ಇಂದು ಕಟೀಲು ಕೊಂಡೇಲಾ ಶ್ರೀ ಕೊಂಡೇಲ್ತಾಯ ದೈವ ಪ್ರತಿಷ್ಠೆ

| Published : Feb 21 2024, 02:01 AM IST

ಇಂದು ಕಟೀಲು ಕೊಂಡೇಲಾ ಶ್ರೀ ಕೊಂಡೇಲ್ತಾಯ ದೈವ ಪ್ರತಿಷ್ಠೆ
Share this Article
  • FB
  • TW
  • Linkdin
  • Email

ಸಾರಾಂಶ

ಬುಧವಾರ ಬೆಳಗ್ಗೆ ೮ರಿಂದ ಗಣಪತಿ ಹೋಮ, ದೈವಗಳ ಕಲಶಾಧಿವಾಸ, ಅಧಿವಾಸ ಹೋಮ ಮತ್ತಿತರರ ಧಾರ್ಮಿಕ ಕಾರ್ಯಕ್ರಮಗಳು, ರಾತ್ರಿ ೯ರಿಂದ ಶ್ರೀ ಕೊಂಡೇಲ್ತಾಯ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದ.

ಮೂಲ್ಕಿ: ಕಟೀಲು ಸಮೀಪದ ಕೊಂಡೇಲಾದ ಶ್ರೀ ಕೊಂಡೇಲ್ತಾಯ ಹಾಗೂ ಪರಿವಾರ ದೈವಗಳಾದ ಶ್ರೀ ರಕ್ತೇಶ್ವರೀ ಶ್ರೀ ಪಂಜುರ್ಲಿ ದೈವಗಳ ಪ್ರತಿಷ್ಠೆ ಮತ್ತು ಕಲಶಾಭೀಷಕ ಫೆ.21ರಂದು ಬುಧವಾರ ಬೆಳಗ್ಗೆ 1೧.೩೭ಕ್ಕೆ ಸಿತ್ಲ ಮನೆತನದ ರಾಮಚಂದ್ರ ರಾವ್ ಇವರ ಪೌರೋಹಿತ್ಯದಲ್ಲಿ ನಡೆಯಲಿದೆ.

ಬುಧವಾರ ಬೆಳಗ್ಗೆ ೮ರಿಂದ ಗಣಪತಿ ಹೋಮ, ದೈವಗಳ ಕಲಶಾಧಿವಾಸ, ಅಧಿವಾಸ ಹೋಮ ಮತ್ತಿತರರ ಧಾರ್ಮಿಕ ಕಾರ್ಯಕ್ರಮಗಳು, ರಾತ್ರಿ ೯ರಿಂದ ಶ್ರೀ ಕೊಂಡೇಲ್ತಾಯ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ. ಸಂಜೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಸಕ ಉಮಾನಾಥ ಕೋಟ್ಯಾನ್‌, ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಅಭಯಚಂದ್ರ ಜೈನ್‌, ಕಟೀಲು ದೇವಳದ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.ಧಾರ್ಮಿಕ ಸಭೆ: ಧಾರ್ಮಿಕ ಆಚರಣೆಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು ತುಳುನಾಡಿನಲ್ಲಿ ದೈವ ದೇವರುಗಳ ಜೀರ್ಣೋದ್ಧಾರ ಕಾರ್ಯ ನಿರಂತರ ನಡೆಯುತ್ತಿದೆ ಎಂದು ಕಿನ್ನಿಗೋಳಿಯ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಧಾರ್ಮಿಕ ಸಭೆಯಲ್ಲಿ ಹೇಳಿದರು. ದ.ಕ. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಅಧ್ಯಕ್ಷತೆ ವಹಿಸಿದ್ದು ನಿವೃತ್ತ ಶಿಕ್ಷಕ ಬಾಲಕೃಷ್ಣ ಉಡುಪ ಶುಭ ಹಾರೈಸಿದರು. ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದ ಆಡಳಿತ ಮೊಕ್ತೇಸರ ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು ಹೊಸಮನೆ, ಗುತ್ತಿಗೆದಾರ ದೊಡ್ಡಯ್ಯ ಮೂಲ್ಯ ಕೆರಮ, ಉದ್ಯಮಿ ಅಭಿಲಾಷ್ ಶೆಟ್ಟಿ, ಧನಂಜಯ ಶೆಟ್ಟಿಗಾರ್, ದೊಡ್ಡಯ್ಯ ಶೆಟ್ಟಿ ಪಾದೆಮನೆ ಕೊಂಡೇಲ, ಶ್ರೀ ಕಾಂತಾಬಾರೆ ಬೂದಾಬಾರೆ ಕ್ಷೇತ್ರದ ಗಂಗಾಧರ ಪೂಜಾರಿ, ವಿಜಯ ಶೆಟ್ಟಿ ಅಜಾರುಗುತ್ತು, ಸಮಿತಿಯ ಕಾರ್ಯದರ್ಶಿ ಜಯಶೀಲ ಶೆಟ್ಟಿ ಕೊಂಡೇಲ ಪಾದೆಮನೆ, ಅಚ್ಯುತ ಸಾಲಿಯಾನ್ ಅಗ್ಗತೋಟ, ಬಾಬುರಾಯ ಪ್ರಭು ಕೊಂಡೇಲ, ಜಯಂತ ಪೂಜಾರಿ ದೋಟಮನೆ ಕೊಂಡೇಲ, ರಾಮ ಬಂಗೇರ ಕೊಂಡೇಲ, ಉದ್ಯಮಿ ಮಧುಸೂದನ ಕೊಂಡೇಲ ಮತ್ತಿತರರು ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಈಶ್ವರ್ ಕಟೀಲ್ ಸ್ವಾಗತಿಸಿದರು. ರಾಜೇಂದ್ರ ಪ್ರಸಾದ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.