ಸಾರಾಂಶ
ಹಾಸನ ನಗರದ ಎನ್.ಆರ್. ವೃತ್ತದಿಂದ ಚನ್ನಪಟ್ಟಣದ ಹೊಸ ಬಸ್ ನಿಲ್ದಾಣವನ್ನು ಸಂಪರ್ಕಿಸುವ ಮೇಲ್ಸೇತುವೆಯ ಕಾಮಗಾರಿಯನ್ನು ಮಂಗಳವಾರ ಪ್ರಜ್ವಲ್ ರೇವಣ್ಣ ವೀಕ್ಷಣೆ ಮಾಡಿದರು. ಸೇತುವೆಯ ಒಂದು ಭಾಗದ ರಸ್ತೆ ಕೆಲಸ ಮುಗಿಯುವ ಹಂತದಲ್ಲಿದ್ದು, ಡಿಸೆಂಬರ್ ಕೊನೆಯ ವಾರದಲ್ಲಿ ವಾಹನ ಸಂಚಾರಕ್ಕೆ ಲಭ್ಯವಾಗಲಿದೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ನಗರದ ಜನರ ಬಹು ನಿರೀಕ್ಷೆಯ ಮೇಲ್ಸೇತುವೆಯ ಒಂದು ಬದಿ ಡಿಸೆಂಬರ್ ಅಂತ್ಯದ ಕೊನೆಯ ವಾರದಲ್ಲಿ ಕೆಲಸ ಮುಗಿದು ವಾಹನ ಸಂಚಾರಕ್ಕೆ ಲಭ್ಯವಾಗಲಿದೆ ಎಂದು ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ತಿಳಿಸಿದರು. ನಗರದ ಎನ್.ಆರ್. ವೃತ್ತದಿಂದ ಚನ್ನಪಟ್ಟಣದ ಹೊಸ ಬಸ್ ನಿಲ್ದಾಣವನ್ನು ಸಂಪರ್ಕಿಸುವ ಮೇಲ್ಸೇತುವೆಯ ಕಾಮಗಾರಿಯನ್ನು ಮಂಗಳವಾರ ವೀಕ್ಷಣೆ ಮಾಡಿದ ನಂತರ ಮಾತನಾಡಿದ ಅವರು, ಮೇಲು ಸೇತುವೆಯ ಒಂದು ಭಾಗದ ರಸ್ತೆ ಕೆಲಸ ಮುಗಿಯುವ ಹಂತದಲ್ಲಿದ್ದು, ಡಿಸೆಂಬರ್ ಕೊನೆಯ ವಾರದಲ್ಲಿ ವಾಹನ ಸಂಚಾರಕ್ಕೆ ಲಭ್ಯವಾಗಲಿದೆ. ಹಾಸನಾಂಬೆ ಬಾಗಿಲು ತೆಗೆಯುವ ಮೊದಲೆ ಒಂದು ಬದಿ ರಸ್ತೆಯಲ್ಲಿ ಸಂಚಾರ ಮಾಡಲು ಅವಕಾಶ ಕೊಡುವುದಾಗಿ ಹೇಳಲಾಗಿತ್ತು. ಕೆಲ ತಾಂತ್ರಿಕ ದೋಷಗಳಿಂದ ತಡವಾಗಿದೆ ಎಂದರು. ಸೇತುವೆಯ ಮತ್ತೊಂದು ಭಾಗದ ರ್‍ಯಾಂಪ್ ಅಳವಡಿಕೆಗೆ ಅನುದಾನದ ಕೊರತೆಯಿದ್ದು, ರಾಜ್ಯ ಸರ್ಕಾರ ೬೩ ಕೋಟಿ ರು. ಅನುದಾನ ಬಿಡುಗಡೆ ಮಾಡಬೇಕಾಗಿತ್ತು, ಆದರೆ ಇದುವರೆಗೂ ೨೭ ಕೋಟಿ ಮಾತ್ರ ಬಿಡುಗಡೆ ಮಾಡಿದ್ದು, ಉಳಿದ ಅನುದಾನ ಬಿಡುಗಡೆ ಮಾಡುವಂತೆ ಪತ್ರ ಬರೆದರು ಸಹ ರಾಜ್ಯ ಸರ್ಕಾರ ಹಣದ ಕೊರತೆ ಇದೆ ಎಂದು ತಿಳಿಸಿದ್ದಾರೆ. ಉಳಿದ ಅನುದಾನಕ್ಕೆ ನಾನು ಸೇರಿದಂತೆ ಮಾಜಿ ಸಚಿವ ಎಚ್.ಡಿ. ರೇವಣ್ಣ, ಸ್ಥಳೀಯ ಶಾಸಕರಾದ ಎಚ್.ಪಿ. ಸ್ವರೂಪ್ ಸೇರಿ ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿ ಅನುದಾನದ ಬಿಡುಗಡೆಗೆ ಮನವಿ ಮಾಡಲಾಗುವುದು. ಮೇಲ್ಸೇತುವೆ ಕಾಮಗಾರಿಗೆ ಹಣ ಬಿಡುಗಡೆಗೆ ಮಾಡದ ರಾಜ್ಯ ಸರ್ಕಾರ ಹಾಸನ ಜಿಲ್ಲೆಯನ್ನು ಕಡೆಗಣಿಸಿದೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಮತ್ತೊಮ್ಮೆ ಸಾಬೀತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಂಪೂರ್ಣ ಸೇತುವೆ ಕಾಮಗಾರಿ ಪೂರ್ಣಗೊಳ್ಳಲು ಸುಮಾರು ೪೦ ಕೋಟಿ ಹಣದ ಅವಶ್ಯಕತೆ ಇದ್ದು, ಕೇಂದ್ರ ಸರ್ಕಾರದ ಮೊರೆ ಹೋಗುವುದಾಗಿ ತಿಳಿಸಿದರು. ಈ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡರೆ ಬಹುತೇಕ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಲಿದೆ. ಮೇಲು ಸೇತುವೆ ಉದ್ಘಾಟನೆಗಾಗಿ ಕೇಂದ್ರ ರೈಲ್ವೆ ಸಚಿವರನ್ನು ಕರೆಯುವ ಪ್ರಯತ್ನ ಮಾಡಲಾಗುವುದು. ಅವರು ದಿನಾಂಕ ನೀಡಿದ ಸಮಯಕ್ಕೆ ಉದ್ಘಾಟನೆ ಮಾಡಲಾಗುವುದು. ಎಲ್ಲಾ ಸರಿಯಾದ ಸಮಯಕ್ಕೆ ಆದರೇ ಡಿಸೆಂಬರ್ ೩೦ಕ್ಕೆ ಉದ್ಘಾಟನೆ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಇದೆ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್, ಗಿರೀಶ್ ಚನ್ನವೀರಪ್ಪ, ಪಕ್ಷದ ಮುಖಂಡರಾದ ಸ್ವಾಮಿಗೌಡ, ನಗರಸಭೆ ಸದಸ್ಯ ವಾಸುದೇವ್, ಜೆಡಿಎಸ್ ವಕ್ತಾರ ಹೊಂಗೆರೆ ರಘು, ಇತರರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))