(ಮಿಡಲ್‌) ಪೋಲಿಯೋ ಮುಕ್ತ ಭಾರತಕ್ಕೆ ರೋಟರಿ ಕೊಡುಗೆ ಅಪಾರ

| Published : Oct 25 2024, 01:11 AM IST

(ಮಿಡಲ್‌) ಪೋಲಿಯೋ ಮುಕ್ತ ಭಾರತಕ್ಕೆ ರೋಟರಿ ಕೊಡುಗೆ ಅಪಾರ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ನಗರದ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ರೋಟರಿ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪೋಲಿಯೋ ದಿನಾಚರಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪೋಲಿಯೋ ಮುಕ್ತ ಭಾರತಕ್ಕೆ ರೋಟರಿ ಸಂಸ್ಥೆಗಳ ಕೊಡುಗೆ ಅಪಾರ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ.ಪಿ.ನಾರಾಯಣ್ ಹೇಳಿದರು.

ನಗರದ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ರೋಟರಿ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪೋಲಿಯೋ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ರೋಟರಿ ಸಂಸ್ಥೆಗಳ ಕೊಡುಗೆಯಿಂದ ಪ್ರತಿ ಮಗುವಿಗೂ ಲಸಿಕೆ ಸಿಗುವಂತಾಗಿದ್ದು, ಇಂದು ಭಾರತ ಪೋಲಿಯೋ ಮುಕ್ತವಾಗಿದೆ ಎಂದು ತಿಳಿಸಿದರು.

ಕಳೆದ ಹತ್ತು ವರ್ಷಗಳಿಂದ ದೇಶದಲ್ಲಿ ಒಂದೇ ಒಂದು ಪೋಲಿಯೋ ಪ್ರಕರಣ ಪತ್ತೆಯಾಗಿಲ್ಲ. ಪೋಲಿಯೋ ಮುಕ್ತ ವಿಶ್ವದ ಕನಸು ನನಸಾಗುವ ಭರವಸೆ ಹೆಚ್ಚಾಗಿದೆ. ಪೋಲಿಯೋ ಮುಕ್ತ ಭಾರತ ಒಂದು ಮಹಾನ್ ಸಾಧನೆ. ಇದು ರೋಟರಿಯ ಹೆಮ್ಮೆಯ ಸಾಧನೆ. ಪೋಲಿಯೋ ಲಸಿಕೆ ಸಂಶೋಧಕ ಡಾ.ಜನಾಸ್ ಸಾಲ್ಕ್ ಜನ್ಮದಿನದಂದು ವಿಶ್ವ ಪೋಲಿಯೋ ದಿನ ಆಚರಿಸಲಾಗುತ್ತಿದೆ ಎಂದ ಅವರುಮ ಈವರೆಗೂ ಪೋಲಿಯೋ ನಿರ್ಮೂಲನೆಗೆ ರೋಟರಿ ಸಂಸ್ಥೆಯು ವಿಶ್ವಾದ್ಯಂತ ಸಾವಿರಾರು ಕೋಟಿ ರು. ಹಣ ವಿನಿಯೋಗಿಸಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಸ್.ನಟರಾಜ್ ಮಾತನಾಡಿ, ಇಂದು ನಮ್ಮ ದೇಶದಲ್ಲಿ ಪೋಲಿಯೋ ಇಲ್ಲವಾಗಿದ್ದು, ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಕೊಡುಗೆ ಹೆಚ್ಚಿದೆ ಎಂದು ತಿಳಿಸಿದರು.

ಜಿಲ್ಲಾ ಆರ್‌ಸಿಎಚ್‌ಒ ಡಾ.ಮಲ್ಲಪ್ಪ ಮಾತನಾಡಿ, 40 ವರ್ಷಗಳ ಸತತ ಪರಿಶ್ರಮ, ನಿಷ್ಠೆಯಿಂದ ಲಸಿಕಾ ಕಾರ್ಯಕ್ರಮ ನಿರ್ವಹಣೆಯಿಂದ 2024ರ ಹೊತ್ತಿಗೆ ವಿಶ್ವದ ಬಹುಭಾಗ ಪೋಲಿಯೋ ಮುಕ್ತವಾಗಿದೆ. 2024ರಲ್ಲಿ ವಿಶ್ವದಲ್ಲಿ 46 ಮಕ್ಕಳಲ್ಲಿ ಮಾತ್ರ ಪೋಲಿಯೋ ಕಾಣಿಸಿಕೊಂಡಿದ್ದು, ಎರಡು ದೇಶಗಳಲ್ಲಿ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಲ್ಲಿ ಮಾತ್ರ ಪೋಲಿಯೋ ನಿರಂತರವಾಗಿ ಉಳಿದಿದೆ ಎಂದು ನುಡಿದರು.

ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ಗುಡದಪ್ಪ ಕಸಬಿ ಮಾತನಾಡಿದರು. ಸಹಾಯಕ ಗವರ್ನರ್ ಎಸ್.ಆರ್.ನಾಗರಾಜ್, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ. ಶ್ರೀಧರ್, ಡಾ.ಶಂಭುಲಿಂಗ, ಮಾಜಿ ಗವರ್ನರ್ ಎ.ಎಸ್.ಚಂದ್ರಶೇಖರ್, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಯು.ರವೀಂದ್ರನಾಥ್ ಐತಾಳ್, ಆನಂದಮೂರ್ತಿ ಹಾಗೂ ಶಿವಮೊಗ್ಗ ನಗರದ ಎಂಟು ರೋಟರಿ ಕ್ಲಬ್‌ಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಸದಸ್ಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.