ಪೋಷಕರು ಮಕ್ಕಳಿಗೆ ಬಾಂಧವ್ಯಗಳ ಬಗ್ಗೆ ತಿಳಿಸಿ

| Published : Feb 05 2025, 12:32 AM IST

ಸಾರಾಂಶ

ಪೋಷಕರು ಮಕ್ಕಳಿಗೆ ಮೊದಲು ಬಾಂಧವ್ಯದ ಸಂಸ್ಕಾರವನ್ನು ಕಲಿಸುವುದು ಉತ್ತಮವಾಗಿದೆ ಎಂದು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲೇಶ್‌ ಗೌಡ ತಿಳಿಸಿದ್ದಾರೆ. ಪೋಷಕರು ತಮ್ಮ ಮನೆಗಳಲ್ಲಿ ಸಂಸ್ಕಾರದ ಬಾಂಧವ್ಯಗಳನ್ನು ಮಕ್ಕಳಿಗೆ ಕಲಿಸುವುದು ಉತ್ತಮವಾಗಿದೆ. ಜೊತೆಗೆ ಅದರಲ್ಲೂ ಈಗಿನ ಕಾಲದಲ್ಲಿ ಮಕ್ಕಳು ಒಂದು ಕಡೆ, ಪೋಷಕರು ಒಂದು ಕಡೆ ಇರುವುದನ್ನು ನಾವು ನೋಡುತ್ತಿದ್ದೇವೆ ಇವರ ಇಬ್ಬರ ನಡುವಿನ ಸಂಬಂಧಗಳು ಬಾಂಧವ್ಯಗಳು ಬಹು ಗಟ್ಟಿತನವಾಗಿ ಉಳಿಯಲು ಪ್ರಯತ್ನಗಳು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪೋಷಕರು ಮಕ್ಕಳಿಗೆ ಮೊದಲು ಬಾಂಧವ್ಯದ ಸಂಸ್ಕಾರವನ್ನು ಕಲಿಸುವುದು ಉತ್ತಮವಾಗಿದೆ ಎಂದು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲೇಶ್‌ ಗೌಡ ತಿಳಿಸಿದ್ದಾರೆ.ಪಟ್ಟಣದ ರಾಘವೇಂದ್ರ ಸ್ವಾಮಿ ರಸ್ತೆಯಲ್ಲಿರುವ ಪ್ರತಿಮಾ ಟ್ರಸ್ಟ್ ವತಿಯಿಂದ ನಡೆದ ಪ್ರತಿಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಪೋಷಕರು ಮಕ್ಕಳಿಗೆ ಮೊದಲು ಬಾಂಧವ್ಯದ ಸಂಸ್ಕಾರವನ್ನು ಕಲಿಸುವುದು ಉತ್ತಮವಾಗಿದೆ. ಏಕೆಂದರೆ ಇಂದು ಅಪ್ಪ, ಅಮ್ಮ, ಚಿಕ್ಕಪ್ಪ, ಸೋದರ ಮಾವ ಇವುಗಳ ಬಾಂಧವ್ಯಗಳನ್ನು ಮರೆತು ಎಲ್ಲರನ್ನೂ ಒಂದೇ ಸಮನಾಗಿ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ, ಅದರಲ್ಲೂ ಸಂಬಂಧಗಳು ಭಾರಿ ಸೂಕ್ಷ್ಮವಾಗಿವೆ ಇಂಥ ಸಂಬಂಧಗಳಿಗೆ ಅರ್ಥ ಬದ್ಧವಿಲ್ಲದ ಮಾತುಗಳ ಆಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಪೋಷಕರು ತಮ್ಮ ಮನೆಗಳಲ್ಲಿ ಸಂಸ್ಕಾರದ ಬಾಂಧವ್ಯಗಳನ್ನು ಮಕ್ಕಳಿಗೆ ಕಲಿಸುವುದು ಉತ್ತಮವಾಗಿದೆ. ಜೊತೆಗೆ ಅದರಲ್ಲೂ ಈಗಿನ ಕಾಲದಲ್ಲಿ ಮಕ್ಕಳು ಒಂದು ಕಡೆ, ಪೋಷಕರು ಒಂದು ಕಡೆ ಇರುವುದನ್ನು ನಾವು ನೋಡುತ್ತಿದ್ದೇವೆ ಇವರ ಇಬ್ಬರ ನಡುವಿನ ಸಂಬಂಧಗಳು ಬಾಂಧವ್ಯಗಳು ಬಹು ಗಟ್ಟಿತನವಾಗಿ ಉಳಿಯಲು ಪ್ರಯತ್ನಗಳು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸಿ. ಎನ್. ಅಶೋಕ್ ಮಾತನಾಡಿ, ಮಕ್ಕಳಿಗೆ ಮೊದಲು ಸಂಸ್ಕಾರ ಕಲಿಸುವುದು ಸೂಕ್ತವಾಗಿದೆ. ಸಂಸ್ಕಾರ ಇಲ್ಲದ ಮಕ್ಕಳ ಪರಿಸ್ಥಿತಿ ಬಹಳಷ್ಟು ಕಠಿಣ ಶ್ರಮವಾಗಿದೆ. ಈ ಕಠಿಣ ಸಮಯದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೂ ಕೂಡ ಬಹಳಷ್ಟು ತೊಂದರೆ ಉಂಟಾಗುತ್ತಿದೆ. ಸಂಸ್ಕಾರ ಎಂಬುದು ಒಂದು ರೀತಿ ತೋರ್ಪಡಿಕೆ ಮಾತುಗಳಲ್ಲ ನಾವು ನಡೆದುಕೊಳ್ಳುವ ರೀತಿ ಮತ್ತು ಆಡುವ ಮಾತುಗಳಿಂದ ನಮ್ಮ ಸಂಸ್ಕಾರವನ್ನು ಅಳೆಯಬಹುದಾಗಿದೆ. ಇಂತಹ ಸಂಸ್ಕಾರಗಳ ಮಾರ್ಗದರ್ಶನ ಮತ್ತು ಕಲೆಯ ಮೂಲಕ ತೋರ್ಪಡಿಸುತ್ತಿರುವ ಪ್ರತಿಮಾ ಟ್ರಸ್ಟ್ ರಂಗಲೋಕ ಸದಸ್ಯರಿಗೆ ಅಭಿನಂದನೆಗಳು ಎಂದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಮೇಶ್, ಸರ್ಕಾರಿ ಪ್ರೌಢಶಾಲೆ ಪೇಟೆ ಮುಖ್ಯ ಶಿಕ್ಷಕಿ ನೇತ್ರಾವತಿ, ಸರ್ಕಾರಿ ಪ್ರಾಥಮಿಕ ಪಾಠಶಾಲೆ ಮುಖ್ಯ ಶಿಕ್ಷಕ ಪ್ರಕಾಶ್, ಪ್ರತಿಮಾ ಟ್ರಸ್ಟ್ ಅಧ್ಯಕ್ಷ ಉಮೇಶ್ ತೆಂಕನಹಳ್ಳಿ, ಸಂಚಾಲಕ ನಾಗೇಶ್ ಮುಂತಾದವರು ಹಾಜರಿದ್ದರು.