ನ್ಯೂ ಹಾರ್ಡ್‌ವಿಕ್‌ ಸ್ಕೂಲ್‌ನ 15ನೇ ವಾರ್ಷಿಕೋತ್ಸವ

| Published : Feb 13 2024, 01:45 AM IST / Updated: Feb 13 2024, 02:51 PM IST

ಸಾರಾಂಶ

ಅಂತರಂಗದಲ್ಲಿ ಜ್ಞಾನದ ಹಸಿವಿದ್ದಾಗ ಮಾತ್ರ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಸಾಹಿತಿ ಡಾ। ದೊಡ್ಡರಂಗೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಕೆಂಗೇರಿ

ಪರಂಪರೆ, ಇತಿಹಾಸದ ಭಾಗವಾಗಿ ಕಲೆ, ಸಾಹಿತ್ಯ ಸಂಸ್ಕೃತಿ ಬಗ್ಗೆ ಕಾಳಜಿ ವಹಿಸುವ ಮೂಲಕ ನಮ್ಮತನವನ್ನು ಎತ್ತಿ ಹಿಡಿಯಬೇಕು ಎಂದು ಸಾಹಿತಿ ಡಾ। ದೊಡ್ಡರಂಗೇಗೌಡ ಕರೆ ನೀಡಿದರು.

ಅವರು ಮಾಗಡಿ ಮುಖ್ಯ ರಸ್ತೆಯ ಕೊಡಿಗೇಹಳ್ಳಿ ನ್ಯೂ ಹಾರ್ಡ್ ವಿಕ್ ಇಂಡಿಯನ್ ಸ್ಕೂಲ್ 15ನೇ ವರ್ಷದ ವಾರ್ಷಿಕೋತ್ಸವ ‘ಅನುಬಂಧ- 2024’ರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಅಂತರಂಗದಲ್ಲಿ ಜ್ಞಾನದ ಹಸಿವಿದ್ದಾಗ ಮಾತ್ರ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಒಂದು ಕಡೆ ಗುರು, ಪೋಷಕರು ಹಾಗೂ ವಿದ್ಯಾರ್ಥಿಗಳು ಸೇರಿದಾಗ ಮಾತ್ರ ಪರಿಪೂರ್ಣವಾದ ಜ್ಞಾನವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.

ಯಶವಂತಪುರ ಶಾಸಕ, ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಮಾತನಾಡಿ, ಶಿಕ್ಷಣದಿಂದ ಮಾತ್ರ ದೇಶದ ಪ್ರಗತಿ ಹಾಗೂ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಮಹತ್ವಕಾಂಕ್ಷೆಯಿಂದ ವಿ.ಕೃಷ್ಣಮೂರ್ತಿ ಅವರು ಗ್ರಾಮೀಣ ಪ್ರದೇಶದಲ್ಲಿ ಶಾಲೆ ಪ್ರಾರಂಭಿಸಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ನ್ಯೂ ಹಾರ್ಡ್ ವಿಕ್ ಇಂಡಿಯನ್ ಸ್ಕೂಲ್ ಸಂಸ್ಥಾಪಕ ಅಧ್ಯಕ್ಷ ವಿ. ಕೃಷ್ಣಮೂರ್ತಿ ಮಾತನಾಡಿ ಕೇವಲ ಅಂಕಗಳಿಸಲು ಸೀಮಿತಗೊಳ್ಳದೆ ಕಲೆ, ಸಾಹಿತ್ಯ ಸಂಸ್ಕೃತಿ,ಕ್ರೀಡೆಯ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಲು ಸಂಸ್ಥೆ ಅಗತ್ಯ ಪ್ರೋತ್ಸಾಹ ನೀಡುತ್ತಿದೆ. ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಒದಗಿಸುವುದು ನಮ್ಮ ಗುರಿ ಎಂದರು.

ಸಂಗೀತ ನಿರ್ದೇಶಕ ವಿ.ಮನೋಹರ್, ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಾ. ಎನ್ ನಂಜುಂಡೇಶ್, ಕೆ. ದೇವರಾಜ್, ಪುರುಷೋತ್ತಮ್, ಕೆಕೆ ಎಜುಕೇಶನಲ್ ಟ್ರಸ್ಟ್‌ ಕಾರ್ಯದರ್ಶಿ ಕೆ.ಕೆ. ಪೂರ್ಣ, ಕೆಂಗಲ್ ಹನುಮಂತಯ್ಯ ಸ್ಮಾರಕ ಸಮಿತಿ ಅಧ್ಯಕ್ಷ ಬಿ. ಎಚ್. ಸುರೇಶ್ ಇದ್ದರು.