ಶಿಕ್ಷಣ ಸಂಸ್ಥೆಯ ಬೆಳವಣಿಗೆಯಲ್ಲಿ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳೆಂಬ ಎಲ್ಲಾ ಸದಸ್ಯರ ಸಮರ್ಪಣಾ ಭಾವ, ಕರ್ತವ್ಯನಿಷ್ಠೆ ಮತ್ತು ಪರಸ್ಪರ ಸಹಕಾರ ಪ್ರಮುಖವಾಗಿದೆ. ಸದಸ್ಯರ ಸಕ್ರಿಯ ಭಾಗಿತ್ವದಿಂದ ಸಂಸ್ಥೆಯು ಶೈಕ್ಷಣಿಕವಾಗಿ ಮತ್ತು ನೈತಿಕವಾಗಿ ಉನ್ನತ ಮಟ್ಟಕ್ಕೇರಲು ಸಾಧ್ಯವೆಂದು ಹೈಕಶಿ ಸಂಸ್ಥೆಯ ಅಧ್ಯಕ್ಷ, ಎಂಎಲ್‌ಸಿ ಶಶೀಲ್ ಜಿ ನಮೋಶಿ ಹೇಳಿದರು.
-ಹೈಕಶಿ ಸಂಸ್ಥೆ ಸದಸ್ಯರಿಗೆ ವಿಶೇಷ ಆರೋಗ್ಯ ಸೇವೆಗೆ ಚಾಲನೆ
----ಕನ್ನಡಪ್ರಭ ವಾರ್ತೆ ಕಲಬುರಗಿ
ಶಿಕ್ಷಣ ಸಂಸ್ಥೆಯ ಬೆಳವಣಿಗೆಯಲ್ಲಿ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳೆಂಬ ಎಲ್ಲಾ ಸದಸ್ಯರ ಸಮರ್ಪಣಾ ಭಾವ, ಕರ್ತವ್ಯನಿಷ್ಠೆ ಮತ್ತು ಪರಸ್ಪರ ಸಹಕಾರ ಪ್ರಮುಖವಾಗಿದೆ. ಸದಸ್ಯರ ಸಕ್ರಿಯ ಭಾಗಿತ್ವದಿಂದ ಸಂಸ್ಥೆಯು ಶೈಕ್ಷಣಿಕವಾಗಿ ಮತ್ತು ನೈತಿಕವಾಗಿ ಉನ್ನತ ಮಟ್ಟಕ್ಕೇರಲು ಸಾಧ್ಯವೆಂದು ಹೈಕಶಿ ಸಂಸ್ಥೆಯ ಅಧ್ಯಕ್ಷ, ಎಂಎಲ್‌ಸಿ ಶಶೀಲ್ ಜಿ ನಮೋಶಿ ಹೇಳಿದರು.ಅವರು ಬಸವೇಶ್ವರ ಬೋಧನಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಕೇಂದ್ರ ಧ್ವಜಾರೋಹಣ ಹಾಗೂ ಆರೋಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಬಸವೇಶ್ವರ ಆಸ್ಪತ್ರೆಯಿಂದ ₹10,000 ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಪರೀಕ್ಷೆಗಳನ್ನು ಒಳಗೊಂಡ ಸಮಗ್ರ ಎಕ್ಸಿಕ್ಯೂಟಿವ್ ಆರೋಗ್ಯ ತಪಾಸಣೆ ಉಚಿತವಾಗಿ ನೀಡಲಾಗುತ್ತಿದೆ ಎಂದರು.ಸ್ವತ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ 16 ಸದಸ್ಯರು , ಸಹೋದ್ಯೋಗಿಗಳು ಆರೋಗ್ಯ ತಪಾಸಣೆ ಮಾಡಿಕೊಂಡು
ಈ ಕಾರ್ಯಕ್ರಮ ಅಧಿಕೃತವಾಗಿ ಉದ್ಘಾಟಿಸಿದರು.ಈ ಸೌಲಭ್ಯವನ್ನು ಸಂಸ್ಥೆಯ ಎಲ್ಲಾ ಸಿಬ್ಬಂದಿಗಳಿಗೂ ವಿಸ್ತರಿಸಲಾಗುವದೆಂದರು.
ಉಪಾಧ್ಯಕ್ಷ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ್ ಚಿಂಚೋಳ್ಳಿ, ಡಾ ಕೈಲಾಸ ಪಾಟೀಲ, ಸಂಚಾಲಕರಾದ ಡಾ ಕಿರಣ ದೇಶಮುಖ್, ಡಾ ಶರಣಬಸಪ್ಪ ಹರವಾಳ, ಡೀನ್ ಡಾ ಶರಣಗೌಡ ಪಾಟೀಲ,ವೈಸ್ ಡೀನ್ ಡಾ ವಿಜಯಕುಮಾರ್ ಕಪ್ಪೀಕೇರಿ, ವೈದ್ಯಾಧಿಕಾರಿಗಳಾದ ಡಾ ಮಲ್ಲಿಕಾರ್ಜುನ್ ತೇಗನೂರ, ಡಾ ಮಲ್ಲಿಕಾರ್ಜುನ್ ಬಂಡಾರ್, ಎಂ ಆರ್ ಪೂಜಾರಿ ಆಡಳಿತಾಧಿಕಾರಿಗಳಾದ ಡಾ. ಎಸ್. ಎಲ್. ಹಿರೇಮಠ, ಡಾ. ಜಯಶ್ರೀ ಮುದ್ದಾ ಇದ್ದರು.ಶಶಿಕಲಾ ಜಡೆ ಕಾರ್ಯಕ್ರಮ ನಿರೂಪಿಸಿದರು.
ಫೋಟೋ- ಬಸವೇಶ್ವರ