ಸಾರಾಂಶ
ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಡೆದಂತಹ ಹಿಂದುಗಳ ಮೇಲಿನ ಭೀಕರ ಹತ್ಯಾಕಾಂಡ ಹಾಗೂ ಈ ಹಿಂದೆ ಕಾಶ್ಮೀರದ ಹಿಂದೂಗಳ ಮೇಲೆ ನಡೆದ ನರಮೇಧವನ್ನು ಕಣ್ಣಮುಂದೆ ತಂದೊಡ್ಡಿದ್ದು, ನಮ್ಮ ದೇಶದಲ್ಲಿ ಅಶಾಂತಿಯನ್ನು ಮೂಡಿಸಿ ಭಾರತ ದೇಶವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುವುದು. ಪಕ್ಕದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಕುತಂತ್ರಕ್ಕೆ ಅಮಾಯಕ ಹಿಂದೂಗಳು ಬಲಿಯಾಗುತ್ತಿದ್ದಾರೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ನಮ್ಮ ದೇಶಕ್ಕೆ ಬಂದಿರುವ ಅಕ್ರಮ ವಲಸಿಗರೇ ಮೂಲ ಕಾರಣವಾಗಿದ್ದಾರೆ ಎಂದರು.
ಕನ್ನಡಪ್ರಭ ವಾರ್ತೆ ಹಾಸನ
ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿರುವ ಅಕ್ರಮ ವಲಸಿಗರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿ ರಾಜ್ಯ ವಿಕಾಸ ಟ್ರಸ್ಟ್ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಡೆದಂತಹ ಹಿಂದುಗಳ ಮೇಲಿನ ಭೀಕರ ಹತ್ಯಾಕಾಂಡ ಹಾಗೂ ಈ ಹಿಂದೆ ಕಾಶ್ಮೀರದ ಹಿಂದೂಗಳ ಮೇಲೆ ನಡೆದ ನರಮೇಧವನ್ನು ಕಣ್ಣಮುಂದೆ ತಂದೊಡ್ಡಿದ್ದು, ನಮ್ಮ ದೇಶದಲ್ಲಿ ಅಶಾಂತಿಯನ್ನು ಮೂಡಿಸಿ ಭಾರತ ದೇಶವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುವುದು. ಪಕ್ಕದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಕುತಂತ್ರಕ್ಕೆ ಅಮಾಯಕ ಹಿಂದೂಗಳು ಬಲಿಯಾಗುತ್ತಿದ್ದಾರೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ನಮ್ಮ ದೇಶಕ್ಕೆ ಬಂದಿರುವ ಅಕ್ರಮ ವಲಸಿಗರೇ ಮೂಲ ಕಾರಣವಾಗಿದ್ದಾರೆ ಎಂದರು.
ಮೊದಲು ಅವರು ಅಕ್ರಮವಾಗಿ ದೇಶದೊಳಗೆ ನುಸುಳಿ ನಮ್ಮ ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಬೇಲೂರು ತಾಲ್ಲೂಕಿನ ಕಾಫಿ ತೋಟಗಳಲ್ಲಿ ಕೆಲಸ ಮಾಡಿಕೊಂಡು ಈಗ ತೋಟದ ಮಾಲೀಕರನ್ನೆ ಎದುರಿಸುವ ಮಟ್ಟಿಗೆ ಬೆಳೆದು ನಿಂತಿದ್ದಾರೆ. ಅದಕ್ಕೆ ಮೂಲ ಕಾರಣ ಇಲ್ಲಿರುವ ಕೆಲವು ಕಿಡಿಗೇಡಿಗಳು ಅವರಿಗೆ ಎಲ್ಲಾ ರೀತಿಯ ದಾಖಲಾತಿಗಳನ್ನು ವ್ಯವಸ್ಥೆ ಮಾಡಿ ಅವರಿಗೆ ವಾಸ್ತವ್ಯ ಹಾಗೂ ಆರ್ಥಿಕ ಸಹಾಯವನ್ನು ಮಾಡಿಕೊಡುತ್ತಿರುವುದು ಎಂದು ದೂರಿದರು. ಕಾಶ್ಮೀರದಲ್ಲಿ ನಡೆದ ಘಟನೆ ದೇಶದ ಎಲ್ಲಾ ಕಡೆಯೂ ನಡೆಯುವ ಎಲ್ಲಾ ಸೂಚನೆಯೂ ಕಾಣುತ್ತಿದೆ. ಹಾಗಾಗಿ ಅದನ್ನು ತಡೆಗಟ್ಟುವ ಜವಾಬ್ದಾರಿಯು ನಮ್ಮೆಲ್ಲರ ಮತ್ತು ಮುಖ್ಯವಾಗಿ ಜಿಲ್ಲಾಡಳಿತದ್ದಾಗಿದ್ದು ತಾವು ಕೂಡಲೇ ನಮ್ಮ ಜಿಲ್ಲೆಯಲ್ಲಿರುವ ನುಸುಳುಕೋರರನ್ನು ಮತ್ತು ಸಂಶಯಕಾರರನ್ನು ಕಂಡುಹಿಡಿದು ಅವರ ಮೇಲೆ ಕಠಿಣ ಕ್ರಮ ಜರುಗಿಸಿ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಮನವಿ ಮಾಡಿದರು.ಇದೇ ವೇಳೆ ರಾಜ್ಯ ವಿಕಾಸ ಟ್ರಸ್ಟ್ ನ ಪ್ರಭುಗೌಡ, ಅವಿನಾಶ್ ಜಿ.ಎಸ್, ಶ್ಯಾಮ್‌ಸುಂದರ್, ರಿಲಯನ್ಸ್ ಲೋಕೇಶ್, ಮಾರುತಿ, ಗಣೇಶ್, ಕಾಂತರಾಜು, ಇತರರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))