ಸಾರಾಂಶ
ಕಡೂರು: ಪಟ್ಟಣದ ಎಂಎಸ್ಆರ್ ಇಂಗ್ಲೀಷ್ ಶಾಲೆಗೆ 2023-24ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಬಂದಿದೆ ಎಂದು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಎನ್. ಚಂದ್ರಶೇಖರ್ ತಿಳಿಸಿದರು.
ಕಡೂರು: ಪಟ್ಟಣದ ಎಂಎಸ್ಆರ್ ಇಂಗ್ಲೀಷ್ ಶಾಲೆಗೆ 2023-24ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಬಂದಿದೆ ಎಂದು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಎನ್. ಚಂದ್ರಶೇಖರ್ ತಿಳಿಸಿದರು. ಫಲಿತಾಂಶ ಕುರಿತು ಮಾಹಿತಿ ನೀಡಿದ ಅವರು, ವಿದ್ಯಾರ್ಥಿನಿ ಅಲ್ಬಿನಾ ಫಿರ್ದೋಸ್ 605 ಅಂಕ ಗಳಿಸಿ ಶಾಲೆಗೆ ಮೊದಲ ಸ್ಥಾನ ಪಡೆದು ಕಡೂರು ಶೈಕ್ಷಣಿಕ ವಲಯದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಐಶ್ವರ್ಯ ಆರಾಧ್ಯ 604 ಅಂಕ ಗಳಿಸಿ ಎರಡನೇ ಸ್ಥಾನ, ವರ್ಷಿಣಿ ಬೇದ್ರೆ 593 ಅಂಕ ಗಳಿಸಿ ಮೂರನೇ ಸ್ಥಾನ ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿರುವುದಾಗಿ ಹೇಳಿದರು.ಸಾಲಿನಲ್ಲಿ 26 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅತ್ಯುನ್ನತ ಶ್ರೇಣಿಯಲ್ಲಿ 9 ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ 13 ವಿದ್ಯಾರ್ಥಿಗಳು, ಸಾಮಾನ್ಯ ದರ್ಜೆಯಲ್ಲಿ 4 ವಿದ್ಯಾರ್ಥಿಗಳು ತೇರ್ಗಡೆ ಆಗುವ ಮೂಲಕ ಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ.
ಇದಕ್ಕೆ ಕಾರಣರಾದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಪೋಷಕರಿಗೆ ಶಾಲಾ ಆಡಳಿತ ಮಂಡಳಿ ಪರವಾಗಿ ಅಭಿನಂದಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಶಾಲೆ ಗೌರವಾಧ್ಯಕ್ಷ ಕೆ.ವಿ. ವಾಸು, ಕಾರ್ಯದರ್ಶಿ ಕೆ.ಜಿ. ಅಣ್ಣಪ್ಪ, ಖಜಾಂಚಿ ಸಿ.ಎಲ್. ದೇವರಾಜು, ನಿರ್ದೇಶಕರಾದ ವಿರೂಪಾಕ್ಷ, ಎಸ್.ಎಂ. ವಿಜಯಕುಮಾರ್, ಶೇಖರಯ್ಯ, ರಕ್ಷಿತ್ ಹರೀಶ್, ಪ್ರಾಂಶುಪಾಲ ಬಿ. ಓಂಕಾರಪ್ಪ ಮತ್ತಿತರರು ಇದ್ದರು. 11ಕೆಕೆಡಿಯು1.ಅಲ್ಬಿನಾ ಫಿರ್ದೋಸ್11ಕೆಕೆಡಿಯು1ಎ.ಐಶ್ಚರ್ಯ ಆರಾಧ್ಯ11ಕೆಕೆಡಿಯು1ಬಿ.ವರ್ಷಿಣಿ ಬೇದ್ರೆ