ಲಿಂ. ಶ್ರೀ ಸಿದ್ದೇಶ್ವರ ಸ್ವಾಮೀಜಿಗೆ ನುಡಿನಮನ

| Published : Jan 06 2024, 02:00 AM IST

ಸಾರಾಂಶ

ನಡೆದಾಡುವ ದೇವರು ಲಿಂ.ಸಿದ್ದೇಶ್ವರ ಸ್ವಾಮೀಜಿಯವರು ಮುಕಾರ್ತಿಹಾಳ ಗ್ರಾಮದ ಬೆಳ್ಳಿಯವರ ತೋಟಕ್ಕೆ ಸ್ವಾತಂತ್ರ್ಯ ದಿನಾಚರಣೆಯಂದು ಆಯೋಜಿಸಿದ್ದ ಜೈ ಜವಾನ್ ಜೈ ಕಿಸಾನ್ ಕಾರ್ಯಕ್ರಮಕ್ಕೆ ಆಗಮಿಸಿ ದೇಶಕ್ಕೆ ಅನ್ನ ನೀಡುವ ರೈತ ಹಾಗೂ ದೇಶ ಕಾಯುವ ಸೈನಿಕ ನಿಜವಾದ ಕಾಯಕಯೋಗಿಗಳು ಎಂದು ಆಶೀರ್ವಚನ ನೀಡಿದ್ದನ್ನು ಸ್ಮರಿಸಿಕೊಂಡರು.

ವಿಜಯಪುರ: ನಿಡಗುಂದಿ ತಾಲೂಕಿನ ಮುಕಾರ್ತಿಹಾಳ ಗ್ರಾಮದ ಮಾತೋಶ್ರೀ ಶಕುಂತಲಾಬಾಯಿ ಬೆಳ್ಳಿ ಪಬ್ಲಿಕ್ ಶಾಲೆಯಲ್ಲಿ ಸಿದ್ದೇಶ್ವರ ಸ್ವಾಮೀಜಿಗಳಿಗೆ ನುಡಿನಮನ ಸಲ್ಲಿಸಲಾಯಿತು.

ಅಧ್ಯಕ್ಷ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ನಡೆದಾಡುವ ದೇವರು ಲಿಂ.ಸಿದ್ದೇಶ್ವರ ಸ್ವಾಮೀಜಿಯವರು ಮುಕಾರ್ತಿಹಾಳ ಗ್ರಾಮದ ಬೆಳ್ಳಿಯವರ ತೋಟಕ್ಕೆ ಸ್ವಾತಂತ್ರ್ಯ ದಿನಾಚರಣೆಯಂದು ಆಯೋಜಿಸಿದ್ದ ಜೈ ಜವಾನ್ ಜೈ ಕಿಸಾನ್ ಕಾರ್ಯಕ್ರಮಕ್ಕೆ ಆಗಮಿಸಿ ದೇಶಕ್ಕೆ ಅನ್ನ ನೀಡುವ ರೈತ ಹಾಗೂ ದೇಶ ಕಾಯುವ ಸೈನಿಕ ನಿಜವಾದ ಕಾಯಕಯೋಗಿಗಳು ಎಂದು ಆಶೀರ್ವಚನ ನೀಡಿದ್ದನ್ನು ಸ್ಮರಿಸಿಕೊಂಡರು. ಪುಜ್ಯರು ತಮ್ಮ ಪ್ರವಚನದಲ್ಲಿ ರೈತರು, ನೆಲಜಲ ಸಂರಕ್ಷಣೆ, ಪರಿಸರ ಪ್ರೇಮ, ಪ್ರಾಣಿ ಪಕ್ಷಿಗಳ ಕುರಿತಾಗಿ ಮಾತನಾಡುತ್ತಿದ್ದರು ಹಾಗೂ ಮಕ್ಕಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು ಎಂದರು.

ವಿದ್ಯಾರ್ಥಿ ಸುರೇಶ ವಾಲಿಕಾರ ಸಿದ್ದೇಶ್ವರ ಸ್ವಾಮೀಜಿ ವೇಷ ಧರಿಸಿದ್ದು ಎಲ್ಲರ ಗಮನ ಸೆಳೆಯಿತು. ಶಾಲಾ ಆಡಳಿತ ಮಂಡಳಿಯ ಕೆ.ಎಲ್. ದಶವಂತ, ವಿಜಯಕುಮಾರ ಸಿ., ಮುಖ್ಯ ಗುರುಮಾತೆ ನಿವೇದಿತಾ ರೂಢಗಿ, ಶಿಕ್ಷಕಿ ರೇಣುಕಾ ಗುಣಕಿ, ಚೈತ್ರಾ ಗುಳೇದಗುಡ್ಡ, ರಜಿಯಾಬಾನು ಬಿಳೆಕುದರಿ, ಕೀರ್ತಿ ಚಿಮ್ಮಲಗಿ, ರೂಪಾ ಪಟ್ಟಣಶೆಟ್ಟಿ, ಕಾಶಿಬಾಯಿ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.