ಕೊಲ್ಲಿ ರಾಷ್ಟ್ರಗಳ ನಡುವಿನ ಯುದ್ಧ ಕೊಡಗು ಜಿಲ್ಲಾ ವೈದ್ಯಕೀಯ ಕಾಲೇಜು ಮತ್ತು ಬೋಧಕ ಆಸ್ಪತ್ರೆ ಮೇಲೂ ಪ್ರಭಾವ ಬೀರಿದ್ದು, ಆಸ್ಪತ್ರೆಗೂ ಸಾಕಷ್ಟು ಪ್ರಮಾಣದಲ್ಲಿ ಅಡುಗೆ ಅನಿಲ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿ ಸಿಬ್ಬಂದಿ ಪರದಾಡುವಂತಹ ಸ್ಥಿತಿ ನಿರ್ಮಾಣಗಿದೆ.

ಮಡಿಕೇರಿ: ಕೊಲ್ಲಿ ರಾಷ್ಟ್ರಗಳ ನಡುವಿನ ಯುದ್ಧ ಕೊಡಗು ಜಿಲ್ಲಾ ವೈದ್ಯಕೀಯ ಕಾಲೇಜು ಮತ್ತು ಬೋಧಕ ಆಸ್ಪತ್ರೆ ಮೇಲೂ ಪ್ರಭಾವ ಬೀರಿದ್ದು, ಆಸ್ಪತ್ರೆಗೂ ಸಾಕಷ್ಟು ಪ್ರಮಾಣದಲ್ಲಿ ಅಡುಗೆ ಅನಿಲ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿ ಸಿಬ್ಬಂದಿ ಪರದಾಡುವಂತಹ ಸ್ಥಿತಿ ನಿರ್ಮಾಣಗಿದೆ.

ಇನ್ನೊಂದು ದಿನದ ಅಡುಗೆ ಸಾಕಾಗುವಷ್ಟೇ ಗ್ಯಾಸ್ ಇದ್ದು, ಅದು ಮುಗಿದರೆ ಒಳ ರೋಗಿಗಳ ಊಟಕ್ಕೆ ಸಮಸ್ಯೆ ಎದುರಾಗಲಿದೆ ಎಂಬ ಮಾಹಿತಿ ಇದೆ.

ನಿತ್ಯ 350ರಿಂದ 400 ಒಳರೋಗಿಗಳಿಗೆ ಊಟ ಸಿದ್ಧಗೊಳಿಸಬೇಕು. ಅಷ್ಟು ಜನರಿಗೆ ಅಡುಗೆ ಮಾಡುವುದಕ್ಕೆ ನಿತ್ಯ ಎರಡು ಸಿಲಿಂಡರ್ ಬೇಕು. ಆದರೆ ಸಾಕಷ್ಟು ಸಿಲಿಂಡರ್ ಸಿಗದೆ ಸಿಬ್ಬಂದಿ ಆತಂಕದಲ್ಲೇ ಕೆಲಸ ಮಾಡುವ ಸ್ಥಿತಿ ಇದೆ.ಸದ್ಯ ಮೂರು ಸಿಲಿಂಡರ್ ಅಷ್ಟೇ ಸ್ಟಾಕ್ ಇರಿಸಿಕೊಂಡಿರುವ ಸಿಬ್ಬಂದಿ ಯಾವ ಕ್ಷಣದಲ್ಲಾದರೂ ಸಿಲಿಂಡರ್ ಖಾಲಿಯಾಗಬಹುದೆಂಬ ಆತಂಕದಲ್ಲೇ ಅಡುಗೆ ಮಾಡುತ್ತಿದ್ದು, ಮೂರು ಸಿಲಿಂಡರ್ ಖಾಲಿಯಾದರೆ ಅಡುಗೆಗೆ ಸಂಕಷ್ಟ ಎದುರಾಗಲಿದೆ.

ನಿತ್ಯ ಆರೇಳು ಸಿಲಿಂಡರ್ ಪೂರೈಕೆ ಮಾಡುತ್ತಿದ್ದ ಗ್ಯಾಸ್ ಏಜೆನ್ಸಿ ಕಳೆದ ನಾಲ್ಕೈದು ದಿನಗಳಿಂದ ಕೇವಲ ಎರಡರಿಂದ ಮೂರು ಸಿಲಿಂಡರ್ ಪೂರೈಕೆ ಮಾಡುತ್ತಿದ್ದರು. ಆದರೆ ಬುಧವಾರ ಮಧ್ಯಾಹ್ನವಾದರೂ ಸಿಲಿಂಡರ್ ಪೂರೈಕೆ ಆಗಿಲ್ಲ. ಹೀಗಾಗಿ ಸದ್ಯ ಮೂರು ಸಿಲಿಂಡರ್ ಬ್ಯಾಕಪ್ಪ್ ಇರಿಸಿಕೊಂಡಿದ್ದು, ಶುಕ್ರವಾರ ಮಧ್ಯಾಹ್ನದವರೆಗೆ ಅಡುಗೆಗೆ ಸಮಸ್ಯೆಯಾಹಲಾರದು.ಆದರೆ ಕೂಡಲೇ ಸಿಲಿಂಡರ್ ಪೂರೈಕೆಯಾಗದಿದ್ದರೆ ತೀವ್ರ ಸಮಸ್ಯೆ ಎದುರಾಗಲಿದ್ದು, ಈ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದು, ಕೇವಲ ಮೂರು ಸಿಲಿಂಡರ್ ಮಾತ್ರ ಪೂರೈಕೆ ಮಾಡುವುದಾಗಿ ಏಜೆನ್ಸಿಯವರು ತಿಳಿಸಿದ್ದಾರೆ ಎಂದು ಅಡುಗೆ ಸಿಬ್ಬಂದಿ ಆತಂಕ ವ್ಯಕ್ತ ಪಡಿಸಿದ್ದಾರೆ.