ಸಾರಾಂಶ
ನಗರಸಭೆಯಲ್ಲಿ 2025-26ನೇ ಸಾಲಿನ ಆಯವ್ಯಯ ಮಂಡಿಸಿದ್ದು, ಪ್ರಾರಂಭ ಶಿಲ್ಕು ೨೩.೪೩ ಕೋಟಿ ರು. ಗಳೊಂದಿಗೆ ರು. ೭೮.೬೯ ಕೋಟಿ ರು. ಆದಾಯ ಒಟ್ಟು ೧೦೨.೧೨ಕೋಟಿ ರು. ವೆಚ್ಚದ ವಿವಿಧ ಯೋಜನೆಗಳ ರೂಪಿಸಿ ಒಟ್ಟಾರೆ ೧.೯೨ ಕೋಟಿ ರು. ಉಳಿತಾಯ ಬಜೆಟ್‌ನ್ನು ಬುಧವಾರ ಮಂಡಿಸಲಾಯಿತು.
ನಗರಸಭೆಯಲ್ಲಿ 2025-26ನೇ ಸಾಲಿನ ಆಯವ್ಯಯ ಮಂಡಿಸಿದ್ದು, ಪ್ರಾರಂಭ ಶಿಲ್ಕು ೨೩.೪೩ ಕೋಟಿ ರು. ಗಳೊಂದಿಗೆ ರು. ೭೮.೬೯ ಕೋಟಿ ರು. ಆದಾಯ ಒಟ್ಟು ೧೦೨.೧೨ಕೋಟಿ ರು. ವೆಚ್ಚದ ವಿವಿಧ ಯೋಜನೆಗಳ ರೂಪಿಸಿ ಒಟ್ಟಾರೆ ೧.೯೨ ಕೋಟಿ ರು. ಉಳಿತಾಯ ಬಜೆಟ್‌ನ್ನು ಬುಧವಾರ ಮಂಡಿಸಲಾಯಿತು.
ನಗರದ ನಗರಸಭೆ ಆವರಣದಲ್ಲಿ ನಗರಸಭೆ ಅಧ್ಯಕ್ಷ ಯಮುನಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೌರಾಯುಕ್ತ ವಿಶ್ವೇಶ್ವರ ಬದರಗಡೆ ೨೦೨೫-೨೬ನೇ ಸಾಲಿನ ಆಯವ್ಯಯ ಮಂಡಿಸಿದರು. ಆಸ್ತಿ ತೆರಿಗೆಯಿಂದ ೫೭೫ ಲಕ್ಷ ರು., ನೀರು ಮತ್ತು ಒಳಚರಂಡಿ ಶುಲ್ಕ ೨೦೦ಲಕ್ಷರು., ಘನತ್ಯಾಜ್ಯ ನಿರ್ವಹಣಾ ಉಪ ಕರ ಹಾಗೂ ಬಳಕೆದಾರ ಶುಲ್ಕ ೭೮ಲಕ್ಷ ರು., ವಾಣಿಜ್ಯ ಮಳಿಗೆ ಬಾಡಿಗೆ, ನೆಲಬಾಡಿಗೆ ದಂಡ ಹಾಗೂ ಇತರೆ ಬಾಡಿಗೆ ಬಾಬ್ತು ೪೧.೫೦ಲಕ್ಷ ರು., ವ್ಯಾಪಾರ ಪರವಾನಗಿ ಶುಲ್ಕ ೧೮ಲಕ್ಷ ರು., ಮಾರುಕಟ್ಟೆ ಶುಲ್ಕ ೧೧ಲಕ್ಷ ರು., ಖಾತಾ ಬದಲಾವಣೆ ಶುಲ್ಕ ೬ಲಕ್ಷ ರು., ಕಟ್ಟಡ ಪರವಾನಿಗೆ ಬಾಬ್ತು ೨ಲಕ್ಷ ರು., ಜಾಹೀರಾತು ತೆರಿಗೆಯಿಂದ ೧ಲಕ್ಷ ರು., ಎಸ್‌ಎಫ್‌ಸಿ ವೇತನ ಬಾಬ್ತು ೬೯೧ಲಕ್ಷ ರು., ಎಸ್‌ಎಫ್‌ಸಿ ವಿದ್ಯುತ್ ಅನುದಾನ ೩೨೬ ಲಕ್ಷರು., ಎಸ್‌ಎಫ್‌ಸಿ ಮುಕ್ತನಿಧಿ ಅನುದಾನ ೧೨ಲಕ್ಷ ರು. ಮತ್ತಿತರೆ ಮೂಲಗಳಿಂದ ಆದಾಯವನ್ನು ನಿರೀಕ್ಷಿಸಲಾಗಿದೆ. ನಗರದ ಅಭಿವೃದ್ಧಿಗಾಗಿ ಸ್ವಚ್ಛ ಭಾರತ್ ಮಿಷನ್ ಅನುದಾನಡಿ ೧೧೧.೭೫ಲಕ್ಷ ರು., ಪಾದಚಾರಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ೧೦ಕೋಟಿ ರು., ಖಾಸಗಿ ಬಸ್ ನಿಲ್ದಾಣದ ಪಕ್ಕ ನಗರಸಭೆ ಖಾಲಿ ನಿವೇಶನದಲ್ಲಿ ಫುಡ್‌ಕೋರ್ಟ್ ನಿರ್ಮಾಣ, ೧೦ಲಕ್ಷ ರು. ವೆಚ್ಚದಲ್ಲಿ ಆಂತರಿಕ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ, ೮೨೫ಲಕ್ಷ ರು. ವೆಚ್ಚದಲ್ಲಿ ರಸ್ತೆ, ಒಳಚರಂಡಿ ದುರಸ್ತಿ, ಮರು ಡಾಂಬರೀಕರಣ, ಬೋರ್‌ವೆಲ್ ಪಂಪ್ ಮೋಟಾರ್ ಅಳವಡಿಸುವ ಕಾಮಗಾರಿ, ಮುಖ್ಯ ರಸ್ತೆ ಅಗಲೀಕರಣ, ದೋಬಿಘಾಟ್ ಅಭಿವೃದ್ಧಿಗೆ ೨೦ಲಕ್ಷ ರು., ಬಸ್ ತಂಗುದಾಣ ಅಭಿವೃದ್ಧಿ ೫೦ಲಕ್ಷ ರು. ಮೀಸಲಿರಿಸಲಾಗಿದೆ. ನಗರಸಭಾ ವ್ಯಾಪ್ತಿಯ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ೫೦ಲಕ್ಷ ರು., ರಾಜಕಾಲುವೆ ಒತ್ತುವರಿ ತೆರವು ಕಾರ್ಯಕ್ಕೆ ರು.. ೧೦ಲಕ್ಷ ರು., ನಗರಸಭಾ ಆಸ್ತಿಗಳ ಸಂರಕ್ಷಣೆಗೆ ೨೫ಲಕ್ಷ ರು., ಬೀದಿ ನಾಯಿಗಳ ಹಾವಳಿ ತಡೆಯಲು ೩೦ಲಕ್ಷ ರು. ಮೀಸಲಿರಿಸಲಾಗಿದೆ. ಒಟ್ಟಾರೆ ಈ ಸಾಲಿನಲ್ಲಿ ಆಯವ್ಯಯ ಸ್ಥೂಲ ವಿವರದಲ್ಲಿ ಪ್ರಾರಂಭ ಶಿಲ್ಕು ೨೩.೪೩ ಕೋಟಿ ರು., ನಿರೀಕ್ಷಿತ ಜಮಾ ೭೮.೬೯ ಕೋಟಿ ರು.. ಒಟ್ಟು ಆದಾಯ ೧೦೨.೧೨ ಕೋಟಿ ರು., ವೆಚ್ಚ ೧೦೦.೨೦ ಕೋಟಿ ರು. ಆಗಿದ್ದು, ಒಟ್ಟಾರೆ ನಿವ್ವಳ ಆದಾಯ ೧.೯೨ ಕೋಟಿ ರು. ಗಳ ಉಳಿತಾಯ ಬಜೆಟ್ ಮಂಡಿಸಿದರು. ಈ ವೇಳೆ ಶಾಸಕ ಕೆ. ಷಡಕ್ಷರಿ ಮಾತನಾಡಿ, ಇದು ಆಶಾದಾಯಕ ಬಜೆಟ್ ಇದಾಗಿದ್ದು, ನಗರದ ಅಭಿವೃದ್ಧಿಗೆ ಪೂರಕವಾಗಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಹೊಸ ಯೋಜನೆಗಳನ್ನು ರೂಪಿಸಲಾಗಿದೆ. ಎಲ್ಲಾ ಸದಸ್ಯರ ಸಹಕಾರ ನೀಡಿದರೆ ನಗರ ಮತ್ತಷ್ಟು ಅಭಿವೃದ್ಧಿಯಾಗಲಿದ್ದು, ನಗರದಲ್ಲಿ ಏನೇ ಸಮಸ್ಯೆಗಳಿದ್ದರು. ಪರಿಹರಿಸುವ ಕೆಲಸ ಮಾಡುತ್ತೇನೆ ಎಂದರು. ನಗರಸಭೆ ಸದಸ್ಯರುಗಳಾದ ಸೊಪ್ಪು ಗಣೇಶ್, ಇತರರು ಮಾತನಾಡಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್, ಉಪಾಧ್ಯಕ್ಷೆ ಮೇಘಭೂಷಣ್, ಸೇರಿದಂತೆ ನಗರಸಭೆ ಸದಸ್ಯರುಗಳಿದ್ದರು.ಬಾಕ್ಸ್
ತಿಪಟೂರು ನಗರಕ್ಕೆ ಕುಡಿಯುವ ನೀರಿನ ಅವಶ್ಯಕತೆ ಹೆಚ್ಚಿದ್ದು ಸರ್ಕಾರ ಯಾವ ರೀತಿ ಕ್ರಮಕೈಗೊಳ್ಳುತ್ತದೆಯೋ ಅದರಂತೆ ನಾನು ನಡೆದುಕೊಳ್ಳಬೇಕು. ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ. ಈ ಹಿಂದೆ ನಾನು ನಗರದ ಕುಡಿಯುವ ನೀರಿನ ದೃಷ್ಟಿಯಿಂದ ನೊಣವಿನಕೆರೆಗೆ 0.3ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಹಂಚಿಕೆ ಮಾಡಿಸಿದ್ದ ಪರಿಣಾಮ ಈ ಭಾಗದ ರೈತರಿಗೆ ನೀರಿನ ಸಮಸ್ಯೆಯಾಗಿಲ್ಲ. ಹೆಚ್ಚುವರಿ ನೀರು ಬೇರೆಡೆಗೆ ಹೋದರೆ ರೈತರಿಗೆ ತೊಂದರೆ. ಆದ್ದರಿಂದ ನಗರದ ಕುಡಿಯುವ ನೀರಿಗೆ ಯಾರು ಸಹ ವಿರೋಧ ಮಾಡದೆ ಎಲ್ಲರು ಒಮ್ಮತದಿಂದ ಸಹಕರಿಸಬೇಕು. ಇದು ಸರ್ಕಾರ ನಿರ್ಧಾರವೂ ಸಹ ಆಗಿದೆ.---- ಕೆ. ಷಡಕ್ಷರಿ, ಶಾಸಕರು, ತಿಪಟೂರು.