ಸಾರಾಂಶ
ಕನ್ನಡಪ್ರಭ ವಾರ್ತೆ ತಿಕೋಟ
ಭಾರತವು ಉನ್ನತ ಆದರ್ಶ ಹೊಂದಿತ್ತು, ಅದನ್ನು ಸ್ವಾಮೀಜಿ ಪಾಲಿಸಬೇಕೆಂದು ಬಯಸಿದ್ದರು, ಆದರೆ ಲಕ್ಷಾಂತರ ಜನರು ಹಸಿವಿನಿಂದ ಬಳಲುತ್ತಿರುವ ಆದರ್ಶವಾದವು ಅರ್ಥಹೀನವಾಗಿತ್ತು. ಹೀಗಾಗಿ, ಮನೆಗೆ ಹಿಂತಿರುಗಿ, ಅವರು ಉನ್ನತ ತತ್ವಶಾಸ್ತ್ರಕ್ಕಿಂತ ಸಾಮಾಜಿಕ ಸಮಸ್ಯೆಗಳ ಬಗ್ಗೆ ಹೆಚ್ಚು ಮಾತನಾಡಿದರು ಎಂದು ತೆಲಸಂಗದ ವಿರೇಶ್ವರ ದೇವರು ಹೇಳಿದರು.
ತಾಲೂಕಿನ ಹೊನವಾಡ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಯುವಕರ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವಾಮಿ ವಿವೇಕಾನಂದರು ಹೇಳಿದ್ದು ಹೋರಾಟ ದೊಡ್ಡದಾದಷ್ಟೂ ಗೆಲುವು ಅಮೋಘ.
ಒಂದು ಸಮಯದಲ್ಲಿ ಒಂದು ಕೆಲಸವನ್ನು ಮಾಡಿ, ಮತ್ತು ಹಾಗೆ ಮಾಡುವಾಗ ನಿಮ್ಮ ಸಂಪೂರ್ಣ ಆತ್ಮ ಅದರಲ್ಲಿ ಇರಿಸಿ ಎಂದು ಅಧ್ಯಕ್ಷತೆ ಎಸ್ ಜಿ ಲಕ್ಕುಂಡಿಮಠ ಹೇಳಿದರು.ರೇ.ಸಿ ಪಾಟೀಲ ಮಾತನಾಡಿ, ಅಧ್ಯಯನಕ್ಕೆ ಏಕಾಗ್ರತೆ ಅಗತ್ಯ, ಏಕಾಗ್ರತೆಗೆ ಧ್ಯಾನ ಅಗತ್ಯ ಎಂದ ಸ್ವಾಮಿಯವರು ಧಾರ್ಮಿಕ ಬೆಳವಣಿಗೆಯನ್ನು ಶಿಕ್ಷಣದ ಮುಖ್ಯ ಗುರಿಯಾಗಿ ಪರಿಗಣಿಸಿದ್ದರು ಎಂದರು.
ಈ ವೇಳೆ ಕರ್ನಾಟಕ ರಾಜ್ಯ ಬಾಲ ಪ್ರತಿಭಾ ಪುರಸ್ಕತ ಅದ್ವಿತಾ ಬಡಿಗೇರ, ಚಂದ್ರಶೇಖರ ಕೊಣ್ಣೂರ, ಎಸ್. ಕೆ. ಕುಂಬಾರ, ನವೀನ್ ಹತ್ತಿಕಾಳ, ಗಣೇಶ ಗುಗ್ಗರಿ ಮತ್ತಿತರರು ಇದ್ದರು.