ಬ್ಯಾಡಗಿ ಮಾರುಕಟ್ಟೆಗೆ 2.65 ಲಕ್ಷ ಚೀಲ ಮೆಣಸಿನಕಾಯಿ ಆವಕ

| Published : Mar 14 2025, 12:37 AM IST

ಸಾರಾಂಶ

ಕಳೆದ 2 ವಾರಗಳಿಂದ ಸತತವಾಗಿ 2.5 ಲಕ್ಷದ ಗಡಿಯನ್ನು ದಾಟಿದೆ. ಮಾ. 13ರಂದು ಕಳೆದ ವಾರದಷ್ಟೆ ಮೆಣಸಿನಕಾಯಿ ಚೀಲಗಳು ಆವಕಾಗಿದ್ದು, ಎಲ್ಲರನ್ನೂ ಆಶ್ಚರ್ಯಗೊಳಿಸಿದೆ.

ಬ್ಯಾಡಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರುವಾರ ಮೆಣಸಿನಕಾಯಿ ಚೀಲಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, 2.65 ಲಕ್ಷ ಮೆಣಸಿಕಾಯಿ ಚೀಲಗಳು ಆವಕಾಗಿದ್ದು, ದರದಲ್ಲಿ ಸ್ಥಿರತೆ ಮುಂದುವರಿದಿದೆ.

ಮೆಣಸಿನಕಾಯಿ ಆವಕವಾಗುವುದಲ್ಲಿ ಇನ್ನೇನು ಮುಗಿಯಿತು ಎಂದು ತಜ್ಞರು ಅಭಿಪ್ರಾಯಪಟ್ಟರು, ವರ್ತಕರು ಅಂದುಕೊಳ್ಳುತ್ತಿದ್ದರೂ ಅವರ ಎಲ್ಲ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿದೆ. ಪಟ್ಟಣದ ಗ್ರಾಮದೇವತೆ ಜಾತ್ರೆ ಬಳಿಕ ಗಣನೀಯ ಪ್ರಮಾಣದಲ್ಲಿ ಆವಕದಲ್ಲಿ ಏರಿಕೆಯಾಗಿದ್ದು, ಕಳೆದ 2 ವಾರಗಳಿಂದ ಸತತವಾಗಿ 2.5 ಲಕ್ಷದ ಗಡಿಯನ್ನು ದಾಟಿದೆ. ಮಾ. 13ರಂದು ಕಳೆದ ವಾರದಷ್ಟೆ ಮೆಣಸಿನಕಾಯಿ ಚೀಲಗಳು ಆವಕಾಗಿದ್ದು, ಎಲ್ಲರನ್ನೂ ಆಶ್ಚರ್ಯಗೊಳಿಸಿದೆ.

ಗುರುವಾರದ ಮಾರುಕಟ್ಟೆ ದರ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುರುವಾರ ಕಡ್ಡಿತಳಿ ಮೆಣಸಿನಕಾಯಿ(ಕ್ವಿಂಟಲ್‌ಗೆ) ಕನಿಷ್ಠ ₹2109, ಗರಿಷ್ಠ ₹25299, ಡಬ್ಬಿತಳಿ ಕನಿಷ್ಠ ₹2689, ಗರಿಷ್ಠ ₹29786, ಗುಂಟೂರು ಕನಿಷ್ಠ ₹809, ಗರಿಷ್ಠ ₹114209ಕ್ಕೆ ಮಾರಾಟವಾಗಿದೆ.ಅಹಂಕಾರ ತೊರೆದರೆ ಮಹಾತ್ಮನಾಗಲು ಸಾಧ್ಯ

ಶಿಗ್ಗಾಂವಿ: ಮಹಾತ್ಮರಾಗಿ ಕಾಣಲು ಅಹಂಕಾರ ಮತ್ತು ನಾನು ಎಂಬ ದುರಂಹಕಾರ ಕಡಿಮೆಯಾಗಬೇಕು. ಅಂದಾಗ ಮಾತ್ರ ಮಹಾತ್ಮರಾಗಲು ಸಾಧ್ಯ ಎಂದು ಹತ್ತಿಮತ್ತೂರಿನ ವಿರಕ್ತಮಠದ ನಿಜಗುಣ ಸ್ವಾಮಿಗಳು ತಿಳಿಸಿದರು.ಪಟ್ಟಣದ ವಿರಕ್ತಮಠದಲ್ಲಿ ೩೨ನೇ ಶರಣ ಸಂಸ್ಕೃತಿ ಉತ್ಸವ- ೨೦೨೫ ಧರ್ಮಸಭೆಯ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನವನ್ನು ನೀಡಿದರು.

ಕಾಯಾ, ವಾಚಾ, ಮನಸಾ ವಾಕ್ಯದ ನಡೆ ನುಡಿಯಲ್ಲಿ ಶುದ್ಧತೆಯಿರಬೇಕು. ಅಂದಾಗ ಮಾತ್ರ ಶರಣರು, ಸಂತರಿಗೆ ಪ್ರಾಮುಖ್ಯತೆ ದೊರೆಯುತ್ತದೆ. ಅಲ್ಲದೇ ಮಠಗಳು ಮೊದಲಿಗೆ ಗುರುಕುಲಗಳಾಗಿದ್ದವು. ವ್ಯಕ್ತಿಯಲ್ಲಿರುವ ಒಳ್ಳೆಯ ನಡವಳಿಕೆ ಅವನನ್ನು ದೊಡ್ಡವನಾಗಿ ಮಾಡುತ್ತದೆ. ವ್ಯಕ್ತಿಗೆ ಆದರ್ಶ ವ್ಯಕ್ತಿಯಾಗಿ ಗುರು ಅಥವಾ ತಂದೆ ತಾಯಿಯಾಗಿರಬೇಕು ಹೊರತು ಚಲನಚಿತ್ರ ನಟರಲ್ಲ ಎಂದರು.ಸಾನ್ನಿಧ್ಯ ವಹಿಸಿದ್ದ ಹೊಳೆಇಟಗಿ ವಿರಕ್ತಮಠದ ಮಡಿವಾಳ ಸ್ವಾಮಿಗಳು ಮಾತನಾಡಿ, ದೇಶದ ಸಂಸ್ಕೃತಿಯಲ್ಲಿ ಪೂಜ್ಯತೆ ಮತ್ತು ಗೌರವದ ಭಾವವಿದೆ. ಅದಕ್ಕೆ ಇಂತಹ ಶರಣ ಸಂಸ್ಕೃತಿ ಉತ್ಸವ ಕಾರಣವಾಗಿದೆ ಎಂದರು.ಹಾವೇರಿ ಹೊಸಮಠದ ಬಸವಶಾಂತಲಿಂಗ ಸ್ವಾಮಿಗಳು ಆಶೀರ್ವಚನ ನೀಡಿದರು. ವಿರಕ್ತಮಠದ ಬಸವದೇವರು, ಕಲ್ಲೂರ ಮಹಾಂತೇಶ ಶಾಸ್ತ್ರೀಗಳು ಪ್ರವಚನ ನೀಡಿದರು. ಸಂಗೀತ ಸೇವೆ ಗದಿಗೆಯ್ಯ ಹಿರೇಮಠ, ತಬಲಾ ಸಾಥ್‌ ಬಸವರಾಜ ಹೂಗಾರ, ಶಿದ್ದಲಿಂಗಪ್ಪ ನರೇಗಲ್ ನೀಡಿದರು. ವಿವಿಧ ಕ್ಷೇತ್ರದಲ್ಲಿನ ಸಾಧಕರು ಮತ್ತು ದಾನಿಗಳನ್ನು ಸನ್ಮಾನಿಸಲಾಯಿತು.ಕೊಟ್ರೇಶ ಮಾಸ್ತರ ಬೆಳಗಲಿ, ಪಕ್ಕಿರೇಶ ಕೊಂಡಾಯಿ, ಬಸವರಾಜ ಶಿಗ್ಗಾಂವಿ, ಮಂಜುನಾಥ ಮಣ್ಣಣ್ಣವರ, ನಾಗಪ್ಪ ಬೆಂತೂರ, ರಮೇಶ ಹರಿಜನ, ಶರೀಫ ಮಾಕಪ್ಪನವರ, ಬಸಲಿಂಗಪ್ಪ ನರಗುಂದ, ಶಂಭು ಕೇರಿ ಇತರರು ಇದ್ದರು. ಪ್ರೊ. ಶಶಿಕಾಂತ ರಾಠೋಡ ಕಾರ್ಯಕ್ರಮ ನಿರೂಪಿಸಿದರು.