ಪಿಯು ಕನ್ನಡ ಪರೀಕ್ಷೆಗೆ 1097 ವಿದ್ಯಾರ್ಥಿಗಳು ಗೈರು

| Published : Mar 02 2024, 01:46 AM IST

ಪಿಯು ಕನ್ನಡ ಪರೀಕ್ಷೆಗೆ 1097 ವಿದ್ಯಾರ್ಥಿಗಳು ಗೈರು
Share this Article
  • FB
  • TW
  • Linkdin
  • Email

ಸಾರಾಂಶ

ಮೊದಲ ದಿನ ಕನ್ನಡ ವಿಷಯದ ಪರೀಕ್ಷೆಯಲ್ಲಿ ಒಟ್ಟು 19,060 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು, ಇದರಲ್ಲಿ ಒಟ್ಟು 17,963 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಉಳಿದಂತೆ 1097 ವಿದ್ಯಾರ್ಥಿಗಳು ಗೈರಾಗಿದ್ದರು.

ರಾಯಚೂರು: ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಶುಕ್ರವಾರದಿಂದ ಆರಂಭಗೊಂಡವು. ಜಿಲ್ಲೆಯ ಸುಮಾರು 42 ಕೇಂದ್ರಗಳಲ್ಲಿ ಶಾಂತಿ-ಸುವ್ಯವಸ್ಥಿತವಾಗಿ ಪರೀಕ್ಷೆಗಳು ನಡೆದವು.

ಮೊದಲ ದಿನ ಕನ್ನಡ ವಿಷಯದ ಪರೀಕ್ಷೆಯಲ್ಲಿ ಒಟ್ಟು 19,060 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು, ಇದರಲ್ಲಿ ಒಟ್ಟು 17,963 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಉಳಿದಂತೆ 1097 ವಿದ್ಯಾರ್ಥಿಗಳು ಗೈರಾಗಿದ್ದರು.

ರಾಯಚೂರು ತಾಲೂಕಿನಲ್ಲಿ 5100 ವಿದ್ಯಾರ್ಥಿಗಳು ಹಾಜರಾಗಿದ್ದರೆ, 328 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಲಿಂಗಸುಗೂರು 3911 ಹಾಜರು 124 ಗೈರು, ಮಾನ್ವಿ 1908 ಹಾಜರು 156 ಗೈರು, ಸಿಂಧನೂರು ತಾಲೂಕಿನಲ್ಲಿ 3640 ಹಾಜರು 202 ವಿದ್ಯಾರ್ಥಿಗಳು ಗೈರು, ದೇವದುರ್ಗ ತಾಲೂಕಿನಲ್ಲಿ 1863 ವಿದ್ಯಾರ್ಥಿಗಳು ಹಾಜರು ಹಾಗೂ 194 ವಿದ್ಯಾರ್ಥಿಗಳು ಗೈರು, ಮಸ್ಕಿ 887 ಹಾಜರು 54 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಹಾಗೂ ಸಿರವಾರ ತಾಲೂಕಿನಲ್ಲಿ 654 ವಿದ್ಯಾರ್ಥಿಗಳು ಹಾಜರಾಗಿದ್ದರೆ 39 ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.