತದೆ ಎಂದರು. ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ತಾಪಂ ಮಾಜಿ ಉಪಾಧ್ಯಕ್ಷ ಶರತ್ ಕುಮಾರ್ ಬೈಲಕೆರೆ, ತೆಂಕನಿಡಿಯೂರು ಗ್ರಾಪಂ ಮಾಜಿ ಅಧ್ಯಕ್ಷೆ ಗಾಯತ್ರಿ ಸುರೇಶ್, ಮಾಜಿ ಸದಸ್ಯರಾದ ಅರುಣ್ ಜತ್ತನ್, ವಿನೋದ್ ಸುವರ್ಣ, ಸತೀಶ್ ಪೂಜಾರಿ, ಮಾಲಿನಿ ಜತ್ತನ್, ವಿಕಿತ ಸುರೇಶ್, ಪ್ರಶಾಂತ ಹೆಬ್ಬಾರ್, ಗೀತಾ ಶೆಟ್ಟಿ, ಪಕ್ಷದ ಪ್ರಮುಖರಾದ ಉಮೇಶ್ ಪೂಜಾರಿ ಬಡಾನಿಡಿಯೂರು, ಪ್ರಭಾಕರ ತಿಂಗಳಾಯ, ನಾಗರಾಜ ಕುಂದರ್, ಕೃಷ್ಣ ದೇವಾಡಿಗ, ಸತೀಶ್ ನಾಯ್ಕ್, ನವೀನ್ ಕಾಂಚನ್, ಸ್ಥಳೀಯರಾದ ಶಂಕರ್ ಬೈಲಕೆರೆ, ಸುರೇಶ್ ಸಾಲ್ಯಾನ್, ಅಪ್ಪಣ್ಣ ತೊಟ್ಟಂ, ಸುದೀಪ್ ತೊಟ್ಟಂ, ಗುರು ತೊಟ್ಟಂ, ಶಂಕರ್ ಬೈಲಕರೆ, ರವಿ ಬಂಗೇರ, ರಮೇಶ್ ಇದ್ದರು.
ಕೆರೆ ಅಭಿವೃದ್ಧಿ ಮೂಲಕ ಅಂತರ್ಜಲ ಪುನಶ್ಚೇತನ: ಯಶ್ ಪಾಲ್
ತೆಂಕನಿಡಿಯೂರು ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ಸುಮಾರು 4 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ಕುಮ್ಮೆಕೆರೆ ಕಾಮಗಾರಿಯನ್ನು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹಾಲೆರೆದು ಉದ್ಘಾಟಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.