ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರಸಭೆಯ 2024-25 ನೇ ಸಾಲಿನಲ್ಲಿ 1.15 ಕೋಟಿ ರು. ಉಳಿತಾಯ ಬಜೆಟ್ ಅನ್ನು ಜಿಲ್ಲಾಧಿಕಾರಿ ಹಾಗೂ ನಗರಸಭೆಯ ಆಡಳಿತಾಧಿಕಾರಿಯಾದ ಶಿಲ್ಪಾನಾಗ್ ಅವರು ಶನಿವಾರ ಮಂಡಿಸಿದರು.ನಗರದ ನಗರಸಭೆಯ ಕಚೇರಿ ಸಭಾಂಗಣದಲ್ಲಿ ಬಜೆಟ್ ಮಂಡಿಸಿ ಅಂದಾಜು ಅಯವ್ಯಯದಲ್ಲಿ 22.45 ಕೋಟಿ ಪ್ರಾರಂಭಿಕ ಶಿಲ್ಕು, 36.81 ಕೋಟಿ ಜಮೆಗಳು ಸೇರಿ ಒಟ್ಟು 9.26 ಕೋಟಿ ರು.ಗಳು ಆದಾಯ ನೀರಿಕ್ಷೆ ಮಾಡಲಾಗಿದ್ದು ಹಾಗೂ 58.11 ಕೋಟಿ ವೆಚ್ಚವಾಗಿದೆ ಎಂದು ತಿಳಿಸಿದರು.ನಗರಸಭೆಯ ಆದಾಯ ಮೂಲಗಳು:
2024-25ನೇ ಸಾಲಿಗೆ 12.86 ಕೋಟಿ ರು.ಗಳನ್ನು ನಗರಸಭೆಯ ಸ್ವಂತ ಮೂಲಗಳಿಂದ ಕ್ರೋಢೀಕರಿಸಲು ಉದ್ದೇಶಿಸಲಾಗಿದೆ. 2023- 24ನೇ ಸಾಲಿಗೆ 23.95 ಕೋಟಿ ರೂ.ಗಳ ಅನುದಾನವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು. ನಗರಸಭೆಯ ಸ್ವಂತ ಆದಾಯ ಮೂಲಗಳಿಂದ ಆಸ್ತಿ ತೆರಿಗೆ 525 ಲಕ್ಷ, ಆಸ್ತಿ ತೆರಿಗೆ ದಂಡ 180 ಲಕ್ಷ, ಉಪಕರ ಸಂಗ್ರಹಣಾ ಶುಲ್ಕ 13. 65, ಘನತ್ಯಾಜ್ಯ ವಸ್ತು ನಿರ್ವಹಣಾಕರ 50 ಲಕ್ಷ, ನೀರು ಸರಬರಾಜು ಮತ್ತು ಒಳಚರಂಡಿ ಶುಲ್ಕಗಳಿಂದ 100 ಲಕ್ಷ, ಶುದ್ಧ ಕುಡಿಯುವ ನೀರಿನ ಘಟಕಗಳ ಶುಲ್ಕ 18 ಲಕ್ಷ, ಅಂಗಡಿ ಮಳಿಗೆಗಳ ಬಾಡಿಗೆ ಮತ್ತು ತರಕಾರಿ ಮಾರುಕಟ್ಟೆಗಳ ಶುಲ್ಕಗಳಿಂದ 48. 50 ಲಕ್ಷ, ಉದ್ದಿಮೆ ಪರವಾನಗಿ 25 ಲಕ್ಷ, ಅಭಿವೃದ್ಧಿ ಮೇಲ್ವಿಚಾರಣಾ ಶುಲ್ಕ ಮತ್ತು ಕಟ್ಟಡ ಪರವನಾಗಿ 50 ಲಕ್ಷ, ರಸ್ತೆ ಅಗೆತ ಶುಲ್ಕ 5 ಲಕ್ಷ, ಸಾರ್ವಜನಿಕ ಶೌಚಾಲಯಗಳ ಬಾಡಿಗೆಯಿಂದ 12 ಲಕ್ಷ, ಒಳಚರಂಡಿ ಸಂಪರ್ಕ ಶುಲ್ಕಗಳಿಂದ 7 ಲಕ್ಷ, ಹೆಚ್ಚುವರಿ ಮುದ್ರಾಂಕ ಶುಲ್ಕ 5 ಲಕ್ಷ. ಬ್ಯಾಂಕ್ ಬಡ್ಡಿ ಮತ್ತು ಠೇವಣಿಗಳ ಮೇಲಿನ ಬಡ್ಡಿ 35 ಲಕ್ಷ, ಹರಾಜು ಮತ್ತು ದಂಡಗಳಿಂದ ಆದಾಯ 3 ಲಕ್ಷ, ಪ್ರಾರಂಭಿಕ ನೀರಿನ ಠೇವಣಿ ಮತ್ತು ಅಕ್ರಮ ನೀರಿನ ಸಂಪರ್ಕಗಳ ಸಕ್ರಮಗೊಳಿಸಲು ದಂಡ ವಸೂಲಿ 15 ಲಕ್ಷ, ಖಾತೆ ಪ್ರತಿಗಳು ಹಾಗೂ ಖಾತೆ ಬದಲಾವಣೆ ಶುಲ್ಕಗಳಿಂದ 11 ಲಕ್ಷ, ಜಾಹೀರಾತು ತೆರಿಗೆಗಳಿಂದ 3. 50 ಲಕ್ಷ, ಬಸ್ ಸ್ಟ್ಯಾಂಡ್ ಪಾರ್ಕಿಂಗ್ ಶುಲ್ಕದಿಂದ 2 ಲಕ್ಷ, ಗುತ್ತಿಗೆದಾರರು ಮತ್ತು ಸರಬರಾಜುದಾರರಿಂದ ಭದ್ರತಾ ಠೇವಣಿಗಳು, ಶೌಚಾಲಯಗಳ ಹರಾಜು ಠೇವಣಿ ಅಂಗಡಿ ಮಳಿಗೆಗಳ ಮುಂಗಡ ಠೇವಣಿ 40 ಲಕ್ಷ ಒಟ್ಟು 1286 ಲಕ್ಷ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ನಿರೀಕ್ಷಿಸಲಾಗಿರುವ ಅನುದಾನಗಳ ವಿವರಗಳು 15ನೇ ಹಣಕಾಸು ಆಯೋಗದ ಅನುದಾನ 417 ಲಕ್ಷ, ಎಸ್‌ಎಫ್‌ಸಿ ವಿಶೇಷ ಅನುದಾನ146 ಲಕ್ಷ, ಎಸ್‌ಎಫ್‌ಸಿ ವೇತನ ಅನುದಾನ 504 ಲಕ್ಷ, ಎಸ್‌ಎಫ್‌ಸಿ ಮುಕ್ತನಿಧಿ ಅನುದಾನ ಎಸ್‌ಸಿಎಫ್‌ಪಿ ಮತ್ತು ಟಿಎಸ್‌ಫಿ 149 ಲಕ್ಷ, ಎಸ್‌ಎಫ್‌ಸಿ ವಿದ್ಯುತ್ ಅನುದಾನ ಬೀದಿದೀಪ 101 ಲಕ್ಷ, ಎಸ್‌ಎಫ್‌ಸಿ ವಿದ್ಯುತ್ ಅನುದಾನ ನೀರು ಸರಬರಾಜು 675 ಲಕ್ಷ, ಎಸ್‌ಎಫ್‌ಸಿ ಕುಡಿಯುವ ನೀರಿನ ಅನುದಾನ 10 ಲಕ್ಷ, ಇತರೆ ಅನುದಾನ, ಜೀವ ವೈವಿಧ್ಯ ಅನುದಾನ 3 ಲಕ್ಷ, ಸ್ವಚ್ಛ ಗೃಹ ಕಲಿಕಾ ಕೇಂದ್ರ ಅನುದಾನ 30 ಲಕ್ಷ, ಸ್ವಚ್ಚಭಾರತ ಅಭಿಯಾನ ಅನುದಾನ 90 ಲಕ್ಷ, ವಿದ್ಯುತ್ ಚಿತಾಗಾರ ನಿರ್ಮಾಣಕ್ಕಾಗಿ ವಿಶೇಷ ಅನುದಾನ 250 ಲಕ್ಷ, ಡೇ ನಲ್ಮ್ ಅನುದಾನ 15 ಲಕ್ಷ, ಜನಗಣತಿ ಅನುದಾನ 5 ಲಕ್ಷ ಒಟ್ಟು 2395 ಲಕ್ಷ, ಎಲ್ಲಾ ಸೇರಿ 3681 ಲಕ್ಷ ರು. ಆದಾಯ ನಿರೀಕ್ಷೆ ಮಾಡಲಾಗಿದೆ.ವೆಚ್ಚಗಳು:
ವಾಣಿಜ್ಯ ಸಂಕೀರ್ಣ ನಿರ್ಮಾಣ 185 ಲಕ್ಷ, ಕಟ್ಟಡಗಳು 40 ಲಕ್ಷ, ಬೀದಿ ದೀಪಗಳನ್ನು ಖರೀದಿಸಿ ಅಳವಡಿಸಲು 5ಲಕ್ಷ, ಕಸಾಯಿ ಖಾನೆ ನಿರ್ಮಣಕ್ಕಾಗಿ 500 ಲಕ್ಷ, ಕಚೇರಿ ಉಪಕರಣಗಳ ಖರೀದಿ10 ಲಕ್ಷ, ಎಲ್ಲಾ ವಾರ್ಡ್‌ಗಳ ನಾಮಫಲಕ ಅಳವಡಿಸಲು 40 ಲಕ್ಷ, ಕಚೇರಿ ಪಿಠೋಪಕರಣ 2 ಲಕ್ಷ, ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳ ಅಭಿವೃದ್ಧಿಗಾಗಿ 310 ಲಕ್ಷ, ರಸ್ತೆ ಬದಿ ಚರಂಡಿ ಹಾಗೂ ಮಳೆ ನೀರು ಚರಂಡಿ ಅಬಿವೃದ್ಧಿಗಾಗಿ 131 ಲಕ್ಷ, ಸ್ಮಶಾನಗಳ ಅಭಿವೃದ್ಧಿಗಾಗಿ 40 ಲಕ್ಷ,ನೀರು ಸರಬರಾಜು ಕಾಮಗಾರಿ ಮತ್ತು ವ್ಯವಸ್ಥೆಗಾಗಿ 283 ಲಕ್ಷ, ಉದ್ಯಾನವಗಳ ಅಭಿವೃದ್ದಿಗಾಗಿ 60 ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆ ಯಂತ್ರೋಪಕರಣಗಳು ವಾಹನ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗೆ 328 ಲಕ್ಷ, ಒಳ ಚರಂಡಿ ಕಾಮಗಾರಿ ಯಂತ್ರೋಪಕರಣ 31 ಲಕ್ಷ, ಸ್ವಚ್ಚಗೃಹ ಕಲಿಕಾ ಕೇಂದ್ರ 30 ಲಕ್ಷ, ವಿದ್ಯುತ್ ಚಿತಾಗಾರ ನಿರ್ಮಾಣಕ್ಕಾಗಿ 250 ಲಕ್ಷ , ಸ್ವಚ್ಚಭಾರತ ಅನುದಾನ ಕಾಮಗಾರಿಗಳು 90 ಲಕ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ 24.10 ಲಕ್ಷ ನಿಧಿ 86. 52, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಧಿ ಅಂಬೇಡ್ಕರ್ ಪ್ರತಿಮೆಯ ಅಭಿವೃದ್ಧಿ ಕಾಮಗಾರಿನಿಧಿ 10 ಲಕ್ಷ, ಹಿಂದುಳಿದ ಅಲ್ಪಸಂಖ್ಯಾತರ ಕಲ್ಯಾಣ, ಕಾರ್ಯಕ್ರಮಗಳಿಗಾಗಿ ಶೇ. 7.25 ಅನುದಾನ ಬಂಡವಾಳ ವೆಚ್ಚಗಳು 20.54 ಲಕ್ಷ, ಶೇ. 5ರಷ್ಟು ವಿಕಲಚೇತನರ ಕಲ್ಯಾಣಾಭಿವೃದ್ಧಿ ಕಾಮಗಾರಿಗಳಿಗಾಗಿ 8.82 ಲಕ್ಷ, ಕ್ರೀಡಾ ಮತ್ತು ಯುವಜನ ಸೇವಾ ಚಟುವಟಿಕೆಗೆಗಳಿಗೆ ಪ್ರೋತ್ಸಾಹ ಅನುದಾನ 1. 25 ಲಕ್ಷ , ಕಾಯಂ ನೌಕರರ ವೇತನ 504 ಲಕ್ಷ,ನೇರ ವೇತನ ಪಾವತಿ, ಪೌರ ಕಾರ್ಮಿಕರ ವೇತನ ಹಾಗೂ ಪೌರಕಾರ್ಮಿಕರಿಗೆ ಸಂಕಷ್ಟ ಭತ್ಯ ವಿಶೇಷ ಭತ್ಯ, ಪೌರ ಕಾರ್ಮಿಕರ ದಿನಾಚರಣೆ ಹಾಗೂ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಹಾಗೂ ಶವ ಸಂಸ್ಕಾರಕ್ಕೆ ಸಹಾಯಧನ 207. 50 ಲಕ್ಷ, ಹೊರಗುತ್ತಿಗೆ ನೀರು ಸರಬರಾಜು ನೌಕರರ ವೇತನ 105 ಲಕ್ಷ, ಹೊರಗುತ್ತಿಗೆ ಒಳಚರಂಡಿ ಸಿಬ್ಬಂದಿ ವೇತನ 15 ಲಕ್ಷ, ಹೊರಗುತ್ತಿಗೆ ಉದ್ಯಾನವನ ನಿರ್ವಹಣೆ ನೌಕರರ ವೇತನ 12 ಲಕ್ಷ, ಹೊರಗುತ್ತಿಗೆ ಡಾಟಾ ಎಂಟ್ರಿ ಆಪರೇಟರ್, ಸೀನಿಯರ್ ಪ್ರೋಗ್ರಾಮರ್, ವಾಹನ ಚಾಲಕರು ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರ ವೇತನ, 50 ಲಕ್ಷ, ಅಧ್ಯಕ್ಷ ಉಪಾದ್ಯಕ್ಷರು, ಮತ್ತು ಸದಸ್ಯರಿಗೆ ಗೌರವಧನ ಮತ್ತು ಇತರೆ ವೆಚ್ಚಗಳು 30 ಲಕ್ಷ, ಘನತ್ಯಾಜ್ಯ ಮತ್ತು ನಿರ್ವಹಣೆ ವಾಹನಗಳ ದುರಸ್ಧಿ ಮತ್ತು ನಿರ್ವಹಣೆ 74 ಲಕ್ಷ, ಕಚೇರಿ ಉಪಯೋಗಕ್ಕಾಗಿ ಪಡೆಯಲಾಗಿರುವ ಹೊರಗುತ್ತಿಗೆ ವಾಹನಗಳ ಬಾಡಿಗೆ 18 ಲಕ್ಷ, ಕಚೇರಿ ಮತ್ತು ಶುದ್ದ ಕುಡಿಯುವ ನೀರಿನ ನೀರಿನ ಘಟಕಗಳ ಬಿಲ್ಲು ಮತ್ತು ಠೇವಣಿ 13 ಲಕ್ಷ, ಎಸ್‌ಎಫ್‌ಸಿ ವಿದ್ಯುತ್ ಅನುದಾನ ಬೀದಿದೀಪ ವಿದ್ಯುತ್ ಬಿಲ್ 151 ಲಕ್ಷ, ಎಸ್‌ಎಫ್‌ಸಿ ವಿದ್ಯುತ್ ಅನುದಾನ ನೀರು ಸರಬರಾಜು ವಿದ್ಯುತ್ ಬಿಲ್ 817 ಲಕ್ಷ, ಹೊರಗುತ್ತಿಗೆ ಬೀದಿ ದೀಪಗಳ ದುರಸ್ತಿ ಮತ್ತು ನಿರ್ವಹಣೆ 45 ಲಕ್ಷ, ಕಚೇರಿ ನಿರ್ವಹಣೆ ಮತ್ತು ಇತರೆ ವೆಚ್ಚಗಳು15. 50 ಲಕ್ಷ, ಲೆಕ್ಕ ಪರಿಶೋಧನೆ ಶುಲ್ಕ, ವಕೀಲರ ಶುಲ್ಕ, ಸಮೀಕ್ಷೆ ಮತ್ತು ವರದಿ ತಯಾರಿಕೆ ವೆಚ್ಚ 23 ಲಕ್ಷ , ರಾಷ್ಟ್ರೀಯ ಹಬ್ಬಗಳ ಆಚರಣೆ ಮತ್ತು ಕಾರ್ಯಕ್ರಮ ವೆಚ್ಚ 14. 50 ಲಕ್ಷ, ಪರಿಹಾರ ಪಾವತಿ 15 ಲಕ್ಷ, ಜನಗಣತಿ ವೆಚ್ಚ 5 ಲಕ್ಷ, ಕಟ್ಟಡ ದುರಸ್ಧಿ ಮತ್ತು ನಿರ್ವಹಣೆಗಾಗಿ 7. 50 ಲಕ್ಷ, ರಸ್ತೆ ಬದಿ ಚರಂಡಿ ದುರಸ್ಧಿ ಮತ್ತು ನಿರ್ವಹಣೆ 5 ಲಕ್ಷ, ರಸ್ತೆ ಸೇತುವೆಗಳು ಮತ್ತು ಪಾದಚಾರಿ ರಸ್ತೆಗಳ ದುರಸ್ಧಿ ಮತ್ತು ನಿರ್ವಹಣೆ 20 ಲಕ್ಷ, ದುರಸ್ಧಿ ಮತ್ತು ನಿರ್ವಹಣೆ ನೀರು ಸರಬರಾಜು ಮತ್ತು ಒಳಚರಂಡಿ 123 ಲಕ್ಷ, ಡೇ ನಲ್ಮ್ ಯೋಜನೆಯಡಿ ತರಬೇತಿ ಸಹಾಯಧನ ಮತ್ತು ಇತರೆ ವೆಚ್ಚಗಳು 31 ಲಕ್ಷ, ಪೌರಕಾರ್ಮಿಕರ ಗೃಹ ಭಾಗ್ಯಕ್ಕೆ ವೆಚ್ಚ 30 ಲಕ್ಷ, ಗುತ್ತಿಗೆದಾರರು ಮತ್ತು ಸರಬರಾಜು ದಾರರಿಂದ ಭದ್ರತಾ ಠೇವಣಿಗಳು ಶೌಚಾಲಯ ಹರಾಜು ಠೇವಣಿ ಅಂಗಡಿ ಮಳಿಗಗಳ ಮುಂಗಡ ಠೇವಣಿ 10 ಲಕ್ಷ, ಉಪಕರ ಸಂಬಂಧಿಸಿದ ಇಲಾಖೆಗೆ ಪಾವತಿ 122. 85 ಲಕ್ಷ, ಸ್ಲಂ ಸೆಸ್ ಚೂಡಾ ಸೆಸ್ ಪಾವತಿ 4 ಲಕ್ಷ, ಇತರೆ ವೆಚ್ಚಗಳು128. 44 ಲಕ್ಷ ಒಟ್ಟು ಖರ್ಚುಗಳು 5811.73 ಲಕ್ಷ. ಆಗಿದೆ. ಈ ಸಂದರ್ಭದಲ್ಲಿ ಪೌರಾಯುಕ್ತ ರಾಮದಾಸ್ ಸೇರಿದಂತೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ಈಜುಕೊಳ, ವಿದ್ಯುತ್ ಚಿತಾಗಾರಕ್ಕೆ ಆದ್ಯತೆ: ಡಿಸಿಈ ಬಾರಿಯ ನಗರಸಭಾ ಬಜೆಟ್‌ನಲ್ಲಿ ನಾಗರಿಕರು ಮತ್ತು ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಕ್ರೀಡಾ ಇಲಾಖೆ ವತಿಯಿಂದ 3 ಕೋಟಿ ವೆಚ್ಚದಲ್ಲಿ ಈಜುಕೊಳ ಮತ್ತು ಚಾಮರಾಜನಗರ ಉತ್ತುವಳ್ಳಿಯ ಮೆಡಿಕಲ್ ಕಾಲೇಜು ಹತ್ತಿರ ಎಸ್‌ಎಫ್‌ಸಿ ಅನುದಾನದಿಂದ 25 ಕೋಟಿ ವೆಚ್ಚದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ತಿಳಿಸಿದರು.ಅಧಿಕಾರ ಮುಗಿಯುತ್ತಿದೆ ಬೋರ್ಡ್ ಯಾವಾಗ?ನಗರಸಭಾ ವ್ಯಾಪ್ತಿಯ ಎಲ್ಲ ವಾರ್ಡ್‌ಗಳ ಮುಖ್ಯ ರಸ್ತೆಗಳಿಗೆ ನಾಮಫಲಕ ಅಳವಡಿಸಲು 40 ಲಕ್ಷ ರು.ಗಳನ್ನು ಕಾಯ್ದಿರಿಸಲಾಗಿದೆ. ಇದನ್ನು ನಾವು ಗೆದ್ದ ತಕ್ಷಣವೇ ಮಾಡಬೇಕಿತ್ತು. ಈಗಾಗಲೇ ಎಲ್ಲಾ ಪಟ್ಟಣ ಮತ್ತು ನಗರಗಳಲ್ಲಿ ಬೋರ್ಡ್ ಅಳವಡಿಸಲಾಗಿದೆ. ನಮ್ಮ ಅಧಿಕಾರ ಮುಗಿಯವ ಹಂತಕ್ಕೆ ಬರುತ್ತಿದೆ ನಮ್ಮ ಅಧಿಕಾರ ಅವಧಿ ಮುಗಿದ ಮೇಲೆ ಬೋರ್ಡ್ ಅಳವಡಿಸುತ್ತೀರಾ ಎಂದು ಸದಸ್ಯೆ ಮಮತಾ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಒಂದು ತಿಂಗಳೊಳಗೆ ನಾಮಫಲಕ (ಬೋರ್ಡ್) ಅಳವಡಿಸಲಾಗುವುದು ಎಂದು ಭರವಸೆ ನೀಡಿದರು.
ಸೂಕ್ತ ತರಕಾರಿ ಮಾರುಕಟ್ಟೆ ನಿರ್ಮಿಸಿ ಚಾಮರಾಜನಗರ ಪಟ್ಟಣದಲ್ಲಿ ಸೂಕ್ತ ತರಕಾರಿ ಮಾರುಕಟ್ಟೆ ಇಲ್ಲ. ಈ ಬಜೆಟ್‌ನಲ್ಲಿ ಮಾರುಕಟ್ಟೆ ಬಗ್ಗೆ ಗಮನಹರಿಸಿಲ್ಲ. ಖಾಲಿ ಇರುವ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಮೀಸಲಿರಿಸಿದ್ದು ಮಾರುಕಟ್ಟೆ ಬೇಡ ಎಂಬ ಮನೋಭಾವದಲ್ಲಿ ಇಲ್ಲಿನ ಅಧಿಕಾರಿಗಳು ಇದ್ದಾರೆ. ಈಗಾಗಲೇ ಮಾರುಕಟ್ಟೆ ನಿರ್ಮಾಣಕ್ಕೆ ಬಂದಿದ್ದ ಅನುದಾನ ವಾಪಸ್ಸು ಹೋಗಿದೆ ಎಂದು ಸದಸ್ಯ ಚಂದ್ರಶೇಖರ್ ಪ್ರಶ್ನಿಸಿದರು.ಇದಕ್ಕೆ ಪೌರಾಯುಕ್ತ ರಾಮದಾಸ್ ಉತ್ತರಿಸಿ, ವಾಪಸ್ ಹೋಗಿರುವ ಅನುದಾನವನ್ನು ತರಿಸುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದಾರೆ. ಆ ಅನುದಾನ ಬಂದ ಬಳಿಕ ಸೂಕ್ತ ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಆದಾಯ ಸಂಗ್ರಹಕ್ಕೆ ಒತ್ತು ನೀಡಿ: ನಗರ ಅಭಿವೃದ್ದಿಯಾಗಬೇಕಾದರೆ ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಆದರೆ, ತೆರಿಗೆ ಸಂಗ್ರಹ ಹೆಚ್ಚಿನ ಮಟ್ಟದಲ್ಲಿ ಆಗಬೇಕು, ಯಾವುದೇ ತೆರಿಗೆ ಸಂಗ್ರಹದಲ್ಲಿ ತಾರತಮ್ಯ ಮಾಡಬಾರದು. ತೆರಿಗೆಯನ್ನು ಗುರಿಯಂತೆ ಸಂಗ್ರಹ ಮಾಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಅಬ್ರಾಹರ್ ಅಹಮದ್ ತಿಳಿಸಿದರು. ಅಲ್ಲದೆ, ಕಳೆದ ಬಾರಿಯಂತೆ ಈ ಬಾರಿಯ ಬಜೆಟ್ ನಲ್ಲಿಯೂ ಪತ್ರಕರ್ತರ ಆರೋಗ್ಯ ನಿಧಿಗೆ ಅನುದಾನ ಮೀಸಲಿರಿಸಬೇಕು ಎಂದು ಮನವಿ ಮಾಡಿದರು. ಉದ್ಯಾನವನ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದ್ದು ನಗರಸಭಾ ವ್ಯಾಪ್ತಿಯ ಪಾರ್ಕ್‌ಗಳ ಅಭಿವೃದ್ಧಿ ಹಾಗೂ ಹಸಿರೀಕರಣಗೊಳಿಸಲು ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. ಚಾಮರಾಜನಗರದ ನಾಗರಿಕರು ಹಾಗೂ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಕ್ರೀಡಾ ಇಲಾಖೆಯಿಂದ 3 ಕೋಟಿ ವಿಶೇಷ ಅನುದಾನ ಪಡೆದು ಸೂಕ್ತ ಸ್ಥಳ ಗುರುತಿಸಿ ಈಜುಕೊಳ ನಿರ್ಮಿಸಲು ಉದ್ದೇಶಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗೆ ವಿಶೇಷ ನಾನಾ ಕಡ್ಡಾನಾಗಿ ವಿಕಲಚೇತನರ ಕಲ್ಯಾಣಕ್ಕಾಗಿ 8.82 ಲಕ್ಷ ಕಾಯ್ದಿರಿಸಲಾಗಿದೆ ಎಂದರು.ಅಲ್ಲದೆ ರಾಮಸಮುದ್ರದ ಹಳೆಯ ಪಂಪ್ ಹೌಸ್ ಹತ್ತಿರ 30 ಲಕ್ಷ ಪೆಚ್ಚದಲ್ಲಿ ಸ್ವಚ್ಛ ಗೃಹ ಕಲಿಕಾ ಕೇಂದ್ರ ನಿರ್ಮಾಣ ಮಾಡಲು ಕ್ರಮಕೈಗೊಳ್ಳಲಾಗಿದೆ. ಎಸ್‌ಎಫ್‌ಸಿ ಕುಡಿಯುವ ನೀರು ಯೋಜನೆಯಡಿ ನೀರಿನ ಅಭಾವ ಇರುವ ವಾರ್ಡ್‌ಗಳಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆದು ಮೋಟಾರ್ ಪಂಪ್ ಪಾರಂಪರಿಕ ತ್ಯಾಜ್ಯ ನಿರ್ವಹಣೆಗಾಗಿ ಟನ್‌ನಷ್ಟು ಪಾರಂಪರಿಕ ತ್ಯಾಜ್ಯ : ಉದ್ದೇಶಿಸಲಾಗಿದೆ ಎಂದು ಹೇಳಿದರು. ಬಜೆಟ್ ಮಂಡನೆ ಬಳಿಕ ಸದಸ್ಯೆ ಮಮ ಬಜೆಟ್‌ನಲ್ಲಿ ನಗರಸಭಾ ವ್ಯಾಪ್ತಿಯ ವಾರ್ಡ್‌ಗಳ ಮುಖ್ಯ ರಸ್ತೆಗಳಿಗೆ ನಾಮಫಲಕ ಅಳವಡಿಸ ಮೀಸಲಿರಿಸಲಾಗಿದೆ. ಆದರೆ, ನಮ್ಮ ಅಧಿಕಾರ ಬಂದಿದ್ದು ಇನ್ನೂ ಯಾವಾಗ ಅಳವಡಿಸುವಿರಿ ಎಂದು ಪ್ರಶ್ನಿಸಿದರು. ಇದಕ್ಕೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರತಿ ಟೆಂಡರ್ ಕರೆದು ಜನರಿಗೆ ಅನುಕೂಲವಾಗುವಂತೆ ಅಳವಡಿಕೆ ಮಾಡಬೇಕು, ಮುಂದಿನ ಬೋರ್ಡ್ ಅಳವಡಿಕೆ ಕಾರ್ಯ ಅಧಿಕಾರಿಗಳಿಗೆ ಸೂಚಿಸಿದರು.