೧೧೩ರ ಬಸಮ್ಮನಿಗೆ 70 ಮೊಮ್ಮಕ್ಕಳು!

| Published : Mar 18 2025, 12:30 AM IST

ಸಾರಾಂಶ

೧೯೧೨ರಲ್ಲಿ ಚನ್ನಬಸಪ್ಪ ಮತ್ತು ಅಂಬ್ರಮ್ಮ ದಂಪತಿಯ 4ನೇ ಮಗಳಾಗಿ ಬಸಮ್ಮ ಬೆಲ್ಲದ ಕುಷ್ಟಗಿಯಲ್ಲಿ ಜನಿಸಿದರು. ಬಸಮ್ಮ 3 ತಿಂಗಳ ಮಗುವಿದ್ದಾಗ, ಪತಿ ಗುಂಡಪ್ಪ ಹನ್ನೊಂದು ತಿಂಗಳ ಕೂಸು. ತೊಟ್ಟಿಲಲ್ಲೆ ಇವರ ವಿವಾಹ. ಇವರಿಬ್ಬರ ಮದುವೆ ಹಿರಿಯರ ಆಶೆಯಾಗಿತ್ತು. ಅವರ ಒಪ್ಪಂದದ ಪ್ರಕಾರ ಮದುವೆ ನಡೆದಿತ್ತು.

ಯಲಬುರ್ಗಾ:

ಇಳಿವಯಸ್ಸಿನಲ್ಲಿಯೋ ಉತ್ತಮ ಆರೋಗ್ಯ, ಮೆಲ್ಲನೆ ಧ್ವನಿಯಲ್ಲಿ ಗಟ್ಟಿಯಾದ ಮಾತು, ದೂರದೃಷ್ಟಿ, ಜ್ಞಾಪಕ ಶಕ್ತಿ ಅಗಾಧ. ೧೧೩ ವರ್ಷವಾದರೂ ನಿತ್ಯ ಪೂಜೆ, ಶಿವನಾಮಸ್ಮರಣೆ ತಪ್ಪಿಸದ ಹಿರಿಯ ಜೀವಿ.

ಇದು ತಾಲೂಕಿನ ಯಡ್ಡೋಣಿ ಗ್ರಾಮದ ಬಸಮ್ಮ ಗುಂಡಪ್ಪ ಬೆಲ್ಲದ ಶತಾಯುಷಿಯ ದಿನಚರಿ.

ಬಸಮ್ಮಗೆ ಮೂವರು ಪುತ್ರಿಯರು, ಓರ್ವ ಪುತ್ರ. ಇದರಲ್ಲಿ ಹಿರಿಯ ಮಗಳು ಮಾತ್ರ ಬದುಕಿದ್ದಾರೆ. ಇವರಿಗೆ ಗಂಡು, ಹೆಣ್ಣು ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು, ಗಿರಿ ಮೊಮ್ಮಕ್ಕಳು ಸೇರಿ ಒಟ್ಟು ೭೦ಕ್ಕೂ ಅಧಿಕ ಮೊಮ್ಮಕ್ಕಳು ಇರುವುದು ದಾಖಲೆಯೇ ಸರಿ.

೧೯೧೨ರಲ್ಲಿ ಚನ್ನಬಸಪ್ಪ ಮತ್ತು ಅಂಬ್ರಮ್ಮ ದಂಪತಿಯ 4ನೇ ಮಗಳಾಗಿ ಬಸಮ್ಮ ಬೆಲ್ಲದ ಕುಷ್ಟಗಿಯಲ್ಲಿ ಜನಿಸಿದರು. ಬಸಮ್ಮ 3 ತಿಂಗಳ ಮಗುವಿದ್ದಾಗ, ಪತಿ ಗುಂಡಪ್ಪ ಹನ್ನೊಂದು ತಿಂಗಳ ಕೂಸು. ತೊಟ್ಟಿಲಲ್ಲೆ ಇವರ ವಿವಾಹ. ಇವರಿಬ್ಬರ ಮದುವೆ ಹಿರಿಯರ ಆಶೆಯಾಗಿತ್ತು. ಅವರ ಒಪ್ಪಂದದ ಪ್ರಕಾರ ಮದುವೆ ನಡೆದಿತ್ತು. ಇವರ ಮೂಲ ಅಡ್ಡ ಹೆಸರು ಹಿರಶೆಟ್ಟರ್. ಅಡುಗೆ ಸಾಮಗ್ರಿ, ಎಣ್ಣೆ ಹಾಗೂ ಅತಿ ಹೆಚ್ಚು ಬೆಲ್ಲದ ವ್ಯಾಪಾರ ಮಾಡುತ್ತಿದ್ದರಿಂದ ಇವರು ಬೆಲ್ಲದ ಬಸಮ್ಮ ಎಂದೇ ಗುರುತಿಸಲ್ಪಟ್ಟರು.

ದೀರ್ಘಾಯುಷ್ಯದ ಗುಟ್ಟು:

ನವಣಕ್ಕಿ, ಮುದ್ದೆ, ನುಚ್ಚು, ಹಾಲು, ಮೊಸರು, ಮಜ್ಜಿಗೆ, ಕಾಯಿಪಲ್ಲೆ ಅಧಿಕವಾಗಿ ಸೇವಿಸುವ ಬಸಮ್ಮ, ಮಿತ ಆಹಾರ ಹಾಗೂ ಹೆಚ್ಚು ನೀರು ಕುಡಿಯುವುದು ಇವರ ದೀರ್ಘಾಯುಷ್ಯಕ್ಕೆ ಪೂರಕವಾಗಿವೆ. ಕೇವಲ ಐವತ್ತು ಪೈಸೆಗೆ ೫ ಕಿಲೋಮಿಟರ್ ಬರಿಗಾಲಲ್ಲಿ ನಡೆದುಕೊಂಡು ಹೋಗಿ 12 ಗಂಟೆ ಕೆಲಸ ಮಾಡಿದ್ದಾರೆ.

ಹೀಗೆ ತುಂಬು ಕುಟುಂಬದಲ್ಲಿ ಜೀವನ ಸಾಗಿಸುತ್ತಿರುವ ಬಸಮ್ಮ ಯುವಕರಿಗೆ ಸ್ಫೂರ್ತಿಯಾಗಿ, ಇಳಿವಯಸ್ಸಿನಲ್ಲೂ ಯಾರನ್ನು ನೆಚ್ಚಿಕೊಳ್ಳದೆ ತಮ್ಮ ನಿತ್ಯ ಕೆಲಸಗಳನ್ನು ತಾವೇ ಮಾಡಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.ಶತಾಯುಷಿ ಬಸಮ್ಮನಿಗೆ ಈ ವರೆಗೆ ಬಿಪಿ, ಶುಗರ್, ಸಾಮಾನ್ಯ ಯಾವ ಕಾಯಿಲೆ ಬಂದಿಲ್ಲ. ಕಿವಿಗಳು ಸ್ಪಷ್ಟವಾಗಿ ಕೇಳುತ್ತವೆ, ಕಣ್ಣು ಕಾಣುತ್ತವೆ. ನಡಿಗೆಯಲ್ಲಿ ನಡುಕವಿಲ್ಲ ಅವರ ಹಣೆ ಮೇಲೆ ವಿಭೂತಿ ಬೊಟ್ಟು ನೋಡಿದರೆ ಶಿವಶರಣೆಯನ್ನೇ ನೋಡಿದಂತಾಗಿದೆ.

ಡಾ. ಪಿ.ಐ. ಗುಡಿ ಆಡಳಿತಾಧಿಕಾರಿ ಬಾಪೂಜಿ ಶಿಕ್ಷಣ ಸಂಸ್ಥೆ ಮಂಗಳೂರನಮ್ದು ಜವಾರಿ ಊಟ. ರೊಟ್ಟಿ, ಖಾರದ ಪುಡಿ ನಮಗೆ ಬಲು ಇಷ್ಟವಾದ ಊಟವಾಗಿದೆ. ಮಿತವಾಗಿ ಊಟ ಮಾಡ್ತಿನಿ. ಹಿಂದೆ ೫೦ ಪೈಸೆಗೆ ಬರಿಗಾಲಲ್ಲಿ ಹೋಗಿ ಕೂಲಿ ಕೆಲಸ ಮಾಡಿನಿ. ಕಷ್ಟಪಟ್ಟು ದುಡಿದು ನಾಲ್ಕು ಪ್ಲಾಟು ಹಿಡಿದಿನಿ. ಜಾನಪದ ಇನ್ನಿತರ ಹಾಡು ಹಾಡ್ತೀನಿ.

ಬಸಮ್ಮ ಬೆಲ್ಲದ ಶತಾಯುಷಿ