ಸಾರಾಂಶ
ಹೊಸನಗರ: ವಿದ್ಯಾರ್ಥಿಗಳು ಕೈಯಲ್ಲಿ ಕುಂಚ ಹಿಡಿದು ತಮ್ಮ ಕಲ್ಪನೆಗಳಿಗೆ ಬಣ್ಣಗಳ ಮೂಲಕ ಜೀವಕಳೆ ತುಂಬಿದರು. ಕನ್ನಡ ನಾಡಿನ ವನಸಿರಿ, ಜರಿ, ಪ್ರಪಾತ, ಮರ ಗಿಡ, ವಿವಿಧ ಪ್ರಾಣಿಗಳು ಹೀಗೆ ವಿವಿಧ ರೂಪದಲ್ಲಿ ಅವರ ಚಿತ್ತಪಟದಿಂದ ಚಿತ್ರಪಟದಲ್ಲಿ ಮನೋಹರವಾಗಿ ಮೂಡುತ್ತಿದ್ದವು. ಒಬ್ಬೊಬ್ಬರು ಒಂದೊಂದು ಅಂಶದ ಕುರಿತು ತಮ್ಮ ಪ್ರತಿಭೆಗೆ ಅನುಗುಣವಾಗಿ ಚಿತ್ರ ಬರೆದರು.
ಪಟ್ಟಣದ ಶ್ರೀರಾಮಕೃಷ್ಣ ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ‘ಕರ್ನಾಟಕ ಅರಣ್ಯ - ಕರ್ನಾಟಕ ವನ್ಯಜೀವಿ’ ಎಂಬ ವಿಷಯದ ಮೇಲೆ ಆಯೋಜಿಸಿದ್ದ ರಾಜ್ಯಮಟ್ಟದ ಮಕ್ಕಳ ಚಿತ್ರಕಲಾ ಸ್ವರ್ಧೆಯ ಭಾಗವಾಗಿ ನಡೆದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯಗಳಿವು.ಕಾರ್ಯಕ್ರಮದ ಅತಿಥಿಗಳಾಗಿದ್ದ ವಲಯ ಅರಣ್ಯಾಧಿಕಾರಿ ಎ.ಜೆ.ಆಂಜನೇಯ ಮಾತನಾಡಿ, ಮಕ್ಕಳ ಚಿತ್ರಗಳನ್ನು ನೋಡುವುದು ಚಂದ, ಅವರ ಮನದಲ್ಲಿ ಮೂಡಿದ ಅಂಶಗಳನ್ನು ಚಿತ್ರರೂಪಕ್ಕೆ ಪರಿವರ್ತಿಸಿ ಚಿತ್ರ ಬರೆಯುತ್ತಾರೆ. ಎಲ್ಲರೂ ಒಂದೇ ರೀತಿ ಬರೆಯುವುದಿಲ್ಲ. ಮಕ್ಕಳ ದಿನಾಚರಣೆಯ ಅಂಗವಾಗಿ ಕನ್ನಡಪ್ರಭ ಪತ್ರಿಕೆಯು ಸಮಗ್ರ ಅರಣ್ಯದ ವಿಷಯವನ್ನು ಆಯ್ದುಕೊಂಡು ಚಿತ್ರಕಲಾ ಸ್ಪರ್ಧೆ ಏರ್ಪಡಿಸಿರುವುದು ಉತ್ತಮ ಧ್ಯೇಯವಾಗಿದೆ. ಅರಣ್ಯ ನಾಶದಿಂದಾಗಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಇನ್ನಾದರೂ ಎಚ್ಚೆತ್ತುಕೊಂಡು ಅರಣ್ಯ ಸಂರಕ್ಷಣೆಗೆ ಎಲ್ಲರೂ ಕೈಜೋಡಿ ಸಲೇಬೇಕಾಗಿದೆ ಎಂದು ಹೇಳಿದರು.
ಈ ಸುಂದರವಾದ ಸ್ವಚ್ಛಂದ ಪರಿಸರದಲ್ಲಿ ಮಕ್ಕಳು ಕುಳಿತು ಪರಿಸರ ಸಂರಕ್ಷಣೆಯ ಕುರಿತು ಚಿತ್ರ ಬರೆಯುತ್ತಿರುವುದು ಅವರಲ್ಲಿ ಪರಿಸರ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಲಿದೆ ಎಂದರು.ಶ್ರೀರಾಮಕೃಷ್ಣ ವಿದ್ಯಾಲಯದ ಮುಖ್ಯೋಪಧ್ಯಾಯ ಆರ್.ರಾಜೇಶ್ ಮಾತನಾಡಿ, ಪ್ರತಿಯೊಂದು ಮಗುವು ಒಬ್ಬ ಶ್ರೇಷ್ಠ ಕಲಾವಿದ. ಮಕ್ಕಳ ಮೊದಲ ಭಾಷೆ ಚಿತ್ರಕಲೆ. ಅವರಿಗೆ ಮೊದಲು ಬರುವುದೇ ಚಿತ್ರಕಲೆ. ನಮ್ಮ ಸಮಾಜದ ಎಲ್ಲ ವರ್ಗಗಳ ಮಕ್ಕಳು ತಾವು ಆಟವಾಡುವುದಕಿಂತ ಹೆಚ್ಚು ಸಮಯವನ್ನು ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುವುದನ್ನು ಕಾಣಬಹುದು ಎಂದರು.
ನಗರದ ಗುರುಶಕ್ತಿ ಸಮೂಹ ಸಂಸ್ಥೆ, ರಾಧಕೃಷ್ಣ ಸಹ್ಯಾದ್ರಿ ಎಲೆಕ್ಟ್ರಿಕಲ್ಸ್, ಶ್ರೀರಾಮಕೃಷ್ಣ ವಿದ್ಯಾಸಂಸ್ಥೆ ಸಹಕಾರದಿಂದ ಕಾರ್ಯಕ್ರಮ ನಡೆಯಿತು.ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ದೀಪಕ್ ಸ್ವರೂಪ್, ಕಸಾಪ ಕಾರ್ಯದರ್ಶಿ ಕೆ.ಜಿ.ನಾಗೇಶ್ ಭಾಗವಹಿಸಿದ್ದರು. ಕನ್ನಡಪ್ರಭ ವಿತರಕ ಡಿ.ರಾಘವೇಂದ್ರ ಕಾರ್ಯಕ್ರಮ ನಿರ್ವಹಿಸಿದರು.
ಫರುಖ್ ಖಾನ್ ಪ್ರಥಮಹೊಸನಗರ ತಾಲೂಕು ಮಟ್ಟದ ಅರ್ಹತಾ ಸುತ್ತಿನ ಸ್ವರ್ಧೆಯಲ್ಲಿ ತಾಲೂಕಿನ ಹದಿನೆಂಟು ವಿವಿಧ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿಂದ ಭಾಗವಹಿಸಿದ್ದ ಮಕ್ಕಳಲ್ಲಿ ಫರುಖ್ ಖಾನ್ ಪ್ರಥಮ ಸ್ಥಾನ, ಧನ್ಯಶ್ರೀ.ಡಿ. ದ್ವಿತೀಯ ಸ್ಥಾನ, ನಕುಲ್ ತೃತೀಯ ಸ್ಥಾನ ಪಡೆದರೆ, ಪವನ್ ಈ, ಚೇತನ್ ಕೆ.ಎಸ್. ಅವರು ಸಮಾಧಾನಕರ ಬಹುಮಾನ ಗಳಿಸುವ ಮೂಲಕ ಜಿಲ್ಲಾಮಟ್ಟದ ಸ್ವರ್ಧೆಗೆ ಆಯ್ಕೆಯಾದರು.
;Resize=(128,128))
;Resize=(128,128))
;Resize=(128,128))