ಸಾರಾಂಶ
ಕೊಳ್ಳೇಗಾಲ ಪಟ್ಟಣದ ಉಮಾಶಂಕರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸಭೆಯನ್ನು ಅಧ್ಯಕ್ಷ ಎಚ್ಎಂ ಮಹದೇವಪ್ಪ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪ್ರಸಕ್ತ 2023-24 ನೇ ಸಾಲಿನಲ್ಲಿ ₹13ಲಕ್ಷಕ್ಕೂ ಅಧಿಕ ಲಾಭ ದೊರೆತಿದೆ ಎಂದು ಅಧ್ಯಕ್ಷ ಎಚ್.ಎಂ.ಮಹದೇವಪ್ಪ ಹೇಳಿದರು. ಉಮಾಶಂಕರ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದ್ದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ನಮ್ಮ ಸಹಕಾರ ಸಂಘ ಲಾಭದತ್ತ ಸಾಗಿದ್ದು ಒಟ್ಟಾರೆ 5 ವರ್ಷಗಳಲ್ಲಿ ₹8.67ಕೋಟಿ ಕೆಸಿಸಿ ಬೆಳೆ ಸಾಲ, 6 ಟ್ರ್ಯಾಕ್ಟರ್ ಸಾಲ, ಮಧುವನಹಳ್ಳಿಯಲ್ಲಿ ರೈತರು, ಗ್ರಾಹಕರ ಅನುಕೂಲಕ್ಕಾಗಿ ಪಡಿತರೆ ವಿತರಣೆ, ರಸಗೊಬ್ಬರ ಮಾರಾಟಕ್ಕಾಗಿ ₹25ಲಕ್ಷ ವೆಚ್ಚದಲ್ಲಿ ಗೋದಾಮು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ವ ಸದಸ್ಯರ ಸಹಕಾರದೊಂದಿಗೆ ಸಂಘದ ಮುಂಭಾಗದಲ್ಲಿ ಮಳಿಗೆ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದರು.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾಗರಾಜು ಮಾತನಾಡಿ, ಸಂಘವು ₹14ಕೋಟಿಗೂ ಅಧಿಕ ಮೊತ್ತದ ಬೆಳೆ ಸಾಲವನ್ನು 1147ಮಂದಿಗೆ ವಿತರಿಸಲಾಗಿದೆ, ಚಿನ್ನಾಭರಣ ಸಾಲವನ್ನು 122 ಮಂದಿಗೆ ₹46 ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ನೀಡಲಾಗಿದೆ. ವ್ಯಾಪಾರಾಭಿವೃದ್ಧಿ ಸಾಲಕ್ಕಾಗಿ 433ಮಂದಿಗೆ ₹2.99ಕೋಟಿ ನೀಡಲಾಗಿದೆ. ರೈತರು ಹಾಗೂ ಸದಸ್ಯರ ಏಳ್ಗೆಗಾಗಿ ಸಂಘ ಎಲ್ಲಾರ ಸಹಕಾರದೊಂದಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದು ಮುಂದಿನ ದಿನಗಳಲ್ಲೂ ಸಹ ಸರ್ವ ಸದಸ್ಯರು, ಆಡಳಿತ ಮಂಡಳಿ ಸಹಕಾರ ಅತ್ಯಗತ್ಯ ಎಂದರು.
ಈ ವೇಳೆ ಈ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ್ದ ಸದಸ್ಯರ ಮಕ್ಕಳಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಎಂ.ಶೀಲಾ, ನಿರ್ದೇಶಕರಾದ ಪಿ.ಬಿ.ಚಿಕ್ಕಬಸವೇಗೌಡ, ಎಸ್.ಶಿವಮೂರ್ತಿ, ಪಿ.ಮಹಾದೇವಸ್ವಾಮಿ, ಕೆ.ಎಸ್.ಮಹೇಶ್, ಎಸ್.ರಮೇಶ್, ಪಿ.ಸೋಮಶೇಖರ್, ಮಹೇಶ್, ಪಿ.ಬಾಲಸುಬ್ರಮಣ್ಯಸ್ವಾಮಿ, ಶೈಲಜಾ, ಜಿಲ್ಲಾ ಸಹಕಾರ ಕೇಂದ್ರ ಮೇಲ್ವಿಚಾರಕರು ಆರ್.ಕುಮಾರ್, ಮುಖ್ಯ ಕಾರ್ಯನಿರ್ವಾಹ ಣಾಧಿಕಾರಿ ಬಿ.ನಾಗರಾಜು, ಸದಸ್ಯರುಗಳಾದ ಅಣಗಳ್ಳಿ ಬಸವರಾಜು, ಮಠದ ಬೀದಿ ಬಸವರಾಜು, ಇನ್ನಿತರರಿದ್ದರು.