ವೈದ್ಯಕೀಯ ಕ್ಷೇತ್ರದಲ್ಲಿ ಶುಶ್ರೂಷಕ ವೃತ್ತಿ ಪವಿತ್ರ ಸೇವೆ

| Published : Feb 18 2024, 01:32 AM IST

ವೈದ್ಯಕೀಯ ಕ್ಷೇತ್ರದಲ್ಲಿ ಶುಶ್ರೂಷಕ ವೃತ್ತಿ ಪವಿತ್ರ ಸೇವೆ
Share this Article
  • FB
  • TW
  • Linkdin
  • Email

ಸಾರಾಂಶ

ರೋಗಿಗಳ ಚೇತರಿಕೆಯಲ್ಲಿ ಶೂಶ್ರೂಷಕ ಸಿಬ್ಬಂದಿ ಪಾತ್ರ ಬಹು ಮುಖ್ಯ. ರೋಗಿಗಳನ್ನು ಕುಟುಂಬ ಸದಸ್ಯರಂತೆ ಕಂಡು, ಶಾಂತಚಿತ್ತದಿಂದ ಸಂತೈಷಿ,

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಶುಶ್ರೂಷಕ ವೃತ್ತಿ ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸುವ ಪವಿತ್ರ ಸೇವೆ. ಇಂತಹ ಶ್ರೇಷ್ಠ ವೃತ್ತಿಯನ್ನು ಆಯ್ದುಕೊಂಡಿರುವ ವಿದ್ಯಾರ್ಥಿಗಳು ಶಿಕ್ಷಣಾವಧಿಯಲ್ಲಿ ವೃತ್ತಿ ಬಗೆಗಿನ ಎಲ್ಲ ಕೌಶಲಗಳನ್ನು, ಜ್ಞಾನ ಪಡೆದು ರೋಗಿಗಳ ಸೇವೆಗೆ ಅಣಿಯಾಗಬೇಕು ಎಂದು ಹೆಚ್ಚುವರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಪ್ಪಾ ಎಸ್. ಗಡೆದ ಹೇಳಿದರು.

ಅವರು ಶನಿವಾರ ಪಟ್ಟಣದ ಕೆಎಲ್‌ಇ ಸಂಸ್ಥೆಯ ಬಿ.ಎಸ್ಸಿ. ನರ್ಸಿಂಗ್‌ ಕಾಲೇಜಿನ ಪ್ರಥಮ ವರ್ಗದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ದೀಪ ಬೆಳಗಿಸುವ ಮತ್ತು ಪ್ರಮಾಣವಚನ ಸ್ವೀಕಾರ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ರೋಗಿಗಳ ಚೇತರಿಕೆಯಲ್ಲಿ ಶೂಶ್ರೂಷಕ ಸಿಬ್ಬಂದಿ ಪಾತ್ರ ಬಹು ಮುಖ್ಯ. ರೋಗಿಗಳನ್ನು ಕುಟುಂಬ ಸದಸ್ಯರಂತೆ ಕಂಡು, ಶಾಂತಚಿತ್ತದಿಂದ ಸಂತೈಷಿ, ಅವರಿಗೆ ವೈದ್ಯಕೀಯ ಸೇವೆ ನೀಡುವ ಜೊತೆಗೆ ಆತ್ಮಸ್ಥೈರ್ಯ ತುಂಬ ಬೇಕು. ಶುಶ್ರೂಷಕರಿಂದ ಆಗುವ ಒಂದು ತಪ್ಪೂ ರೋಗಿಯ ಜೀವದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದ್ದು, ತುಂಬ ಜಾಗರೂಕತೆಯಿಂದ ಸೇವೆ ಸಲ್ಲಿಸಬೇಕು.ಶುಶ್ರೂಷಕ ಪದವಿ ಪಡೆದವರು ಆಸ್ಪತ್ರೆ, ಸಮುದಾಯ, ಸ್ಪರ್ಧಾತ್ಮಕ ಪರಿಕ್ಷೆಗಳು, ಸರ್ಕಾರಿ ಉನ್ನತ ಅಧಿಕಾರಿಗಳಾಗಿ ಸೇವೆ ಸಲ್ಲಿಸಬಹುದು ಎಂದು ಹೇಳಿದರು.

ಅಥಿತಿಗಳಾಗಿ ಆಗಮಿಸಿದ ಚಿಕ್ಕೋಡಿ ತಾಲೂಕು ಆರೋಗ್ಯ ಅಧಿಕಾರಿ ಡಾ. ಸುಕುಮಾರ ಭಾಗಾಯಿ ಮಾತನಾಡಿ, ವಿದ್ಯಾರ್ಥಿಗಳು ಇಂದು ಬೆಳಗಿಸಿದ ದೀಪವು ಸಹಾನುಭೂತಿ ಮತ್ತು ಸಮರ್ಪಣೆ ಸಂಕೇತಿಸುತ್ತದೆ. ಕಲಿಕೆಯ ಸಮಯದಲ್ಲಿ ತಮ್ಮನ್ನು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ಒಳ್ಳೆಯ ದಾಯಾದಿಗಳಾಗಿ ಹೊರಹೊಮ್ಮಿ . ಶೈಕ್ಷಣಿಕ ಅವಧಿಯಲ್ಲಿ ಹೆಚ್ಚಿನ ಪ್ರಾಯೋಗಿಕ ಜ್ಞಾನ ಪಡೆಯ ಬೇಕು ಎಂದು ಕಿವಿ ಮಾತು ಹೇಳಿದರು.ಅಧ್ಯಕ್ಷತೆ ವಹಿಸಿದ ಕೆಎಲ್‌ಇ ಸಂಸ್ಥೆಯ ಅಜೀವ ಸದಸ್ಯ ಪ್ರಾಚಾರ್ಯ ಡಾ.ಪ್ರಸಾದ ರಾಂಪುರೆ ಮಾತನಾಡಿ, ಆಸ್ಪತ್ರೆಯಲ್ಲಿ ಒಬ್ಬ ರೋಗಿಯೊಂದಿಗೆ ಡಾಕ್ಟರಗಿಂತ ಹೆಚ್ಚಿನ ಸಮಯ ದಾಯಾದಿ ನೀಡುತ್ತಾರೆ, ಆದ್ದರಿಂದ ಚಿಕಿತ್ಸೆಯಲ್ಲಿ ತಮ್ಮ ಪಾತ್ರ ಮಹತ್ವದ್ದು. ದಾಯಾದಿಗಳ ಭರವಸೆಯ ಮಾತು ರೋಗಿಯನ್ನ ಗುಣಪಡಿಸುತ್ತದೆ. ನರ್ಸಿಂಗ್‌ನವರಿಗೆ ವಿದೇಶದಲ್ಲಿ ಸಾಕಷ್ಟು ಉದ್ಯೋಗಾವಕಾಶ ಲಭ್ಯವಿದೆ. ನೀವು ಉತ್ತಮ ಸಂವಹನ ಕಲೆ ಬೆಳೆಸಿಕೊಳ್ಳಬೇಕು. ರೋಗಿಯನ್ನ ತಮ್ಮವರೆಂದು ತಿಳಿದು ಆರೈಕೆ ಮಾಡಬೇಕು ಎಂದರು.

ಉಪನ್ಯಾಸಕ ಮಲಕಾರಿ ಘಸ್ತೆ, ಸೋಲಾಲಿ ರಾಥೊಡ, ಸಾಕ್ಷಿ ಬಡಕೆ, ಪ್ರಾಚಾರ್ಯ ಪಿ. ವೆಂಕಟರೆಡ್ಡಿ, ಡಾ. ಸಚೀನ ಮೆಕ್ಕಳಕಿ ಇದ್ದರು. ಪ್ರಾಚಾರ್ಯ ಡಾ. ಸುನೀಲ್ ಎಂ. ಬಿ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾ ಅರಭಾವಿ, ಅನಿತಾ ಬಿರಾಜ ನಿರೂಪಿಸಿದರು. ಉಪನ್ಯಾಸಕ ಸಚಿನ ಸುಬ್ಬಗೌಡರ ವಂದಿಸಿದರು.