ಡಿ.8 ರಿಂದ 10 ದಿನ ವಿಧಾನಮಂಡಲ ಅಧಿವೇಶನ

| Published : Oct 15 2025, 02:08 AM IST

ಸಾರಾಂಶ

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಮುಂಬರುವ ಡಿ.8 ರಿಂದ 10 ದಿನಗಳ ಕಾಲ ಚಳಿಗಾಲ ಅಧಿವೇಶನ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಮುಂಬರುವ ಡಿ.8 ರಿಂದ 10 ದಿನಗಳ ಕಾಲ ಚಳಿಗಾಲ ಅಧಿವೇಶನ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದಿಂದ ಅಧಿವೇಶನ ಯಶಸ್ವಿಯಾಗಿ ಮಾಡೋಣ. ಎಂಪಿ, ಎಂಎಲ್ಎ ಚುನಾವಣೆ ಬಿಟ್ಟರೆ ಎಲ್ಲ ಚುನಾವಣೆಗಳಿಗೆ ರೆಸಾರ್ಟ್, ಪ್ರವಾಸ ರಾಜಕೀಯ ಅನ್ವಯಿಸುತ್ತದೆ. ಒಟ್ಟಿಗೆ ಇರೋಣ ಎನ್ನುವ ಕಾರಣಕ್ಕೆ ಎಲ್ಲರೂ ಹೋಗಿದ್ದಾರೆ. ಇನ್ನುಳಿದ 7 ಕ್ಷೇತ್ರಗಳಲ್ಲಿ ಹೆಚ್ಚು ಸೀಟ್ ನಾವು ಗೆಲ್ಲುತ್ತೇವೆ. ಕಿತ್ತೂರಿನಲ್ಲಿ ಚುನಾವಣೆ ಆಗುವುದೇ. ಯಾರ ಮೇಲೆ ಮತದಾರರ ಪ್ರೀತಿ ಹೆಚ್ಚಿದೆ ಅವರು ಗೆಲ್ಲುತ್ತಾರೆ. ಮತದಾರರು ಅದನ್ನು ನಿರ್ಧರಿಸಬೇಕು. ಫಲಿತಾಂಶ ಬರುವವರೆಗೆ ಕಾಯಬೇಕಷ್ಟೇ. ಕೆಲವು ಕಡೆ ಹಾಗೇ ಇದೆ ಏನೂ ಮಾಡುವುದಕ್ಕೆ ಆಗುವುದಿಲ್ಲ. ಯಾರೇ ಗೆದ್ದರೂ ನಮ್ಮವರೇ. ಮತ್ತೊಂದಿಷ್ಟು ಕಡೆ ವಿರೋಧಿಗಳಿದ್ದಾರೆ ಎಂದರು.ಲಿಂಗಾಯತರನ್ನು ಒಡೆದು ಆಳುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಆ ರೀತಿ ಹೇಳಿದವರು ಯಾರು? ಚರ್ಚೆಗಳಿಗೆಲ್ಲ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ಚರ್ಚೆಗೆ ಟ್ಯಾಕ್ಸ್, ಜಿಎಸ್ಟಿ ಇರುವುದಿಲ್ಲ‌‌. ಆ ರೀತಿ ಹೇಳುವವರಷ್ಟೇ ಎಂದರು.ಎಲ್ಲರಿಗೂ ಸೋಲಿನ ಭಯ ಇದ್ದೆ ಇರುತ್ತದೆ. ಭಯ ಇದ್ದರೇ ಹೆಚ್ಚಿನ‌ ಮತಗಳಿಂದ ಗೆಲ್ಲುತ್ತಾರೆ. ಇನ್ನು ಎಲ್ಲ ಚುನಾವಣೆಗಳಲ್ಲಿ ಕ್ರಾಸ್ ವೋಟಿಂಗ್ ನಡೆದೇ ನಡೆಯುತ್ತದೆ. ಮೊದಲಿನಿಂದಲೂ ಈ ಪದ್ಧತಿ ಇದ್ದು, ಇದೇನು ಹೊಸದಲ್ಲ. ಈ ಕಡೆ ಇದ್ದವರು ಆ ಕಡೆ, ಆ ಕಡೆ ಇದ್ದವರು ವೋಟ್ ಹಾಕುತ್ತಾರೆ. ಹಾಗಾಗಿ, ನಿಪ್ಪಾಣಿ, ಹುಕ್ಕೇರಿ, ರಾಮದುರ್ಗ ಸೇರಿ ಎಲ್ಲ ಕಡೆ ಕ್ರಾಸ್ ವೋಟಿಂಗ್ ಆಗಬಹುದು ಎಂದರು.

ಕಿತ್ತೂರಿನಲ್ಲಿ ಏಕೆ ಸಂಧಾನ ಯಶಸ್ವಿ ಆಗಲಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಕಿತ್ತೂರಿನಲ್ಲಿ ಆಗುವುದಿಲ್ಲ. ಕೆಲವು ಕ್ಷೇತ್ರಗಳಲ್ಲಿ ಅನಿವಾರ್ಯವಾಗಿ ಚುನಾವಣೆ ಆಗುತ್ತದೆ. ಇದನ್ನು ಮುಂಚೆಯೇ ಹೇಳಿದ್ದೆ. ಮತದಾರರು ಹೆಚ್ಚು ಯಾರಿಗೆ ಆಶೀರ್ವಾದ ಮಾಡುತ್ತಾರೆ ಅವರು ಗೆಲ್ಲುತ್ತಾರೆ. ಯಾರೇ ಗೆದ್ದರೂ ಅವರು ನಮ್ಮವರೇ ಎಂದರು.ಹುಕ್ಕೇರಿಯಲ್ಲಿ ಮತದಾನದ ಹಕ್ಕು ತೆಗೆದುಕೊಂಡವರು ಯಾರಿಗೆ ಮತ ಹಾಕಬೇಕು ಎಂದು ನಿರ್ಧರಿಸಿದ್ದು, ಅವರಿಗೆ ಮತ ಚಲಾಯಿಸುತ್ತಾರೆ. ಹಾಗಾಗಿ, ಪ್ರಚಾರ ಮಾಡುವ ಅವಶ್ಯಕತೆ ಇಲ್ಲ. ಆದರೆ, ಗೆಲ್ಲಲು ಎಲ್ಲ ರೀತಿ ಪ್ರಯತ್ನಿಸುತ್ತೇವೆ. ಇನ್ನು ಹುಕ್ಕೇರಿ ಕೆಇಬಿ ಚುನಾವಣೆ ಒಂದು ತಾಲೂಕಿಗೆ ಸಿಮೀತವಾಗಿದೆ. ಡಿಸಿಸಿ ಬ್ಯಾಂಕ್ ಜಿಲ್ಲಾಮಟ್ಟದ ಚುನಾವಣೆ‌.‌ ಅದಕ್ಕೂ ಇದಕ್ಕೂ ಹೋಲಿಕೆ ಮಾಡಲು ಆಗುವುದಿಲ್ಲ ಎಂದರು.ಅಶೋಕ ಪಟ್ಟಣ ಅವರಿಗೆ ಸೋಲಿನ ಭಯ ಇದ್ದಿದ್ದರೆ ಅವರೇ ಗೆಲ್ಲುತ್ತಿದ್ದರು. ಅ.19 ರಂದು ನಿರ್ಧಾರ ತೆಗೆದುಕೊಳ್ಳುವಂತೆ ಹೇಳಿದ್ದೇವು. ಆದರೂ ಯಾಕೋ ಅವರು ರಿಸ್ಕ್ ಬೇಡ ಅಂತಾ ನಾಮಪತ್ರ ಹಿಂಪಡೆದಿದ್ದಾರೆ. ರಾಮದುರ್ಗದಲ್ಲಿ ಈಗಲೂ ಗೊಂದಲ ಇದೆ. ಕೊನೆ ಕ್ಷಣದಲ್ಲಿ ಮುಖಂಡರು ಯಾವ ರೀತಿ ಗೊಂದಲ ಬಗೆಹರಿಸುತ್ತಾರೆ ನೋಡೋಣ ಎಂದರು.ಮುಂಚೆಯಿಂದಲೂ ಕೆಎಂಎಫ್, ಡಿಸಿಸಿ ಸೇರಿ ಇತರೆ ಸಂಘ ಸಂಸ್ಥೆಗಳಲ್ಲಿ ಅವಿರೋಧ ಆಯ್ಕೆ ಆಗುತ್ತಿತ್ತು. ಆದರೆ, ಒಂದು ವರ್ಷದ ಹಿಂದೆ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಸಿದ್ಧತೆ ನಡೆದಿತ್ತು.‌ ಅದಕ್ಕಿಂತ ಮೊದಲು ಭಾಗಶಃ ನಡೆಯುತ್ತಿತ್ತು.‌ ಈಗ ಪೂರ್ಣ ಪ್ರಮಾಣದಲ್ಲಿ ಬಾಲಚಂದ್ರ ಜಾರಕಿಹೊಳಿ ನೇತೃತ್ವ ವಹಿಸಿದ್ದಾರೆ. ಅವರು ತಯಾರಿ ನಡೆಸಿದ ಪರಿಣಾಮ 9 ಸ್ಥಾನಗಳ ಅವಿರೋಧ ಆಯ್ಕೆ ಆಗಿದೆ. ಇದರಿಂದ ಕೆಲವೊಂದು ಕಡೆ ವಿನಾಕಾರಣ ಆಗುತ್ತಿದ್ದ ಗೊಂದಲ ತಪ್ಪಿದೆ ಎಂದರು.ನಿಪ್ಪಾಣಿಯಲ್ಲಿ ಈ ಚುನಾವಣೆಯಲ್ಲಿ ಉತ್ತಮ ಪಾಟೀಲಗೆ ಸಹಾಯ ಮಾಡುವುದಿಲ್ಲ ಅಂತಾ ಮುಂಚೆಯೇ ಹೇಳಿದ್ದೇವು. ಈಗಲೂ ಹೇಳುತ್ತೇನೆ. ಈ ಸಲ ಅಣ್ಣಾಸಾಹೇಬ ಜೊಲ್ಲೆ ಅವರ ಜೊತೆಗೆ ನಿಲ್ಲಬೇಕಿದೆ ನಿಂತಿದ್ದೇವೆ. ಅಥಣಿ ವಸ್ತುಸ್ಥಿತಿ ಬಗ್ಗೆ ಹೆಚ್ಚು ನಾವು ಗಮನ ಕೊಟ್ಟಿಲ್ಲ. ಲಕ್ಷ್ಮಣ ಸವದಿ ಸೂರ್ಯ, ಚಂದ್ರ ಗ್ರಹಣ ಮಾತನ್ನು ಯಾಕೆ ಮತ್ತು ಯಾರಿಗೆ ಹೇಳಿದ್ದಾರೆ ಗೊತ್ತಿಲ್ಲ. ನಾವು ಗೆಲ್ಲಬೇಕಾಗಿತ್ತು, ಗೆದ್ದಿದ್ದೇವೆ ಅಷ್ಟೇ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಡಿನ್ನರ್ ಪಾರ್ಟಿಗೆ ನನಗೂ ಕರೆದಿದ್ದರು. ಡಿಸಿಸಿ ಬ್ಯಾಂಕ್ ಚುನಾವಣೆ ಇದೆ ಹಾಗಾಗಿ, ಬರಲು ಆಗುವುದಿಲ್ಲ ಅಂತಾ ಹೇಳಿದ್ದೆ. ಈ ಮೊದಲು ಎರಡ್ಮೂರು ಬಾರಿ ಡಿನ್ನರ್ ಪಾರ್ಟಿಗೆ ಕರೆದಿದ್ದರು. ಇಲ್ಲಿಯೇ ಇದ್ದಿದ್ದರಿಂದ 2 ಸ್ಥಾನಗಳು ಹೆಚ್ಚು ಅವಿರೋಧ ಆಯ್ಕೆ ಸಾಧ್ಯವಾಯಿತು. ಡಿನ್ನರ್ ಪಾರ್ಟಿಯಲ್ಲಿ ಏನು ಚರ್ಚೆ ಆಗಿದೆ ಗೊತ್ತಿಲ್ಲ. ಆ ಬಗ್ಗೆ ಚರ್ಚೆ ಮಾಡೋಣ. ಸಚಿವ ಸಂಪುಟದ ಬಗ್ಗೆ ಇಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿಕೆ ನೀಡಿದ್ದಾರೆ. ಮುಂದೆ ಏನಾಗುತ್ತದೆ ಎಂದು ಕಾದು ನೋಡೋಣ ಎಂದರು.ಆರ್.ಎಸ್.ಎಸ್ ಬಗ್ಗೆ ಮಾತಾಡಿದ್ದಕ್ಕೆ ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ ಬರುತ್ತಿರುವುದಕ್ಕೆ ಅದು ಸ್ವಾಭಾವಿಕ, ಅದೇನು ಹೊಸದಲ್ಲ. ವಾಟ್ಸಪ್‌ನಲ್ಲಿ ಈ ರೀತಿ ಬೆದರಿಕೆ ಬರುವುದು ಸ್ವಾಭಾವಿಕ ಎಂದು ತಿಳಿಸಿದರು.ದೀಪಾವಳಿ ಬಳಿಕ ತಗ್ಗು ಗುಂಡಿಗಳನ್ನು ಮುಚ್ಚುವ ಕೆಲಸ ಆರಂಭವಾಗುತ್ತದೆ. ಡಿಸೆಂಬರ್ ಅಂತ್ಯದೊಳಗೆ ಎಲ್ಲ ರಸ್ತೆ ಸರಿ ಮಾಡುತ್ತೇವೆ. ನಮ್ಮ ಕಡೆ ಇರುವ ದುಡ್ಡು ಕೊಟ್ಟಿದ್ದೇವೆ. ಇನ್ನು ಕೇಳಿದರೇ ಮತ್ತಷ್ಟು ದುಡ್ಡು ಕೊಡುತ್ತೇವೆ. ಆದರೆ, ನಮ್ಮ‌ ಮೊದಲ ಆಧ್ಯತೆ ಗುಂಡಿ ಮುಚ್ಚುವುದು ಎಂದರು.