ಟೈಮ್ಸ್ ಗುರುಕುಲ ಶಾಲೆ ವಿದ್ಯಾರ್ಥಿಗಳಿಗೆ ಸನ್ಮಾನ

| Published : May 15 2025, 01:39 AM IST

ಸಾರಾಂಶ

ಟೈಮ್ಸ್ ಗುರುಕುಲ ಸಿ.ಬಿ.ಎಸ್.ಇ. ಶಾಲೆಗೆ ನೂರಕ್ಕೆ ನೂರರಷ್ಟು ಫಲಿತಾಂಶ ಹಾಗೂ ಹೆಚ್ಚಿನ ಅಂಕ ಪಡೆದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳನ್ನು ಬುಧವಾರದಂದು ಸನ್ಮಾನಿಸಿ ಗೌರವಿಸಿದರು. , ಈಗಾಗಲೇ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಬಂದಿದ್ದು, ಈ ಅಂಕಗಳು ಕೆಲವೊಂದಕ್ಕೆ ಮಾನದಂಡ ಅಷ್ಟೆ. ಮುಂದೆ ಭವಿಷ್ಯ ತುಂಬ ಉಜ್ವಲವಾಗಿರಬೇಕು ಎನ್ನುವ ಗುರಿ ಇದ್ದರೇ ಏನೇನು ತಪ್ಪುಗಳನ್ನು ಮಾಡಿದ್ದೀರಾ ಅದನ್ನು ಸರಿಪಡಿಸಿಕೊಳ್ಳುವುದನ್ನು ಕಲಿತುಕೊಳ್ಳಿ. ಎಲ್ಲಿ ಸರಿಯಾಗಿದೆ, ಎಲ್ಲಿ ತಪ್ಪಾಗಿದೆ, ತಪ್ಪಾಗಿರುವುದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಿ ಎಂದರು. ಅಂಕ ಕಡಿಮೆ ಬಂದಿದೆ ಎನ್ನುವ ಬಗ್ಗೆ ಮನಸ್ಸಿನಲ್ಲಿದ್ದರೇ ತೆಗೆದು ಹಾಕಿ ಮುಂದೆ ಏನು ಮಾಡಬೇಕು ಎನ್ನುವುದರ ಬಗ್ಗೆ ಚಿಂತಿಸಿ ಎಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಪ್ರತಿಷ್ಠಿತ ಟೈಮ್ಸ್ ಗುರುಕುಲ ಸಿ.ಬಿ.ಎಸ್.ಇ. ಶಾಲೆಗೆ ನೂರಕ್ಕೆ ನೂರರಷ್ಟು ಫಲಿತಾಂಶ ಹಾಗೂ ಹೆಚ್ಚಿನ ಅಂಕ ಪಡೆದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳನ್ನು ಬುಧವಾರದಂದು ಸನ್ಮಾನಿಸಿ ಗೌರವಿಸಿದರು.

ಇದೇ ವೇಳೆ ಟೈಮ್ಸ್ ಗುರುಕುಲ ಸಿ.ಬಿ.ಎಸ್.ಇ. ಶಾಲೆಯ ಅಧ್ಯಕ್ಷರಾದ ಎ.ಬಿ. ಸುರೇಂದ್ರ ಕುಮಾರ್ ಮಾತನಾಡಿ, ಈಗಾಗಲೇ ಸಿ.ಬಿ.ಎಸ್.ಸಿ.ಯ ಎಸ್.ಎಸ್.ಎಲ್.ಸಿ. ಫಲಿತಾಂಶ ಬಂದಿದ್ದು, ನಮ್ಮ ಟೈಮ್ಸ್ ಗುರುಕುಲದಲ್ಲಿ ಶೇಕಡ ನೂರಕ್ಕೆ ನೂರರಷ್ಟು ಪಲಿತಾಂಶ ಬಂದಿದ್ದು, ಈ ಶಾಲೆಯಲ್ಲಿ ಓದುವ ಮಕ್ಕಳಿಗೆ ಎಜಕೇಶನ್ ಜೊತೆಗೆ ಎಲ್ಲಾ ಆಟೋಟ ಚಟುವಟಿಕೆಗಳಿಗೂ ಕೂಡ ಪ್ರಾಮುಖ್ಯತೆ ಕೊಡುತ್ತಾ ಬಂದಿದೆ ಎಂದರು. ನಮ್ಮ ಟೈಮ್ಸ್‌ ವಿದ್ಯಾಸಂಸ್ಥೆಗಳು ಹಾಸನ ಜಿಲ್ಲೆಯಲ್ಲಿ ಉನ್ನತ ಮಟ್ಟದಲ್ಲಿ ವಿದ್ಯಾಭ್ಯಾಸ ಕೊಡುತ್ತಾ ಬಂದಿದೆ ಎಂದರು.

ಟೈಮ್ಸ್ ಗುರುಕುಲ ಸಿ.ಬಿ.ಎಸ್.ಇ. ಶಾಲೆಯ ಪ್ರಾಂಶುಪಾಲೆ ಶೈಲ ರೈ ಮಾತನಾಡಿ, ಈಗಾಗಲೇ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಬಂದಿದ್ದು, ಈ ಅಂಕಗಳು ಕೆಲವೊಂದಕ್ಕೆ ಮಾನದಂಡ ಅಷ್ಟೆ. ಮುಂದೆ ಭವಿಷ್ಯ ತುಂಬ ಉಜ್ವಲವಾಗಿರಬೇಕು ಎನ್ನುವ ಗುರಿ ಇದ್ದರೇ ಏನೇನು ತಪ್ಪುಗಳನ್ನು ಮಾಡಿದ್ದೀರಾ ಅದನ್ನು ಸರಿಪಡಿಸಿಕೊಳ್ಳುವುದನ್ನು ಕಲಿತುಕೊಳ್ಳಿ. ಎಲ್ಲಿ ಸರಿಯಾಗಿದೆ, ಎಲ್ಲಿ ತಪ್ಪಾಗಿದೆ, ತಪ್ಪಾಗಿರುವುದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಿ ಎಂದರು. ಅಂಕ ಕಡಿಮೆ ಬಂದಿದೆ ಎನ್ನುವ ಬಗ್ಗೆ ಮನಸ್ಸಿನಲ್ಲಿದ್ದರೇ ತೆಗೆದು ಹಾಕಿ ಮುಂದೆ ಏನು ಮಾಡಬೇಕು ಎನ್ನುವುದರ ಬಗ್ಗೆ ಚಿಂತಿಸಿ ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಿಹಿ ಹಂಚಲಾಯಿತು. ಇದೇ ವೇಳೆ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.