‘ಶ್ರೀ ಗುರುಮಲ್ಲೇಶ್ವರ ಪ್ರಭಾವಲಯ’: ನಾಲ್ಕು ದಶಕಗಳ ಹಿಂದೆ ರಚಿತವಾಗಿರುವ ಕೃತಿ

| Published : Jan 14 2025, 01:02 AM IST

‘ಶ್ರೀ ಗುರುಮಲ್ಲೇಶ್ವರ ಪ್ರಭಾವಲಯ’: ನಾಲ್ಕು ದಶಕಗಳ ಹಿಂದೆ ರಚಿತವಾಗಿರುವ ಕೃತಿ
Share this Article
  • FB
  • TW
  • Linkdin
  • Email

ಸಾರಾಂಶ

ಡಿ.ಎಂ.ಮಹಾದೇವಮೂರ್ತಿ ಅವರ ಆಧ್ಯಾತ್ಮ, ಭಾವುಕತೆ, ಶೋಧನೆ, ಅಧ್ಯಯನ, ಆಸಕ್ತಿ, ಚಿಂತನೆಗಳ ಫಲ ಈ ಕೃತಿ. ದೇವನೂರು ಮಠದ ಇತಿಹಾಸ ಭಂಡಾರ, ಹನ್ನೆರಡನೆ ಶತಮಾನದ ಬಸವಾದಿ ಶರಣರ ಬದುಕನ್ನು ಹತ್ತೊಂಬತ್ತನೆಯ ಶತಮಾನದಲ್ಲಿ ಪ್ರಸಾರ ಮಾಡಿದ ಶ್ರೀ ಗುರುಲ್ಲೇಶ್ವರರು ಹಾಗೂ ಗುರುಪಪರಂಪರೆಯ ದರ್ಶನ ಈ ಕೃತಿಯಲ್ಲಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಡಿ.ಎಂ.ಮಹಾದೇವವಮೂರ್ತಿ ಅವರು ಸುಮಾರು ನಾಲ್ಕು ದಶಕಗಳ ಹಿಂದೆ ರಚಿಸಿರುವ ‘ಶ್ರೀ ಗುರುಲ್ಲೇಶ್ವರ ಪ್ರಭಾವಲಯ’ ಕೃತಿಯು ಇದೀಗ ಬಿಡುಗಡೆಯ ಭಾಗ್ಯ ಕಾಣುತ್ತಿದೆ. ಡಾ.ಮಹೇಂದ್ರಮೂರ್ತಿ ದೇವನೂರು ಅವರು ಈ ಕೃತಿಯನ್ನು ಸಂಪಾದಿಸಿ, ಬಿಡುಗಡೆಗೆ ಅಣಿಗೊಳಿಸಿದ್ದಾರೆ.

ಡಿ.ಎಂ. ಮಹಾದೇವಮೂರ್ತಿ ಅವರ ಆಧ್ಯಾತ್ಮ, ಭಾವುಕತೆ, ಶೋಧನೆ, ಅಧ್ಯಯನ, ಆಸಕ್ತಿ, ಚಿಂತನೆಗಳ ಫಲ ಈ ಕೃತಿ. ದೇವನೂರು ಮಠದ ಇತಿಹಾಸ ಭಂಡಾರ, ಹನ್ನೆರಡನೆ ಶತಮಾನದ ಬಸವಾದಿ ಶರಣರ ಬದುಕನ್ನು ಹತ್ತೊಂಬತ್ತನೆಯ ಶತಮಾನದಲ್ಲಿ ಪ್ರಸಾರ ಮಾಡಿದ ಶ್ರೀ ಗುರುಲ್ಲೇಶ್ವರರು ಹಾಗೂ ಗುರುಪಪರಂಪರೆಯ ದರ್ಶನ ಈ ಕೃತಿಯಲ್ಲಿದೆ.

ಡಿ.ಎಂ.ಮಹಾದೇವಮೂರ್ತಿಯವರ ಕುಟುಂಬದವರು ಜತನದಿಂದ ಕಾಪಾಡಿಕೊಂಡು ಬಂದಿದ್ದ ಈ ಕೃತಿಯನ್ನು ಜೆಎಸ್ಎಸ್ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಮಹೇಂದ್ವಮೂರ್ತಿ ದೇವನೂರು ಅವರು ಅಚ್ಚುಕಟ್ಟಾಗಿ ಸಂಪಾದಿಸಿ, ಓದುಗರ ಮುಂದಿಟ್ಟಿದ್ದಾರೆ.

ಈ ಗುರುಮಲ್ಲೇಶ್ವರ ದಾಸೋಹ ಭವನ ನಿರ್ವಹಣಾ ಸಮಿತಿಯು ಈ ಕೃತಿಯನ್ನು ಪ್ರಕಟಿಸಿದೆ. ಆಸಕ್ತರು ಡಾ.ಮಹೇಂದ್ರಮೂರ್ತಿ ದೇವನೂರು, ಮೊ. 99802 24546 ಸಂಪರ್ಕಿಸಬಹುದು.

ಇಂದು ಬಿಡುಗಡೆ:

ಡಿ.ಎಂ.ಮಹಾದೇವಮೂರ್ತಿ ವಿರಚಿತ, ಡಾ.ಮಹೇಂದ್ರಮೂರ್ತಿ ದೇವನೂರು ಸಂಪಾದಿಸಿರುವ ‘ಶ್ರೀ ಗುರುಲ್ಲೇಶ್ವರ ಪ್ರಭಾವಲಯ’ ಕೃತಿಯನ್ನು ನಂಜನಗೂಡು ತಾ. ದೇವನೂರು ಮಠದಲ್ಲಿ ಜ.14 ರಂದು ಬೆಳಗ್ಗೆ 10.30ಕ್ಕೆ ನಡೆಯುವ ಸಮಾರಂಭದಲ್ಲಿ ಶ್ರೀಮಹಾಂತ ಸ್ವಾಮೀಜಿ ಬಿಡುಗಡೆ ಮಾಡುವರು. ಕೃತಿ ಕುರಿತು ಪ್ರೊ.ಎಂ.ಚಂದ್ರಶೇಖರಯ್ಯ ಮಾತನಾಡುವರು. ಟಿ.ನರಸೀಪುರ ವಿದ್ಯೋದಯ ಸಂಸ್ಥೆಯ ಕಾರ್ಯದರ್ಶಿ ಕೆ.ಪಿ.ಮಹದೇವಸ್ವಾಮಿ ಮುಖ್ಯಅತಿಥಿಯಾಗಿರುವರು. ಗುರುಶಾಂತಮ್ಮ ಮಹಾದೇವಮೂರ್ತಿ. ಪ್ರೊ.ಡಿ.ಎಂ ಶಾಂತಪ್ಪ, ಡಿ.ಎಂ. ಮಲ್ಲಿಕಾರ್ಜುನಾರಾಧ್ಯ, ಎಂ.ಬಸವರಾಜು, ಬಿ. ಚಿನ್ನಸ್ವಾಮಿ, ಡಿ.ಎಸ್. ಗುರುಸ್ವಾಮಿ, ಶಿವರುದ್ರಪ್ಪ, ಎಂ.ಕೆ. ಮಲ್ಲೇಶಪ್ಪ, ಪಿ.ಎಂ. ಗುರುಸ್ವಾಮಿ, ಬಸಪ್ಪ ಅವಿನಾಶ್ ಉಪಸ್ಥಿತರಿರುವರು.