ದಾಬಸ್‍ಪೇಟೆ: ಸೋಂಪುರ ಹೋಬಳಿಯ ಕಂಬಾಳು ಹಾಲು ಉತ್ಪಾದಕರ ಸಂಘಕ್ಕೆ 12 ನಿರ್ದೇಶಕರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾಗರಾಜು ಎಚ್.ಘೋಷಿಸಿದರು

ದಾಬಸ್‍ಪೇಟೆ: ಸೋಂಪುರ ಹೋಬಳಿಯ ಕಂಬಾಳು ಹಾಲು ಉತ್ಪಾದಕರ ಸಂಘಕ್ಕೆ 12 ನಿರ್ದೇಶಕರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾಗರಾಜು ಎಚ್.ಘೋಷಿಸಿದರು.

ಸಾಮಾನ್ಯ ಸ್ಥಾನದಿಂದ ಚುನಾವಣೆಯಲ್ಲಿ ನಾಗರಾಜು, ಸುಕುಮಾರ್, ನಿರಂಜನ್, ವಸಂತ್ ಕುಮಾರ್, ನಂಜಪ್ಪ, ಶ್ರೀನಿವಾಸ್, ಬಸವರಾಜು ಆಯ್ಕೆಯಾದರೆ, ಹಿಂದುಳಿದ ಪ್ರ ವರ್ಗ ಎ ಮೀಸಲು ಸ್ಥಾನದಿಂದ ಶೇಷಾಚಲಮೂರ್ತಿ ಆಯ್ಕೆಯಾದರು, ಅವಿರೋಧವಾಗಿ ಹಿಂದುಳಿದ ಪ್ರವರ್ಗ ಬಿ ಮೀಸಲು ಸ್ಥಾನದಿಂದ ರುದ್ರೇಶ್, ಪ.ಜಾತಿ ಮೀಸಲು ಸ್ಥಾನದಿಂದ ಶಿವಕುಮಾರ್, ಮಹಿಳಾ ಮೀಸಲು ಸ್ಥಾನದಿಂದ ಪುಷ್ಪಲತಾ, ಲಕ್ಷ್ಮೀದೇವಮ್ಮ ಆಯ್ಕೆಯಾದ ಹಿನ್ನಲೆ, ಪಟಾಕಿ ಸಿಡಿಸಿ, ಹೂ ಮಾಲೆ ಹಾಕಿ ಅಭಿನಂದನೆ ಸಲ್ಲಿಸಿದರು.

ಶಿವಗಂಗೆ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಬಿ.ಪ್ರಭುದೇವ್ ಮಾತನಾಡಿ, ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಕಂಬಾಳು, ಗುರುವನಹಳ್ಳಿ, ಬಸವಾಪಟ್ಟಣ ಮತದಾರರಿಗೆ ಧನ್ಯವಾದ ತಿಳಿಸುತ್ತೇವೆ. ಚುನಾವಣೆಯಲ್ಲಿ 12 ಜನ ಸಿಂಡಿಕೇಟ್ ಅಭ್ಯರ್ಥಿಗಳು ಪಕ್ಷಾತೀತವಾಗಿ ಗೆಲುವು ಸಾಧಿಸಿದ್ದು, ರೈತ ಪರ ನಿಲುವುಗಳ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸುವಂತೆ ತಿಳಿಸಿ, ನೂತನ ನಿರ್ದೇಶಕರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮೋಹನ್ ಕುಮಾರ್, ದೇವರಾಜು, ಜಗದೀಶ್, ಮಹೇಶ್, ಜ್ಞಾನೇಶ್, ಹೇಮರಾಜು, ಗುರವನಹಳ್ಳಿ ನಾಗೇಶ್, ಬೈರೇಗೌಡ್ರು, ಶಿವರಾಮಯ್ಯ, ಬಸವಾಪಟ್ಟಣ ಬಸವರಾಜು, ಕಾರ್ಯದರ್ಶಿ ಚಿದಾನಂದ್ ಇತರರಿದ್ದರು.

ಪೋಟೋ 1 : ಸೋಂಪುರ ಹೋಬಳಿಯ ಕಂಬಾಳು ಹಾಲು ಉತ್ಪಾದಕರ ಸಂಘಕ್ಕೆ ಆಯ್ಕೆಯಾದ ನೂತನ ನಿರ್ದೇಶಕರನ್ನು ಗ್ರಾಮಸ್ಥರು ಅಭಿನಂದಿಸಿ ಶುಭಕೋರಿದರು.