ನಾಡಹಬ್ಬ ದಸರಾ ಮಹೋತ್ಸವ : ರೈತ ದಸರಾದಲ್ಲಿ ಜಿಲ್ಲೆಯ 18 ಜನ ಸಾಧಕ ರೈತರಿಗೆ ಸನ್ಮಾನ

| Published : Oct 06 2024, 01:33 AM IST / Updated: Oct 06 2024, 12:40 PM IST

ನಾಡಹಬ್ಬ ದಸರಾ ಮಹೋತ್ಸವ : ರೈತ ದಸರಾದಲ್ಲಿ ಜಿಲ್ಲೆಯ 18 ಜನ ಸಾಧಕ ರೈತರಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ದಸರಾ ಮಹೋತ್ಸವದಲ್ಲಿ ರೈತ ದಸರಾ ಕಾರ್ಯಕ್ರಮದಲ್ಲಿ 18 ಜನ ಸಾಧಕ ರೈತರನ್ನು ಸನ್ಮಾನಿಸಲಾಯಿತು.  

  ಮೈಸೂರು : ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ನಗರದ ಜೆ.ಕೆ. ಮೈದಾನದಲ್ಲಿ ಆಯೋಜಿಸಲಾಗಿರುವ ರೈತ ದಸರಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಒಟ್ಟು 18 ಜನ ಸಾಧಕ ರೈತರನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಪಶುಸಂಗೋಪನಾ ಮತ್ತು ರೇಷ್ಮೆ ಸಚಿವೆ ಕೆ. ವೆಂಕಟೇಶ್ ಸನ್ಮಾನಿಸಿದರು.

ಕೃಷಿ ಇಲಾಖೆಯಿಂದ ನಂಜನಗೂಡು ತಾಲೂಕು ಹಾಡ್ಯ ಗ್ರಾಮದ ಎಚ್.ಬಿ. ಜಗದೀಶ್, ಮೈಸೂರು ತಾಲೂಕು ಗೋಪಾಲಪುರದ ವಿಶ್ವನಾಥ್, ಪಿರಿಯಾಪಟ್ಟಣ ತಾಲೂಕು ಪಿ. ಬಸವನಹಳ್ಳಿಯ ಬಿ.ಎ. ಪ್ರಕಾಶ್, ತೋಟಗಾರಿಕೆ ಇಲಾಖೆಯಿಂದ ಮೈಸೂರು ತಾಲೂಕು ನುಗ್ಗಹಳ್ಳಿಯ ಶಿವಣ್ಣ, ಎಚ್.ಡಿ. ಕೋಟೆ ತಾಲೂಕು ಕೋಳಗಾಲದ ಎಸ್. ಲಿಂಗರಾಜೇ ಅರಸ್, ನಂಜನಗೂಡು ತಾಲೂಕು ಸಿದ್ದಯ್ಯನಹುಂಡಿಯ ಎಸ್. ಮಂಜುನಾಥ್ ಅವರನ್ನು ಅಭಿನಂದಿಸಲಾಯಿತು.

ಪಶುಸಂಗೋಪನೆ ಇಲಾಖೆಯಿಂದ ನಂಜನಗೂಡು ತಾಲೂಕು ದೇವನೂರು ಗ್ರಾಮದ ಸುಹಾಸ್ ಶ್ರೀಧರ್, ಪಿರಿಯಾಪಟ್ಟಣ ತಾಲೂಕು ನವಿಲೂರು ಗ್ರಾಮದ ಎನ್.ಡಿ. ಮಹದೇವ, ಟಿ. ನರಸೀಪುರ ತಾಲೂಕು ಬೊಮ್ಮನಾಯಕನಹಳ್ಳಿಯ ಮಂಜುಳಾ, ರೇಷ್ಮೆ ಇಲಾಖೆಯಿಂದ ಟಿ. ನರಸೀಪುರ ತಾಲೂಕು ವಿಜಯಪುರದ ರಮೇಶ್, ಹುಣಸೂರು ತಾಲೂಕು ಅತ್ತಿಗುಪ್ಪೆಯ ಬಿ.ಆರ್. ಮಹದೇವ್, ಕೆ.ಆರ್. ನಗರ ತಾಲೂಕು ಹೊಸೂರು ಕಲ್ಲಹಳ್ಳಿಯ ಕೆ.ಸಿ. ವಿಜಯಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಹಾಗೆಯೇ, ಮೀನುಗಾರಿಕೆ ಇಲಾಖೆಯಿಂದ ಮೈಸೂರು ತಾಲೂಕು ಕುಮಾರಬೀಡು ಗ್ರಾಮದ ಜವರನಾಯಕ, ನಂಜನಗೂಡು ತಾಲೂಕು ರಾಜನಗರ ಗ್ರಾಮದ ಬಾಲಸುಬ್ರಹ್ಮಣ್ಯ, ಕೆ.ಆರ್. ನಗರ ತಾಲೂಕು ಜೋಡಿಗೌಡನಕೊಪ್ಪಲು ಗ್ರಾಮದ ಮರಿಯಪ್ಪ ಹಾಗೂ ಅರಣ್ಯ ವಿಭಾಗದಲ್ಲಿ ನಂಜನಗೂಡು ತಾಲೂಕು ಮಾದಾಪುರ ಗ್ರಾಮದ ಚನ್ನಕೇಶವೇಗೌಡ, ಪಿರಿಯಾಪಟ್ಟಣ ತಾಲೂಕು ಬಾವಲಾಳು ಗ್ರಾಮದ ದಿನೇಶ್ ಕುಮಾರ್ ಮತ್ತು ಟಿ. ನರಸೀಪುರ ತಾಲೂಕು ಕೊಡಗಳ್ಳಿಯ ಕೆ. ಪುಟ್ಟಸ್ವಾಮಿ ಅವರನ್ನು ಸನ್ಮಾನಿಸಲಾಯಿತು.