ಸಾರಾಂಶ
ಕನ್ನಡಪ್ರಭ ವಾರ್ತೆ ಕೊಲ್ಹಾರ
ತಾಲ್ಲೂಕಿನ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ಡಿಜಿಎಂ ಅನ್ನಪ್ಪ ದೇವಮನೆ 15 ದಿನಗಳ ಗಡುವು ನೀಡಿದ್ದಾರೆ.ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಗುತ್ತಿಗೆ ಕಾರ್ಮಿಕರ ಸಂಘಟನೆ ಎನ್‌ಟಿಪಿಸಿ ಗೇಟ್ ಎದುರಿಗೆ ಸೋಮವಾರ ಕಾರ್ಮಿಕರು ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಅವರು ಭರವಸೆಯನ್ನು ನೀಡಿದ್ದಾರೆ. ಎನ್‌ಟಿಪಿಸಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಕಾರ್ಯನಿರ್ವಹಿಸುತ್ತಿರುವ ನಿರ್ವಹಿಸುತ್ತಿರುವ ಕಾರ್ಮಿಕರ ಸಮಸ್ಯೆಗಳನ್ನು ಹಲವಾರು ಬಾರಿ ಎನ್‌ಟಿಪಿಸಿ ಅಧಿಕಾರಿಗಳಿಗೆ ಮೌಖಿಕವಾಗಿ ಹಾಗೂ ಪತ್ರಗಳ ಮುಖಾಂತರ ಮನವಿ ಸಲ್ಲಿಸಲಾಗಿತ್ತು. ಮೇಲಾಧಿಕಾರಿಗಳು ಮನವಿಗಳಿಗೆ ಸ್ಪಂದಿಸಿರಲಿಲ್ಲ. ತಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸಮಸ್ಯೆಗಳನ್ನು 15 ದಿನದ ಒಳಗಾಗಿ ಈಡೇರಿಸಬೇಕು ಎಂದು ಶನಿವಾರದಿಂದ ಸೋಮವಾರದವರೆಗೂ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು.ಗುತ್ತಿಗೆ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಬಸವರಾಜ ಆಲೂರ, ಅಧ್ಯಕ್ಷ ಆರೀಫ್ ತಾಳಿಕೋಟಿ, ಪ್ರಧಾನ ಕಾರ್ಯದರ್ಶಿ ಮಹೇಶ ಕೊಲಕಾರ, ಹಸನ್ ಚೌರಾದ್, ರತನ್ ಸಿಂಗ್ ಚಿಮ್ಮಲಗಿ ಮಾತನಾಡಿ, ಸಿಎಚ್‌ಪಿ ಮತ್ತು ಎಎಚ್‌ಪಿ ಮತ್ತು ಇತರೆ ಕಡೆ ಕಂಪನಿಯ ಡೆಸ್ಕ್‌ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ದಿನ ಬೆಲ್ಲವನ್ನು ನೀಡಬೇಕು. ವಿದ್ಯಾರ್ಹತೆಗೆ ತಕ್ಕಂತೆ ಆನ್ ಸ್ಕಿಲ್ -ಟು- ಸೆಮಿಸ್ಕಿಲ್ ಮತ್ತು ಸೆಮಿಸ್ಕೆಲ್ -ಟು-ಸ್ಕಿಲ್ ಹಾಗೂ ಸ್ಕಿಲ್ - ಟು ಹೈ ಸ್ಕಿಲ್ ಮಾಡಬೇಕು. ಪೊಲೀಸ್ ವೆರಿಫಿಕೇಶನ್ ಖರ್ಚನ್ನು ನೀಡಬೇಕು, ಎಂಪ್ಲಾಯ್ ಗೇಟ್‌ನಲ್ಲಿ ಪಂಚಿಂಗ್ ಮಷಿನ್ ಶೀಘ್ರ ಪ್ರಾರಂಭಿಸಬೇಕು, ಪ್ರೈವೇಟ್ ಕ್ಯಾಂಟೀನ್ ನಲ್ಲಿ ಅವಕಾಶ ನೀಡಬೇಕು, ಬಲ್ಕರ್ ಪ್ಲೋರ್‌ನಲ್ಲಿ ಡೆಸ್ಕ ಮತ್ತು ಸ್ಕೇಲ್ ಹೆಚ್ಚಿಗೆ ಬರುವಂತೆ ಮಾಡಬೇಕು, ಸರಿಯಾದ ಫೇಸ್ ಮಾಸ್ಕ ವಿತರಿಸಬೇಕು, ಆರೋಗ್ಯ ಟ್ರೀಟ್‌ಮೆಂಟ್ ಕೊಡಿಸಬೇಕು ಎಂದು ಹೇಳಿದರು.ಈ ವೇಳೆ ಮನವಿ ಸ್ವೀಕರಿಸಿ ಡಿಜಿಎಂ ಅನ್ನಪ್ಪ ದೇವಮನೆ ಮಾತನಾಡಿ, ಗುತ್ತಿಗೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನಾ ನಿರತರ ಸ್ಥಳದಲ್ಲಿದ್ದ ಸಿಪಿಐ ಅಶೋಕ ಚವ್ಹಾಣ ಹಾಗೂ ಕೂಡಗಿ ಪಿಎಸ್ಐ ಯತೀಶ.ಕೆ.ಎನ್ ಭೇಟಿ ನೀಡಿ, ಕಾರ್ಮಿಕರು ಹಾಗೂ ಅಧಿಕಾರಿಗಳ ಮಧ್ಯೆ ಹೊಂದಾಣಿಕೆ ಮಾಡಿ ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸಿದರು.ಈ ವೇಳೆ ಎನ್‌ಟಿಪಿಸಿ ಹಿರಿಯ ಅಧಿಕಾರಿಗಳಾದ ಎಸ್.ಕೆ.ಮೂರ್ತಿ, ಲಾ.ಜಯದೀಪ, ಅಜಯಕುಮಾರ, ರವಿ ಪಾಲಸಿಂಗ್, ಸಾಧೀಪ್ ಚೂಕೋ ಸೇರಿದಂತೆ ಅನೇಕರು ಭಾಗವಹಿಸಿದ್ದರು.