ಮಕ್ಕಳ ವ್ಯಕ್ತಿವ ವಿಕಸನಕ್ಕೆ ‘ಸಚೇತನ’

| Published : Sep 05 2025, 01:00 AM IST

ಸಾರಾಂಶ

ಮಕ್ಕಳು ಪ್ರಾರ್ಥನಾ ಅವಧಿಯಲ್ಲಿ ಪ್ರಸ್ತುತಪಡಿಸುವ ಚಟುವಟಿಕೆಗಳನ್ನು ಒಂದು ವಾರ ಮುಂಚಿತವಾಗಿ ಮುಖ್ಯಶಿಕ್ಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು, ಕ್ಯಾಲೆಂಡರ್‌ನಲ್ಲಿ ನೀಡಿದ ಒಂದು ಕ್ಷೇತ್ರಕ್ಕೆ ಸಂಬಂಧಿಸಿದ ವಾರದ ಚಟುವಟಿಕೆಗಳನ್ನು ಮಕ್ಕಳಿಂದ ಮಾಡಿಸಬೇಕು. ತರಗತಿಯ ಪ್ರತಿಯೊಬ್ಬ ವಿದ್ಯಾರ್ಥಿಗೂ ಅವಕಾಶವನ್ನು ನೀಡಬೇಕು.

ಕನ್ನಡಪ್ರಭ ವಾರ್ತೆ ಕೋಲಾರಮಕ್ಕಳಲ್ಲಿ ವ್ಯಕ್ತಿತ್ವ ವಿಕಸನ, ನಾಯಕತ್ವಗುಣ, ಭಾಷಾ ಬೆಳವಣಿಗೆಗೆ ಸಹಕಾರಿಯಾಗಿರುವ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ಸಚೇತನ ಕಾರ್ಯಕ್ರಮವನ್ನು ಶಾಲಾ ಪ್ರಾರ್ಥನಾ ವೇಳೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಿ ಎಂದು ಸಚೇತನ ಕಾರ್ಯಕ್ರಮದ ರಾಜ್ಯ ವ್ಯವಸ್ಥಾಪಕ ಹಾಗೂ ಮಂತ್ರ ಸಂಸ್ಥೆಯ ವೆಂಕಟೇಶ್ ಕರೆ ನೀಡಿದರು.ಸಚೇತನ ಕಾರ್ಯಕ್ರಮದ ಅನುಷ್ಠಾನ ಕುರಿತು ಪರಿಶೀಲನೆ ನಡೆಸಲು ಜಿಲ್ಲೆಯ ವಿವಿಧ ಶಾಲೆಗಳಿಗೆ ಭೇಟಿ ನೀಡಿದ್ದ ಸಚೇತನ ತಂಡದ ನೇತೃತ್ವ ವಹಿಸಿದ್ದ ಅವರು, ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸಚೇತನ ವಾರ್ಷಿಕ ಚಟುವಟಿಕೆಗಳ ಕ್ಯಾಲೆಂಡರ್ ಪ್ರದರ್ಶಿಸಿ ಮಕ್ಕಳಿಗೆ ಅರಿವು ಮೂಡಿಸಿ ಮಾತನಾಡಿದರು.

ಮಕ್ಕಳಿಗೆ ಮಾರ್ಗದರ್ಶನಮಕ್ಕಳು ಪ್ರಾರ್ಥನಾ ಅವಧಿಯಲ್ಲಿ ಪ್ರಸ್ತುತಪಡಿಸುವ ಚಟುವಟಿಕೆಗಳನ್ನು ಒಂದು ವಾರ ಮುಂಚಿತವಾಗಿ ಮುಖ್ಯಶಿಕ್ಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು, ಕ್ಯಾಲೆಂಡರ್‌ನಲ್ಲಿ ನೀಡಿದ ಒಂದು ಕ್ಷೇತ್ರಕ್ಕೆ ಸಂಬಂಧಿಸಿದ ವಾರದ ಚಟುವಟಿಕೆಗಳನ್ನು ಮಕ್ಕಳಿಂದ ಮಾಡಿಸಬೇಕು ಎಂದರು.

ಪ್ರತಿ ಶನಿವಾರ ದೈಹಿಕ ವ್ಯಾಯಾಮ ಚಟುವಟಿಕೆಗಳನ್ನು ಕೈಗೊಳ್ಳಿ, ಪ್ರತಿ ದಿನ ಕನಿಷ್ಟ ೩ ರಿಂದ ೫ ವಿದ್ಯಾರ್ಥಿಗಳು ಭಾಗವಹಿಸುವಂತೆ ನೋಡಿಕೊಳ್ಳಬೇಕು ಮತ್ತು ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಅವಕಾಶವನ್ನು ನೀಡುವ ಮೂಲಕ ಚಟುವಟಿಕೆಗಳಲ್ಲಿ ಪ್ರತಿ ಮಗುವು ಪಾಲ್ಗೊಳ್ಳಬೇಕು ಎಂದರು.

ಪರಿಸರದ ಚಿತ್ರಪ್ರದರ್ಶನದಿನಕ್ಕೊಂದು ಚಟುವಟಿಕೆಯಂತೆ ಒಂದು ದಿನ ಪರಿಸರದ ಚಿತ್ರಪ್ರದರ್ಶನ, ಮಳೆ ಹಾಡು, ಕವಿಗಳ ಪರಿಚಯ, ವಿಜ್ಞಾನ ಪಠ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳು, ಚಟುವಟಿಕೆಗಳನ್ನು ಮಕ್ಕಳಿಂದಳೇ ಹೇಳಿಸಿ ಉತ್ತರ ಪಡೆಯುವುದರಿಂದ ಉತ್ತಮ ಪ್ರಗತಿ ಸಾಧ್ಯ ಎಂದರು

ಸಚೇತನ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ರವಿಕುಮಾರ್ ಮಾತನಾಡಿ, ಈಗಾಗಲೇ ಕ್ಯಾಲೆಂಡರ್ ಪ್ರತಿ ಶಾಲೆಗೂ ಒದಗಿಸಲಾಗಿದೆ, ಅದರಲ್ಲಿ ಸೂಚಿಸಿರುವ ಚಟುವಟಿಕೆ ಆಯಾ ದಿನ ಮಕ್ಕಳಿಂದ ನಡೆಸಿದಲ್ಲಿ ಮಕ್ಕಳಲ್ಲಿ ಕಲಿಕಾ ಆಸಕ್ತಿ, ಆತ್ಮವಿಶ್ವಾಸ ಮೂಡಿಸಿದಂತಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ್, ಸಿಆರ್‌ಪಿ ಬಸವರಾಜ್, ಮುಖ್ಯಶಿಕ್ಷಕಿ ತಾಹೇರಾ ನುಸ್ರತ್, ಶಿಕ್ಷಕರಾದ ಸಿದ್ದೇಶ್ವರಿ,ಎಂ.ಆರ್.ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ,ಸುಗುಣಾ, ಶ್ವೇತಾ, ಕೆ.ಲೀಲಾ, ಶ್ರೀನಿವಾಸಲು, ರಮಾದೇವಿ, ಚೈತ್ರಾ ಇದ್ದರು.