ಪಂಚಮಸಾಲಿ ಟ್ರಸ್ಟ್ ಸದಸ್ಯರು ಲೆಕ್ಕವನ್ನೇ ಕೊಟ್ಟಿಲ್ಲ, ಲೆಕ್ಕದಲ್ಲೂ ಮೋಸ ಮಾಡಿದ್ದು, ಟ್ರಸ್ಟ್‌ನ ಬೈಲಾ ಪ್ರಕಾರ ಪಂಚಮಸಾಲಿ ಸಮಾಜದ ಗಣ್ಯರು, ಸಂಘದ ಸದಸ್ಯರ ತೀರ್ಮಾನವೇ ಅಂತಿಮ ಎಂದು ಶ್ರೀ ಮಠದ ಆಡಳಿತಾಧಿಕಾರಿ ಡಾ.ರಾಜಕುಮಾರ ಹೇಳಿದ್ದಾರೆ.
- ಸಮಾಜದ ಸಭೆಯಲ್ಲಿ ಟ್ರಸ್ಟಿಗಳು ಲೆಕ್ಕ ಕೊಟ್ಟಿಲ್ಲವೆಂದು ಮಠದ ಆಡಳಿತಾಧಿಕಾರಿ ಡಾ.ರಾಜಕುಮಾರ ಆರೋಪ
- - -- ಸಮಿತಿ ನೋಟಿಸ್‌ಗೆ ಉತ್ತರ ಕೊಡದ ಪ್ರಧಾನ ಧರ್ಮದರ್ಶಿ: ಶಂಕರಗೌಡ ಪಾಟೀಲ
- ವಚನಾನಂದ ಸ್ವಾಮೀಜಿಗಳನ್ನು ಪೀಠಾಧ್ಯಕ್ಷರಾಗಿ ಮುಂದುವರಿಸಲು ನಿರ್ಣಯ ಕೈಗೊಂಡಿದ್ದೇವೆ- ಶ್ವಾಸ ಗುರುಪೀಠ ಹಾಗೂ ಹರಿಹರ ಪಂಚಮಸಾಲಿ ಪೀಠದ ಬಗ್ಗೆ ಸಂಪುಟ ಪತ್ರದಲ್ಲಿ ಅನುಮೋದನೆ ಇಲ್ಲ
- ಎರಡೂ ಪೀಠದಲ್ಲೂ ಶ್ರೀಗಳು ಮುಂದುವರಿಯಲು ಸರ್ವಾನುಮತದ ನಿರ್ಣಯ ಕೈಗೊಂಡಿದ್ದೇವೆ- - -
ಕನ್ನಡಪ್ರಭ ವಾರ್ತೆ ದಾವಣಗೆರೆಪಂಚಮಸಾಲಿ ಟ್ರಸ್ಟ್ ಸದಸ್ಯರು ಲೆಕ್ಕವನ್ನೇ ಕೊಟ್ಟಿಲ್ಲ, ಲೆಕ್ಕದಲ್ಲೂ ಮೋಸ ಮಾಡಿದ್ದು, ಟ್ರಸ್ಟ್‌ನ ಬೈಲಾ ಪ್ರಕಾರ ಪಂಚಮಸಾಲಿ ಸಮಾಜದ ಗಣ್ಯರು, ಸಂಘದ ಸದಸ್ಯರ ತೀರ್ಮಾನವೇ ಅಂತಿಮ ಎಂದು ಶ್ರೀ ಮಠದ ಆಡಳಿತಾಧಿಕಾರಿ ಡಾ.ರಾಜಕುಮಾರ ಹೇಳಿದ್ದಾರೆ.
ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಉಚ್ಛಾಟನೆ ಮಾಡಿರುವುದಾಗಿ ಟ್ರಸ್ಟ್ ಘೋಷಣೆ ಮಾಡಿದ ನಂತರ ಸಂಜೆ ಸಮಾಜದ ಸಭೆಯಲ್ಲಿ ಅವರು ಮಾತನಾಡಿದರು. ಶ್ರೀಮಠಕ್ಕೆ ಸರ್ಕಾರದಿಂದ, ಸಮಾಜದಿಂದ ಬಂದ ಅನುದಾನ, ದೇಣಿಕೆ, ಕಾಣಿಕೆ ಬಗ್ಗೆ ಸರಿಯಾದ ಲೆಕ್ಕ ಕೊಟ್ಟಿಲ್ಲ. ಈ ಎಲ್ಲ ವಿಚಾರವನ್ನು ಸಮಾಜದ ಮುಂದಿಡುತ್ತಿದ್ದೇವೆ. ಸಮಾಜದ ನಿರ್ಣಯಗಳನ್ನು ನಿಮ್ಮ ಮುಂದೆ ಮಂಡಿಸುತ್ತೇವೆ ಎಂದರು.ಸಭೆಯ ನಡವಳಿ ಓದಿದ ಪಂಚಮಸಾಲಿ ಮುಖಂಡ ಶಂಕರಗೌಡ ಪಾಟೀಲ, ಮಾ.24ರ ಸಭೆಯಲ್ಲಿ ನಾವು ಕೆಲವು ನಿರ್ಣಯ ಕೈಗೊಂಡಿದ್ದೆವು. ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಟ್ರಸ್ಟ್ ಕೈಗೊಂಡ ನಿರ್ಣಯಗಳವು. ಟ್ರಸ್ಟ್‌ನಲ್ಲಿ ಆದ ಅವ್ಯವಹಾರದ ಬಗ್ಗೆ ತನಿಖಾ ವರದಿಗೆ ಎಂ.ಜಿ.ಪರಮೇಶ್ವರ ಗೌಡ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು ಎಂದು ಸಭೆಯ ಗಮನಕ್ಕೆ ತಂದರು. ಪ್ರಧಾನ ಧರ್ಮದರ್ಶಿಗೆ ನೋಟಿಸ್ ನೀಡಿ, ಉತ್ತರ ನೀಡಲು ಅವಕಾಶ ಸಹ ಕೊಟ್ಟಿದ್ದೆವು. ಏ.10ರಂದು ಗಡುವು ನೀಡಿದರೂ ಉತ್ತರ ನೀಡಿಲ್ಲ. ಟ್ರಸ್ಟ್‌ನ್ನು ಪ್ರತಿ 5 ವರ್ಷಕ್ಕೊಮ್ಮೆ ನಾಲ್ಕನೇ ಒಂದು ಭಾಗ ಸದಸ್ಯರನ್ನು ನೇಮಕವೇ ಮಾಡಿಲ್ಲ. ಹಣ ದುರ್ಬಳಕೆ ಜೊತೆಗೆ ಟ್ರಸ್ಟ್ ಬೈಲಾವನ್ನೇ ಉಲ್ಲಂಘನೆ ಮಾಡಿದ್ದಾರೆ. ಕರ್ನಾಟಕ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘವು ಗೌರವ, ಶ್ರದ್ಧಾ-ಭಕ್ತಿ ನೀಡದಿರುವುದರಿಂದ ಹಾಲಿ ಇರುವ ಧರ್ಮದರ್ಶಿ ಬದಲಾಯಿಸಲು ತೀರ್ಮಾನಿದೆ ಎಂದು ಅವರು ಹೇಳಿದರು.
ಶ್ರೀ ವಚನಾನಂದ ಸ್ವಾಮೀಜಿ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ವಚನಾನಂದ ಸ್ವಾಮೀಜಿಗಳನ್ನು ಪೀಠಾಧ್ಯಕ್ಷರಾಗಿ ಮುಂದುವರಿಸಲು ನಿರ್ಣಯ ಕೈಗೊಂಡಿದ್ದೇವೆ. ಟ್ರಸ್ಟ್‌ನ ಸದಸ್ಯರು ಇಂದು ಕೈಗೊಂಡ ನಿರ್ಣಯ ಕೈಗೊಂಡಿದ್ದೇವೆ. ಟ್ರಸ್ಟ್‌ನ 13 ಟ್ರಸ್ಟಿಗಳು ಇಂದು ಕೈಗೊಂಡ ನಿರ್ಣಯವನ್ನು ಸರ್ವಾನುಮತದಿಂದ ನಾವು ತಿರಸ್ಕಾರ ಮಾಡಿದ್ದೇವೆ. ಶ್ವಾಸ ಗುರುಪೀಠ ಹಾಗೂ ಹರಿಹರ ಪಂಚಮಸಾಲಿ ಪೀಠದ ಬಗ್ಗೆ ಸಂಪುಟ ಪತ್ರದಲ್ಲಿ ಅನುಮೋದನೆ ಇಲ್ಲ. ಎರಡೂ ಪೀಠದಲ್ಲೂ ಶ್ರೀಗಳು ಮುಂದುವರಿಯಲು ಸರ್ವಾನುಮತದ ನಿರ್ಣಯ ಕೈಗೊಂಡಿದ್ದೇವೆ ಎಂದು ಅವರು ಸಭೆಯ ನಡವಳಿಯನ್ನು ವಿವರಿಸಿದರು. ಅದಕ್ಕೆ ಹರ ಹರ ಮಹಾದೇವ ಘೋಷಣೆ ಮೊಳಗಿಸುವುದರೊಂದಿಗೆ ಸಭೆಯ ನಿರ್ಣಯ ಕೈಗೊಂಡರು.- - -
