ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡಲಗಿತಾಲೂಕಿನ ಕುಲಗೋಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಶಾಂತವ್ವ ಬೆಳಗಲಿ, ಉಪಾಧ್ಯಕ್ಷರಾಗಿ ರಾಮಣ್ಣ ಕುರಬಚನ್ನಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿತ್ತು. ಈ ಕಾರಣಕ್ಕೆ ಅವಿರೋಧ ಆಯ್ಕೆಯಾಗಿದೆ ಎಂದು ರಿರ್ಟನಿಂಗ್ ಅಧಿಕಾರಿ ಬಿ.ಕೆ.ಗೋಖಲೆ ಹೇಳಿದರು.ಮುಖಂಡ ಬಸನಗೌಡ ಪಾಟೀಲ ಮಾತನಾಡಿ, ಬಾಲಚಂದ್ರ ಜಾರಕಿಹೊಳಿ ಆದೇಶದಂತೆ ನಾವು ಚುನಾವಣೆ ಮಾಡಿ 12 ಸ್ಥಾನಕ್ಕೆ 12 ಆಯ್ಕೆಯಾಗಿದ್ದು, ಇಂದು ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನ ಅವಿರೋದ ಆಯ್ಕೆ ಮಾಡಿದ್ದೇವೆ. ಮುಂದೆ ಎಲ್ಲರೂ ರೈತರ ಪರ ಕೆಲಸ ಮಾಡಬೇಕು ಎಂದು ಕೋರಿದರು. ಈ ಸಂದರ್ಭದಲ್ಲಿ ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಅಶೋಕ ನಾಯಿಕ, ಬಸನಗೌಡ ಪಾಟೀಲ, ಸುಭಾಸ ವಂಟಗೋಡಿ. ಭೀಮಶಿ ಪೂಜೇರಿ. ಗ್ರಾಪಂ ಅಧ್ಯಕ್ಷ ತಮ್ಮಣ್ಣಾ ದೇವರ. ಪ್ರಶಾಂತ ವಂಟಗೋಡಿ. ಮುರಗೆಪ್ಪ ಯಕ್ಸಂಬಿ. ದತ್ತು ಕುಲಕರ್ಣಿ. ಬಸವಣೆಪ್ಪ ತಿಪ್ಪಿಮನಿ. ಜಗದೀಶ ಬೆಳಗಲಿ.ರಮೇಶ ಚನ್ನಾಳ. ಅಲ್ಲಪ್ಪ ಪರುಶೆಟ್ಟಿ. ಬಸಪ್ಪ ಯಕ್ಸಂಬಿ. ಶ್ರೀಪತಿ ಗಣಿ. ಮಾರುತಿ ಬಾಗಿಮನಿ. ಸದಾಶಿವ ಗುಡಗುಡಿ. ಕಸ್ತೂರೆವ್ವ ಕೊಪ್ಪದ. ಮಹಾದೇವ ಕೊಪ್ಪದ. ಯಮನಪ್ಪ ಸಣ್ಣಮೇತ್ರಿ. ಬಸು ಬಿಲಕುಂದಿ ಹಾಗೂ ಗ್ರಾಪಂ ಸದಸ್ಯರು. ಪಿ.ಕೆ.ಪಿ.ಎಸ್ ನೂತನ ಸದಸ್ಯರು ಗ್ರಾಮದ ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.