ನೋಟಿಸ್‌ಗೆ ಸ್ಪಂದನೆ ನೀಡದ 18 ಅಧಿಕಾರಿಗಳಿಗೆ ಆಯೋಗದ ಕಲಬುರಗಿ ಪೀಠದಿಂದ ದಂಡ ವಿಧಿಸಿ ಆದೇಶ ಮಾಡಲಾಗಿದೆ

ಕೊಪ್ಪಳ: ಸಕಾಲಕ್ಕೆ ಮಾಹಿತಿ ನೀಡಲು ನಿರ್ಲಕ್ಷ್ಯ ವಹಿಸುವುದು ಸೇರಿದಂತೆ ವಿಚಾರಣೆಗೆ ಗೈರು ಹಾಜರಾಗಿ, ರಾಜ್ಯ ಮಾಹಿತಿ ಆಯೋಗದ ನೋಟಿಸ್‌ಗೆ ಸ್ಪಂದನೆ ನೀಡದ 18 ಅಧಿಕಾರಿಗಳಿಗೆ ಆಯೋಗದ ಕಲಬುರಗಿ ಪೀಠದಿಂದ ದಂಡ ವಿಧಿಸಿ ಆದೇಶ ಮಾಡಲಾಗಿದೆ ಎಂದು ರಾಜ್ಯ ಮಾಹಿತಿ ಆಯುಕ್ತ ಬಿ. ವೆಂಕಟ ಸಿಂಗ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಏಪ್ರಿಲ್‌ನಲ್ಲಿ ನಡೆದ ವಿಚಾರಣೆ ವೇಳೆ ಗೈರು ಹಾಜರಾಗಿದ್ದಲ್ಲದೆ, ಮಾಹಿತಿ ನೀಡದ ಕಾರಣ ಕಲಬುರಗಿ ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ ಅವರಿಗೆ ₹10 ಸಾವಿರ, ಗಂಗಾವತಿ ತಾಲೂಕು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದೇವಣ್ಣ ಕಟ್ಟಿ ₹15 ಸಾವಿರ, ರಾಯಚೂರು ತಾಲೂಕು ಗ್ರೇಡ್-2 ತಹಸೀಲ್ದಾರ್ ಪರಶುರಾಮ ₹5 ಸಾವಿರ, ಜೇವರ್ಗಿ ತಾಲೂಕಿನ ಹುಲ್ಲೂರ ಗ್ರಾಪಂ ಕಾರ್ಯದರ್ಶಿ ಮಲ್ಲಿಕಾರ್ಜುನ ₹5 ಸಾವಿರ, ಸುರಪುರ ತಾಲೂಕಿನ ಆಲ್ದಾಳ ಗ್ರಾಪಂ ಕಾರ್ಯದರ್ಶಿ ರಾಜಕುಮಾರ ಸುಬೇದಾರ ₹10 ಸಾವಿರ, ಮಟ್ಟಿ ತಾಲೂಕಿನ ಆರೋಲಿ ಪಿಡಿಒ ರಘುನಾಥ ₹5 ಸಾವಿರ, ಆಳಂದ ತಾಲೂಕಿನ ಯಲಸಂಗಿ ಪಿಡಿಒ ಜಗದೀಶಗೆ ₹15 ಸಾವಿರ, ಸುರಪುರ ತಾಲೂಕಿನ ನಗನೂರು ಗ್ರಾಪಂ ಕಾರ್ಯದರ್ಶಿ ಮಡಿವಾಳಪ್ಪ ₹10 ಸಾವಿರ, ಶಹಪುರ ತಾಲೂಕಿನ ಗೋಗಿ ಕೆ. ಪಿಡಿಒ ಸಿದ್ರಾಮ ₹10 ಸಾವಿರ, ಸಂಡೂರು ತಾಲೂಕಿನ ಹೊಸದರೋಜ ಗ್ರಾಪಂ ಕಾರ್ಯದರ್ಶಿ ಕಲ್ಲಪ್ಪ ₹10 ಸಾವಿರ, ಯಾದಗಿರ ತಾಲೂಕಿನ ಸೈದಾಪುರ ಪಿಡಿಒ ಮುದುಕಪ್ಪ ₹10 ಸಾವಿರ, ವಡಗೇರಾ ತಾಲೂಕಿನ ತಡಿಬಿಡಿ ಗ್ರಾಪಂ ಕಾರ್ಯದರ್ಶಿ ಯಂಕನಗೌಡ ₹5 ಸಾವಿರ, ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಪಂ ಕಾರ್ಯದರ್ಶಿ ಜ್ಯೋತಿ ರೆಡ್ಡರ್‌ ₹10 ಸಾವಿರ, ಕಲಬುರಗಿ ತಾಲೂಕಿನ ಹಾಗಾರಗ ಗ್ರಾಪಂ ಕಾರ್ಯದರ್ಶಿ ವೇದಾಂಗ ₹5 ಸಾವಿರ, ಲಿಂಗಸೂಗೂರು ತಾಲೂಕಿನ ಪೈದೊಡ್ಡಿ ಗ್ರಾಪಂ ಕಾರ್ಯದರ್ಶಿ ಭೀಮಣ್ಣ ₹10 ಸಾವಿರ, ಯಾದಗಿರ ತಾಲೂಕಿನ ರಾಮಸಮುದ್ರ ಗ್ರಾಪಂ ಕಾರ್ಯದರ್ಶಿ ಗಾಲಿಬಸಾಬ್‌ ₹5 ಸಾವಿರ ಹಾಗೂ ರಾಯಚೂರು ತಾಲೂಕಿನ ಗ್ರೇಡ್-2 ತಹಸೀಲ್ದಾರ್‌ ಪರಶುರಾಮ ಅವರಿಗೆ ₹5 ಸಾವಿರ ಸೇರಿ ಒಟ್ಟು 18 ಅಧಿಕಾರಿಗಳಿಗೆ ಏಪ್ರಿಲ್‌ನಲ್ಲಿ ₹1.50 ಲಕ್ಷ ದಂಡ ವಿಧಿಸಲಾಗಿದೆ ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.