ಪಟ್ಟಣದಲ್ಲಿ ವಿಸ್ತರಣೆ ಆಗುತ್ತಿರುವ ಮುಖ್ಯ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳಿದ್ದವರಿಗೆ ಸರ್ಕಾರದಿಂದ ಪರಿಹಾರದ ಹಣ ಬಂದ ತಕ್ಷಣ ನೀಡಿ ೬೯ ಅಡಿವರೆಗೆ ತೆರವುಗೊಳಿಸುವ ಕಾರ್ಯದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತಿಲ್ಲ. ರಸ್ತೆ ಅಗಲೀಕರಣಕ್ಕೆ ಸ್ಪಂದಿಸದ, ಮಾತು ಕೇಳದ ಏಳೆಂಟು ವರ್ತಕರಿಗೆ ಖಾರ ಮತ್ತು ಮಸಾಲೆ ರೆಡಿ ಮಾಡಿಕೊಂಡಿದ್ದೇನೆ ಎಂದು ಶಾಸಕ ಬಿ.ದೇವೇಂದ್ರಪ್ಪ ನೇರ ಎಚ್ಚರಿಕೆ ನೀಡಿದರು.

ಜಗಳೂರು: ಪಟ್ಟಣದಲ್ಲಿ ವಿಸ್ತರಣೆ ಆಗುತ್ತಿರುವ ಮುಖ್ಯ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳಿದ್ದವರಿಗೆ ಸರ್ಕಾರದಿಂದ ಪರಿಹಾರದ ಹಣ ಬಂದ ತಕ್ಷಣ ನೀಡಿ ೬೯ ಅಡಿವರೆಗೆ ತೆರವುಗೊಳಿಸುವ ಕಾರ್ಯದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತಿಲ್ಲ. ರಸ್ತೆ ಅಗಲೀಕರಣಕ್ಕೆ ಸ್ಪಂದಿಸದ, ಮಾತು ಕೇಳದ ಏಳೆಂಟು ವರ್ತಕರಿಗೆ ಖಾರ ಮತ್ತು ಮಸಾಲೆ ರೆಡಿ ಮಾಡಿಕೊಂಡಿದ್ದೇನೆ ಎಂದು ಶಾಸಕ ಬಿ.ದೇವೇಂದ್ರಪ್ಪ ನೇರ ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ಶನಿವಾರ ಡಾ.ಅಂಬೇಡ್ಕರ್ ೬೯ನೇ ಮಹಾಪರಿನಿರ್ವಾಣ ದಿನಾಚರಣೆ ಅಂಗವಾಗಿ ಮಾನವ ಬಂಧುತ್ವ ವೇದಿಕೆ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟಗಳ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದರು. ಪಟ್ಟಣದಲ್ಲಿ ವಿಸ್ತರಣೆ ಆಗುತ್ತಿರುವ ಮುಖ್ಯ ರಸ್ತೆ ಅಗಲೀಕರಣಕ್ಕೆ ಸ್ಪಂದಿಸದ ವರ್ತಕರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬೇಡಿ ಎಂದು ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿ.ಲೋಕ್ಯಾನಾಯ್ಕ್ ಗೆ ಸೂಚನೆ ನೀಡಿದರು.

ಕಾನೂನು ಸುಮ್ಮನೆ ಬಿಡೋದಿಲ್ಲ:

ಮುಖ್ಯ ರಸ್ತೆ ವಿಸ್ತರಣೆ ಸಂಬಂಧ ಕಾನೂನು ಉಲ್ಲಂಘಿಸಿ ಅರೆಬರೆ ಮಳಿಗೆ ತೆರವುಗೊಳಿಸಿಕೊಂಡು ಪುನಃ ಹೊಸ ಅಂಗಡಿ ಪೂಜೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದ ನವಚೇತನ ಕಾರ್ಮೆಂಟ್ಸ್‌ಗೆ ಭೇಟಿ ನೀಡಿದ ಶಾಸಕರು ವರ್ತಕನಿಗೆ ತರಾಟೆ ತೆಗೆದುಕೊಂಡರು. ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಯಾವುದೇ ಕಾರಣಕ್ಕೂ ವ್ಯಾಪಾರ ಮಾಡಲು ಅವಕಾಶ ನೀಡಬೇಡಿ. ಸರ್ಕಾರದ ಜಾಗ ಎಲ್ಲಿಯವರೆಗೆ ಇದೆಯೋ ಅಲ್ಲಿಯವರೆಗೂ ತೆರವುಗೊಳಿಸಿ. ಅಂಬೇಡ್ಕರ್ ಒಂದು ವರ್ಗಕ್ಕೆ ಸೀಮಿತವಲ್ಲ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಯಾರೇ ತಪ್ಪು ಮಾಡಿದರೂ ಕಾನೂನು ಸುಮ್ಮನೆ ಬಿಡುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ, ಇನ್‌ಸ್ಪೆಕ್ಟರ್ ಸಿದ್ರಾಮಯ್ಯ, ಚೀಫ್ ಆಫೀಸರ್ ಸಿ.ಲೋಕ್ಯಾನಾಯ್ಕ್, ವಕೀಲ ಸಂಘದ ಅಧ್ಯಕ್ಷ ಟಿ.ಬಸವರಾಜ್, ಸಾಹಿತಿ ಎನ್.ಟಿ. ಎರ್ರಿಸ್ವಾಮಿ, ವಕೀಲ ಆರ್.ಓಬಳೇಶ್,. ಬಿಸ್ತುವಳ್ಳಿ ಬಾಬು, ಕುಬೇಂದ್ರಪ್ಪ, ಕುಮಾರ್, ಇಂದಿರಮ್ಮ, ಗೌರಿಪುರ ಸತ್ಯಮೂರ್ತಿ, ಪ್ರೊ.ನಾಗಲಿಂಗಪ್ಪ, ಬರ್ಕತ್ ಆಲಿ ಇದ್ದರು.