ಮೂಡಲಗಿ ಪಟ್ಟಣದಲ್ಲಿ ಸಂಭ್ರಮದ ರಾಮೋತ್ಸವ

| Published : Jan 23 2024, 01:45 AM IST

ಸಾರಾಂಶ

ಪಟ್ಟಣದ ಪ್ರತಿ ವಾರ್ಡಗಲ್ಲಿ ಹಾಗೂ ತಾಲೂಕಿನ ಪ್ರತಿ ಹಳ್ಳಿಗಳ ದೇವಾಲಯಗಳಲ್ಲು ವಿಶೇಷ ಪೂಜೆ, ಹೋಮ ನಡೆದವು. ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ದೇವಾಲಯಗಳು, ಗ್ರಾಮದ ಪ್ರಮುಖ ಬೀದಿಗಳು ಶೃಂಗಾರಗೊಂಡಿದ್ದವು.

ಕನ್ನಡಪ್ರಭ ವಾರ್ತೆ ಮೂಡಲಗಿ

ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮ ಮಂದಿರದ ಉದ್ಘಾಟನೆ ನಿಮಿತ್ತ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿರುವ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆ ಮತ್ತು ಹೋಮ, ಹವನ ನಡೆಯಿತು. ಪಟ್ಟಣದ ಪ್ರತಿ ವಾರ್ಡಗಲ್ಲಿ ಹಾಗೂ ತಾಲೂಕಿನ ಪ್ರತಿ ಹಳ್ಳಿಗಳ ದೇವಾಲಯಗಳಲ್ಲು ವಿಶೇಷ ಪೂಜೆ, ಹೋಮ ನಡೆದವು. ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ದೇವಾಲಯಗಳು, ಗ್ರಾಮದ ಪ್ರಮುಖ ಬೀದಿಗಳು ಶೃಂಗಾರಗೊಂಡಿದ್ದವು. ದೇವಾಲಯಗಲ್ಲಿ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಶ್ರೀರಾಮನ ಭಕ್ತಿ ಭಾವದ ಹರ್ಷೋಧ್ಘಾರದಲ್ಲಿ ಪಟ್ಟಣ ಹಾಗೂ ತಾಲೂಕಿನ ಗ್ರಾಮಗಳಲ್ಲಿ ಕೆಸರಿ ಧ್ವಜಗಳನ್ನು ಕಟ್ಟುವ ಮೂಲಕ ಇಡೀ ಪರಿಸರವನ್ನೇ ಸಂಪೂರ್ಣ ಕೇಸರಿಮಯವಾಗಿತ್ತು ಸಾರ್ವಜನಿಕರು ಶ್ರೀರಾಮನ ಆರಾಧನೆಯೊಂದಿಗೆ ಭಕ್ತಿಯ ಪರಾಕಾಷ್ಠೆ ಮೆರೆದರು. ಪಟ್ಟಣದ ಲಕ್ಷ್ಮೀನಗರ, ಯಲ್ಲಮ್ಮ ದೇವಸ್ಥಾನ ಹತ್ತಿರ, ಗಾಂಧಿ ವೃತ್ತ, ಈರಣ್ಣ ನಗರ, ನಾಗಲಿಂಗ ನಗರ ಸೇರಿದಂತೆ ವಿವಿಧಡೆ ಭಕ್ತಿ ಭಾವದಿಂದ ಶ್ರೀರಾಮನಿಗೆ ಪೂಜೆಸಲ್ಲಿಸಿದರು. ಕಲ್ಮೇಶ್ವರ ವೃತ್ತದಲ್ಲಿ ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮ ಮಂದಿರದ ಉದ್ಘಾಟನೆಯ ನೇರ ಪ್ರಸಾರ ಶ್ರೀರಾಮನ ಭಕ್ತರು ವಿಕ್ಷೀಸಿದರು.