ಸಾರಾಂಶ
ಮಾಗಡಿ: ತಿಗಳ ಜನಾಂಗದ ಅಭಿವೃದ್ಧಿ ದೃಷ್ಟಿಯಿಂದ ಜನಾಂಗದವರು ತಾಲೂಕಿನಲ್ಲಿ ಜಮೀನು ಪಡೆಯುವ ನಿಟ್ಟಿನಲ್ಲಿ ನನ್ನ ಪೋಷಕರ ಹೆಸರಿನಲ್ಲಿ ವೈಯಕ್ತಿಕವಾಗಿ ಒಂದು ಕೋಟಿ ಹಣ ನೀಡುತ್ತೇನೆ ಎಂದು ಕೆಆರ್‌ಡಿಸಿಎಲ್ ನಿಗಮ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಬಾಲಕೃಷ್ಣ ಹೇಳಿದರು.
ಪಟ್ಟಣದ ಹೊಂಬಾಳಮ್ಮನ ಪೇಟೆಯಲ್ಲಿ ತಾಲೂಕು ಶ್ರೀ ಅಗ್ನಿ ಬನ್ನೇರಾಯಸ್ವಾಮಿ ಕ್ಷತ್ರಿಯ ತಿಗಳರ ಕ್ಷೇಮಾಭಿವೃದ್ಧಿ ಮತ್ತು ವಿದ್ಯಾಭಿವೃದ್ಧಿ ನೂತನ ಸಂಘ ಕಚೇರಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನಾಂಗದವರು 5 ಎಕರೆ ಜಾಗವನ್ನು ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಸರ್ಕಾರಿ ಜಾಗವನ್ನು ಖಾಸಗಿ ಸಂಸ್ಥೆಗಳಿಗೆ ನೀಡಬಾರದೆಂದು ಕಂದಾಯ ಸಚಿವ ಕೃಷ್ಣಬೈರೇಗೌಡರವರು ಸರ್ಕಾರಿ ಆದೇಶ ಹೊರಡಿಸಿದ್ದಾರೆ. ತಮ್ಮ ಜನಾಂಗಕ್ಕೆ ಸರ್ಕಾರಿ ಜಾಗವನ್ನು ನೀಡಲು ಸಾಧ್ಯವಿಲ್ಲ. ಆದ್ದರಿಂದ ವೈಯಕ್ತಿಕ ದೇಣಿಗೆ ನೀಡುತ್ತೇನೆ. ನೀವು ಜಾಗವನ್ನು ಖರೀದಿಸಿ ಸಂಸದ ಡಿ.ಕೆ.ಸುರೇಶ್ ಅವರಿಂದಲೂ ವೈಯಕ್ತಿಕವಾಗಿ ಸಹಾಯ ಮಾಡಿಸುತ್ತೇನೆ. ನಿಮ್ಮ ಜನಾಂಗದವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಂಸದ ಡಿ.ಕೆ.ಸುರೇಶ್ ಪರವಾಗಿ ನಿಲ್ಲಬೇಕು. ನಾವು ನಿಮ್ಮ ಜನಾಂಗದ ಅಭಿವೃದ್ಧಿಗಾಗಿ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆಂದು ಹೇಳಿದರು.ಮಾರುಕಟ್ಟೆ ನಿರ್ಮಾಣ:
ನಿಮ್ಮ ಜನಾಂಗದವರು ವ್ಯವಸಾಯವನ್ನೇ ನಂಬಿಕೊಂಡು ಬದುಕನ್ನು ಕಟ್ಟಿಕೊಳ್ಳುತ್ತಿದ್ದು ನಿಮಗೆ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತದೆ. ಈಗ ಕಟ್ಟಿರುವ ಮಾರುಕಟ್ಟೆ ಬೀಳಿಸಿ, ಪೊಲೀಸ್ ಠಾಣೆ, ಸರ್ಕಾರಿ ನೌಕರರ ಭವನ, ಹೆಣ್ಣು ಮಕ್ಕಳ ಹಾಸ್ಟೆಲ್ ಕಟ್ಟಡ ಸ್ಥಳಾಂತರಿಸಿ ಆ ಜಾಗದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲು ಈಗಾಗಲೇ ತಯಾರಿ ಮಾಡಿದ್ದು ಇನ್ನೊಂದು ತಿಂಗಳ ಒಳಗೆ ಜಾಗಕ್ಕೆ ಭೂಮಿಪೂಜೆ ಮಾಡುತ್ತೇನೆ. ನಿಮ್ಮ ಜನಾಂಗದ ಮುಖಂಡರನ್ನು ರಾಜಕೀಯವಾಗಿ ಸ್ಥಾನಮಾನಗಳನ್ನು ನೀಡಿದ್ದು ನಿಮ್ಮ ಜನಾಂಗದವರು ನಮ್ಮ ಪರವಾಗಿ ನಿಲ್ಲುವಂತೆ ಬಾಲಕೃಷ್ಣ ಹೇಳಿದರು.ಕಾರ್ಯಕ್ರಮದ ಸಾನ್ನಿಧ್ಯವನ್ನು ಸುಕ್ಷೇತ್ರ ಪೀಠಾಧ್ಯಕ್ಷ ಶ್ರೀ ಸೋಮಶೇಖರ ಸ್ವಾಮೀಜಿ, ಜಡೇದೇವರ ಮಠದ ಪೀಠಾಧ್ಯಕ್ಷ ಶ್ರೀ ಇಮ್ಮಡಿ ಬಸವರಾಜ ಸ್ವಾಮೀಜಿ ವಹಿಸಿದ್ದರು. ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಪುರಸಭಾ ಸದಸ್ಯರಾದ ಅಶ್ವತ್, ರಾಮಣ್ಣ, ಭಾಗ್ಯಮ್ಮ ಜಯರಾಮಯ್ಯ, ಸಂಘದ ಅಧ್ಯಕ್ಷ ಯಜಮಾನ್ ರಂಗಯ್ಯ, ಉಪಾಧ್ಯಕ್ಷ ಗಂಗರೇವಣ್ಣ, ಗೌರವಾಧ್ಯಕ್ಷ ರಂಗಸ್ವಾಮಿಯ ಗಂಗರಂಗಯ್ಯ, ಸುರೇಶ್, ಶಿವಶಂಕರ ಮಹದೇವಯ್ಯ, ರಾಮಕೃಷ್ಣಯ್ಯ, ತುಮಕೂರಿನ ರಾಜಣ್ಣ, ಅಂಜಿನಪ್ಪ ಜಯಲಕ್ಷ್ಮಿ ರೇವಣ್ಣ, ಮಂಜುನಾಥ್, ರಾಮಕೃಷ್ಣ, ರವಿಕುಮಾರ್ ಇತರರಿದ್ದರು.
ಪೋಟೋ 27ಮಾಗಡಿ1:ಮಾಗಡಿಯ ಹೊಂಬಾಳನಪೇಟೆಯಲ್ಲಿ ತಿಗಳರ ಕ್ಷೇಮಾಭಿವೃದ್ಧಿ ಮತ್ತು ವಿದ್ಯಾಭಿವೃದ್ಧಿ ಸಂಘ ನೂತನ ಕಚೇರಿಯನ್ನು ಗಣ್ಯರು ಉದ್ಘಾಟಿಸಿದರು.