ಲೀಟರ್ ಹಾಲಿಗೆ ೧ ರು. ಹೆಚ್ಚಿಸಿದ ಚಾಮುಲ್

| Published : Feb 09 2025, 01:15 AM IST

ಸಾರಾಂಶ

ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಚಾಮುಲ್)ದ ಹಾಲು ಉತ್ಪಾದಕರಿಗೆ ಲೀಟರ್ ಹಾಲಿಗೆ ೧ ರು.ಹೆಚ್ಚಿಸಿದ್ದು, ಜೊತೆಗೆ ಹಾಲು ಉತ್ಪಾದಕರ ಸಹಕಾರ ಸಂಘಗಳ ನಿರ್ವಹಣೆಗೂ ಲೀಟರ್‌ ಹಾಲಿಗೆ ೧೫ ಪೈಸೆ ಹೆಚ್ಚಿಸಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಚಾಮುಲ್)ದ ಹಾಲು ಉತ್ಪಾದಕರಿಗೆ ಲೀಟರ್ ಹಾಲಿಗೆ ೧ ರು.ಹೆಚ್ಚಿಸಿದ್ದು, ಜೊತೆಗೆ ಹಾಲು ಉತ್ಪಾದಕರ ಸಹಕಾರ ಸಂಘಗಳ ನಿರ್ವಹಣೆಗೂ ಲೀಟರ್‌ ಹಾಲಿಗೆ ೧೫ ಪೈಸೆ ಹೆಚ್ಚಿಸಿದೆ.

ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಅಳೆದು, ತೂಗಿ ಉತ್ಪಾದಕರ ಹಿತದೃಷ್ಟಿ ತೀರ್ಮಾನವಾಗಿದ್ದು, ಬರುವ ಫೆ.೧೧ ರಿಂದ ಹಾಲಿನ ಏರಿಕೆ ದರ ಉತ್ಪಾದಕರಿಗೆ ನೀಡಲಾಗುತ್ತದೆ. ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ ಹಾಲಿಗೆ ೩೧.೧೦ ಪೈಸೆ ಚಾಮುಲ್‌ ನೀಡಲಾಗುತ್ತಿತ್ತು. ಇದೀಗ ಪ್ರತಿ ಲೀಟರ್‌ ಹಾಲಿಗೆ ಒಂದು ರು.ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಇದೀಗ ಲೀಟರ್‌ ಹಾಲು ೩೨.೨೦ ಪೈಸೆಗೆ ಸಿಗಲಿದೆ. ಹಾಲಿನ ಡೇರಿಗಳ ನೌಕರರ ವೇತನ ಹಾಗೂ ನಿರ್ವಹಣೆಗೆ ಪ್ರತಿ ಲೀಟರ್‌ ಹಾಲಿಗೆ ಚಾಮುಲ್‌ ೩೨.೧೦ ಪೈಸೆ ನೀಡುತ್ತಿತ್ತು. ಇದೀಗ ೩೩ ರು.ಆಗಲಿದೆ.

ರೈತರಿಗೆ ಪ್ರತಿ ಲೀಟರ್‌ ಹಾಲಿಗೆ ಚಾಮುಲ್ ಒಂದು ರು.ಹೆಚ್ಚಳ ಮಾಡಿದರೆ, ಹಾಲು ಉತ್ಪಾದಕರ ಸಂಘಗಳ ನಿರ್ವಹಣೆಗೆ ಪ್ರತಿ ಲೀಟರ್‌ ಹಾಲಿಗೆ ೧೫ ಪೈಸೆ ಹೆಚ್ಚಳ ಮಾಡಿದ್ದು, ಹಾಲಿನ ದರ ಹೆಚ್ಚಳ ಮಾಡಲು ತೀರ್ಮಾನಿಸಿದೆ.

ಕಾದು ನೋಡುವ ತಂತ್ರ:

ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ ಹಾಲಿಗೆ ರಾಜ್ಯ ಸರ್ಕಾರ ಕೂಡ ಹೆಚ್ಚಳ ಜಾರಿಗೆ ಬರುವ ಮೊದಲು ಮಾರ್ಚ್‌ನೊಳಗೆ ಹೆಚ್ಚಳದ ಮಾಹಿತಿ ಇರುವ ಕಾರಣ ಚಾಮುಲ್‌ ಆಡಳಿತ ಮಂಡಳಿ ಸಭೆಯಲ್ಲಿ ಸದ್ಯಕ್ಕೀಗ ಪ್ರತಿ ಲೀಟರ್‌ ಹಾಲಿಗೆ ೧ ರು.ಹೆಚ್ಚಿಸಿದೆ. ಸಂಘಗಳ ನಿರ್ವಹಣೆಗೂ ಪ್ರತಿ ಲೀಟರ್‌ ಹಾಲಿಗೆ ೧೫ ಪೈಸೆ ಏರಿಸಿದೆ.

ರಾಜ್ಯ ಸರ್ಕಾರ ಬರುವ ಮಾರ್ಚ್‌ನೊಳಗೆ ಹಾಲಿಗೆ ದರ ಏರಿಕೆ ಮಾಡಿದರೆ, ಚಾಮುಲ್‌ ಮತ್ತೆ ಹಾಲಿನ ದರ ಏರಿಕೆ ಮಾಡುವುದಿಲ್ಲ. ರಾಜ್ಯ ಸರ್ಕಾರ ಹಾಲಿನ ದರ ಮಾರ್ಚ್‌ನೊಳಗೆ ಏರಿಕೆ ಮಾಡದಿದ್ದಲ್ಲಿ ಚಾಮುಲ್‌ ಮತ್ತೊಮ್ಮೆ ಚಾಮುಲ್‌ ಆಡಳಿತ ಮಂಡಳಿ ಸಭೆ ನಡೆಸಿ ಮತ್ತೊಮ್ಮೆ ಒಂದು ರುಪಾಯಿ ಹೆಚ್ಚಿಸಲು ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಪ್ರತಿ ಲೀಟರ್‌ ಹಾಲಿಗೆ ಒಂದು ರುಪಾಯಿ ಹಾಗೂ ಸಂಘಗಳ ನಿರ್ವಹಣೆಗೆ ನೀಡುತ್ತಿದ್ದ ೩೨.೧೦ ಪೈಸೆ ಬದಲಾಗಿ ೩೩ ರು.ನೀಡುವ ಮೂಲಕ ಪ್ರತಿ ಲೀಟರ್‌ ಹಾಲಿಗೆ ೧೫ ಪೈಸೆ ಹೆಚ್ಚಳ ಮಾಡಲು ತೀರ್ಮಾನ ಮಾಡಲಾಗಿದೆ.

-ಕೆ.ರಾಜ್‌ ಕುಮಾರ್‌, ಎಂ.ಡಿ, ಚಾಮುಲ್‌

ಖಾಸಗಿ ಡೇರಿ ಆಮಿಷಕ್ಕೆ ಒಳಗಾಗಿ ಸಹಕಾರ ವ್ಯವಸ್ಥೆಗೆ ಧಕ್ಕೆ ತರುವಂತ ನಿರ್ಧಾರಗಳನ್ನು ರೈತರು ಮಾಡದೆ ನಿರಂತರ ಮಾರುಕಟ್ಟೆ ಒದಗಿಸುವ ಚಾಮುಲ್‌ಗೆ ಹಾಲು ಸರಬರಾಜು ಮಾಡುವ ಮೂಲಕ ಸಹಕಾರ ವ್ಯವಸ್ಥೆ ಬಲಪಡಿಸಲಿ.-ಬಿ.ಸಿ.ಮಹದೇವಸ್ವಾಮಿ, ಡೇರಿ ಅಧ್ಯಕ್ಷಉತ್ಪಾದಕರಿಗೆ ಸೌಲಭ್ಯ ಕೊಟ್ರೂ

ಖಾಸಗಿ ಡೇರಿಗಳು ಹೆಚ್ಚುತ್ತಿವೆ

ಇತ್ತೀಚೆನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಖಾಸಗಿ ಡೇರಿಗಳು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿವೆ. ಸಹಕಾರ ಸಂಘಗಳಲ್ಲಿ ಉತ್ಪಾದಕರಿಗೆ ನೀಡುವ ಸೌಲಭ್ಯ ಖಾಸಗಿ ಹಾಲಿನ ಡೇರಿಗಳಲ್ಲಿ ಸಿಗದಿದ್ದರೂ ಹಾಲು ಮಾತ್ರ ಖಾಸಗಿ ಡೇರಿಗಳಿಗೆ ಹಾಕುವುದು ಕಡಿಮೆ ಆಗುತ್ತಿಲ್ಲ. ಖಾಸಗಿ ಡೇರಿಗಳಲ್ಲಿ ರೈತರಿಗೆ ಪ್ರತಿ ಲೀಟರ್‌ ಹಾಲಿಗೆ ಹೆಚ್ಚಿನ ಹಣ ಕೊಡುತ್ತಿವೆ. ಅದು ಬಿಟ್ಟರೆ ಕನಿಷ್ಠ ಉತ್ಪಾದಕರಿಗೆ ವಿಮೆ, ರಾಸು ವಿಮೆನೂ ಸಿಗುತ್ತಿಲ್ಲ ಆದರೂ ತಾಲೂಕಿನಲ್ಲಿ ಬಹುತೇಕ ಹಳ್ಳಿಗಳಲ್ಲಿ ಖಾಸಗಿ ಒಂದಲ್ಲ, ಎರಡು ಡೇರಿಗಳಿವೆ. ಆದರೆ ಚಾಮುಲ್ ರೈತರಿಗೆ ರಾಸು ವಿಮೆ, ಪಶು ವೈದ್ಯಕೀಯ ಸೇವೆ, ಸದಸ್ಯರಿಗೆ ೧ ಲಕ್ಷ ವಿಮೆ, ಸದಸ್ಯರು ಮರಣ ಹೊಂದಿದ ಸಮಯದಲ್ಲಿ ₹೧೫ ಸಾವಿರ ಪರಿಹಾರ, ಒಕ್ಕೂಟ ಡೇರಿ ಕಟ್ಟಡಗಳ ನಿರ್ಮಾಣಕ್ಕೆ ₹೩ ಲಕ್ಷ ಅನುದಾನ, ಕೆಎಂಎಫ್‌ನಿಂದ ೪.೫ ಲಕ್ಷ ಅನುದಾನ, ರೈತ ಸದಸ್ಯರ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ ಸೌಲಭ್ಯ ನೀಡುತ್ತಿದೆ.