ತಾಲೂಕಿನ 1600 ರೈತರಿಗೆ ಬಾರದ ಬೆಳೆ ಪರಿಹಾರ

| Published : May 17 2024, 12:39 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಜಮಖಂಡಿ ಜಮಖಂಡಿ ತಾಲೂಕಿನ ಸುಮಾರು1600 ರೈತರಿಗೆ ಕೇಂದ್ರ ಸರ್ಕಾರದ ಬೆಳೆ ಪರಿಹಾರದ ಹಣ ಬಂದಿಲ್ಲವೆಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ತಿಳಿಸಿದರು. ಕನ್ನಡಪ್ರಭ ದೊಂದಿಗೆ ಮಾತನಾಡಿದ ಅವರು, ಆಧಾರ್‌ ಕಾರ್ಡ್‌ ಲಿಂಕ್ ಇಲ್ಲದಿರುವ ಮತ್ತು ಖಾತೆ ಬದಲಾವಣೆ ಮಾಡಿದವರು, ಎಫ್‌ಐಡಿ ಸಂಖ್ಯೆ ನಮೂದು ಆಗದೇ ಇರುವ ರೈತರ ಖಾತೆಗಳಿಗೆ ಪರಿಹಾರ ಬಂದಿಲ್ಲ, ತಾಂತ್ರಿಕ ತೊಂದರೆ ಸರಿಪಡಿಸಿಕೊಂಡು ಪರಿಹಾರ ಪಡೆಯಬಹುದಾಗಿದೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ಜಮಖಂಡಿ ತಾಲೂಕಿನ ಸುಮಾರು1600 ರೈತರಿಗೆ ಕೇಂದ್ರ ಸರ್ಕಾರದ ಬೆಳೆ ಪರಿಹಾರದ ಹಣ ಬಂದಿಲ್ಲವೆಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ತಿಳಿಸಿದರು. ಕನ್ನಡಪ್ರಭ ದೊಂದಿಗೆ ಮಾತನಾಡಿದ ಅವರು, ಆಧಾರ್‌ ಕಾರ್ಡ್‌ ಲಿಂಕ್ ಇಲ್ಲದಿರುವ ಮತ್ತು ಖಾತೆ ಬದಲಾವಣೆ ಮಾಡಿದವರು, ಎಫ್‌ಐಡಿ ಸಂಖ್ಯೆ ನಮೂದು ಆಗದೇ ಇರುವ ರೈತರ ಖಾತೆಗಳಿಗೆ ಪರಿಹಾರ ಬಂದಿಲ್ಲ, ತಾಂತ್ರಿಕ ತೊಂದರೆ ಸರಿಪಡಿಸಿಕೊಂಡು ಪರಿಹಾರ ಪಡೆಯಬಹುದಾಗಿದೆ. ತಾಲೂಕಿನಾದ್ಯಂತ ಎಲ್ಲಾ ಗ್ರಾಮಲೆಕ್ಕಾಧಿಕಾರಿಗಳಿಗೆ ಪರಿಹಾರ ಪಡೆಯದ ರೈತರ ಪಟ್ಟಿ ನೀಡಲಾಗಿದೆ. ಹೆಸರು ಬದಲಾವಣೆ, ಆಧಾರ್‌ ಲಿಂಕ್, ಮುಂತಾದವುಗಳ ಕುರಿತು ಸರಿಯಾದ ಮಾಹಿತಿ ಪಡೆದು ತಾಂತ್ರಿಕ ದೋಷ ಸರಿಪಡಿಸಿಕೊಂಡು ಪರಿಹಾರ ಪಡೆದುಕೊಳ್ಳಬಹುದು ಎಂದು ಹೇಳಿದರು..

ಕುಡಿಯುವ ನೀರಿನ ಸಮಸ್ಯೆ ಇಲ್ಲ: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ತಾಲೂಕಿನ ತುಂಗಳ ಮತ್ತು ತೊದಲಬಾಗಿ ಗ್ರಾಮಗಳಲ್ಲಿ ಕೊಳವೆಬಾವಿಗಳಿಂದ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ. ಹಿಪ್ಪರಗಿ ಜಲಾಶಯದಲ್ಲಿ ಸಂಗ್ರಹವಿರುವ ಕೃಷ್ಣಾನದಿಯ ನೀರನ್ನು ಮೇ ತಿಂಗಳ ಅಂತ್ಯದವರೆಗೆ ಉಪಯೋಗಿಸಬಹುದಾಗಿದೆ. ಮೇ ತಿಂಗಳ ಅಂತ್ಯದವರೆಗೆ ಕುಡಿಯವ ನೀರಿಗೆ ಯಾವುದೇ ಸಮಸ್ಯೆಯಾಗದು. ತಾಲೂಕು ಆಡಳಿತ ಸನ್ನದ್ಧವಾಗಿದ್ದು, ಸೂಕ್ತಕ್ರಮ ಕೈಗೊಳ್ಳಲಾಗುವ ಎಂದರು. ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ 1.2 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ. ಹೆಚ್ಚುವಯಾಗಿ 0.7 ಟಿಎಂಸಿ ನೀರು ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರೈತರು ಮತ್ತು ಸಾರ್ವಜನಿಕರು ಸಹಕಾರ ನೀಡಬೇಕು. ಈ ನೀರನ್ನು ಕೇವಲ ಜನ ಮತ್ತು ಜಾನುವಾರುಗಳ ಕುಡಿಯಲು ಮಾತ್ರ ಬಳಸ ಬೇಕೆಂದರು.