ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಆಸ್ತಿ ತೆರಿಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಮೂಲಗಳಿಂದ ಹೆಚ್ಚಿನ ಧನ ಸಹಾಯ ನಿರೀಕ್ಷಿಸಿರುವ ನಗರಸಭೆಯಲ್ಲಿ ೨೦೨೫-೨೬ನೇ ಸಾಲಿನಲ್ಲಿ ೨.೭೬ ಕೋಟಿ ಉಳಿತಾಯ ಬಜೆಟ್ ಮಂಡಿಸಲಾಯಿತು.ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ವಾಸೀಲ್ ಅಲಿಖಾನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ೨೦೨೫-೨೬ನೇ ಸಾಲಿನ ಆಯವ್ಯಯದ ಅಂಕಿಅಂಶಗಳನ್ನು ಅಧ್ಯಕ್ಷರ ಪರವಾಗಿ ಲೆಕ್ಕ ಪರೀಕ್ಷಕ ಚಂದ್ರು ಮಂಡಿಸಿದರು. ಕೆಲ ವಿಚಾರಗಳ ಚರ್ಚೆ ಬಳಿಕ ಪ್ರಸಕ್ತ ಸಾಲಿನ ಬಜೆಟ್‌ಗೆ ಅನುಮೋದನೆ ಪಡೆಯಲಾಯಿತು.
ಪ್ರಸಕ್ತ ಸಾಲಿನಲ್ಲಿ ವಿವಿಧ ಮೂಲಗಳಿಂದ ಒಟ್ಟು ೪೯೧೦.೫೦ ಲಕ್ಷ ಆದಾಯ ನಿರೀಕ್ಷಿಸಿದ್ದು, ೬೫೯೦.೫೦ ಲಕ್ಷ ವೆಚ್ಚ ತೋರಿಸಲಾಗಿದೆ. ೨೦೨೫-೨೬ನೇ ಸಾಲಿನಲ್ಲಿ ರಾಜಸ್ವ ಸ್ವೀಕೃತಿಗಳು ೩೧.೫ ಕೋಟಿ ರು., ರಾಜಸ್ವ ಪಾವತಿಗಳು ೨೭.೮ ಕೋಟಿ, ಬಂಡವಾಳ ಸ್ವೀಕೃತಿ ೨೧.೨೦ ಕೋಟಿ, ಬಂಡವಾಳ ಪಾವತಿಗಳು ೩೭.೩೦ ಕೋಟಿ ಎಂದು ಅಂದಾಜಿಸಲಾಗಿದೆ. ಇನ್ನು ಅಸಾಧಾರಣ ಸ್ವೀಕೃತಿಗಳು ೧೨.೯ ಕೋಟಿ, ಅಸಾಧಾರಣ ಪಾವತಿಗಳು ೧೭.೩ ಕೋಟಿ ಎಂದು ಅಂದಾಜು ಮಾಡಲಾಗಿದೆ. ಪ್ರಾರಂಭಿಕ ಶಿಲ್ಕು ೧೯,೫೬,೩೫,೦೪೫ ಲಕ್ಷ ಇದ್ದು, ಎಲ್ಲಾ ಖರ್ಚು ಕಳೆದು ೨,೭೬,೩೫,೦೪೫ ಲಕ್ಷ ಉಳಿಕೆ ತೋರಿಸಲಾಗಿದೆ.ಪ್ರಮುಖ ಆದಾಯಗಳು:ನಗರಸಭೆಗೆ ಆಸ್ತಿ ತೆರಿಗೆ ಸಂಗ್ರಹವೇ ಆದಾಯ ಮೂಲವಾಗಿದ್ದು, ಪ್ರಸಕ್ತ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ ೪.೫ ಕೋಟಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಇದಲ್ಲದೇ ಆಸ್ತಿ ಸಂಗ್ರಹ ಮೇಲಿನ ದಂಡದಿಂದ ೧.೪ ಕೋಟಿ, ಆಸ್ತಿ ತೆರಿಗೆ ಜತೆ ಸಂಗ್ರಹಿಸುವ ಘನತ್ಯಾಜ್ಯ ವಸ್ತು ಶುಲ್ಕದಿಂದ ೭೦.೫೦ ಲಕ್ಷ, ನಗರಸಭೆ ವಾಣಿಜ್ಯ ಮಳಿಗೆಗಳ ಬಾಡಿಗೆಯಿಂದ ೬೧ ಲಕ್ಷ, ಕಟ್ಟಡ ಪರವಾನಗಿ ಶುಲ್ಕದಿಂದ ೩೧.೫೦ ಲಕ್ಷ, ಬ್ಯಾಂಕ್ ಬಡ್ಡಿಯಿಂದ ೨೫ ಲಕ್ಷ, ಉದ್ದಿಮೆ ಪರವಾನಗಿಯಿಂದ ೧೬.೭೦ ಲಕ್ಷ, ೧೫ನೇ ಹಣಕಾಸು ಯೋಜನೆಯಿಂದ ೬.೫ ಕೋಟಿ, ಎಸ್‌ಎಫ್‌ಸಿ ಮುಕ್ತನಿಧಿ ಅನುದಾನದಿಂದ ೧.೨೫ ಕೋಟಿ, ಎಸ್‌ಎಫ್‌ಸಿ ವೇತನ ಅನುದಾನದಿಂದ ೬.೧೫ ಕೋಟಿ, ಎಸ್‌ಎಫ್‌ಸಿ ವಿದ್ಯುತ್ ಅನುದಾನದಿಂದ ೨೦ ಲಕ್ಷ, ಎಸ್‌ಎಫ್‌ಸಿ ವಿದ್ಯುತ್ ಅನುದಾನ ಬೀದಿ ದೀಪಗಳಿಗೆ ೨.೬೪ ಕೋಟಿ, ಎಸ್‌ಎಫ್‌ಸಿ ವಿದ್ಯುತ್ ಅನುದಾನ ಕುಡಿಯುವ ನೀರಿನ ಸ್ಥಾವರಗಳಿಗೆ ೭.೫ ಕೋಟಿ, ಸ್ವಚ್ಛ ಭಾರತ ಅನುದಾನದಿಂದ ೬ ಕೋಟಿ, ಎಸ್‌ಎಫ್‌ಸಿ ವಿಶೇಷ ಅನುದಾನದಿಂದ ೭ ಕೋಟಿ, ಅಮೃತ ನಿರ್ಮಲ ಅನುದಾನದಿಂದ ೨೫ ಲಕ್ಷ, ಇತರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನಗಳಿಂದ ೧ ಕೋಟಿ, ನೌಕರರಿಂದ ವಸೂಲಾತಿಯಲ್ಲಿ ೧.೪೭ ಕೋಟಿ, ಇತರೆ ಸಾದಿಲ್ವಾರು ಸ್ವೀಕೃತಿಗಳಿಂದ ೨೨.೩ ಲಕ್ಷ ಸೇರಿದಂತೆ ವಿವಿಧ ಸಣ್ಣಪುಟ್ಟ ಆದಾಯ ಮೂಲಗಳಿಂದ ಒಟ್ಟು ೪೯೧೦.೫೦ ಕೋಟಿ ಆದಾಯ ನಿರೀಕ್ಷಿಸಲಾಗಿದೆ.
ಪ್ರಮುಖ ವೆಚ್ಚಗಳು:ನಗರಸಭೆಯ ಬಹುಪಾಲು ಹಣ ಮಾನವ ಸಂಪನ್ಮೂಲಕ್ಕೆ ವೆಚ್ಚವಾಗುತ್ತಿದ್ದು, ವೇತನ ಹಾಗೂ ಇತರೆ ೬ ಕೋಟಿ ವೆಚ್ಚವಾಗುತ್ತಿದೆ. ವಾಹನ ಬಾಡಿಗೆ ಮತ್ತು ಇತರೆ ವೆಚ್ಚಗಳಿಗೆ ೧೫ಲಕ್ಷ, ಕಾನೂನು ಮತ್ತು ವೃತ್ತಿಪರ ವೆಚ್ಚ ೩೦ ಲಕ್ಷ, ಸದಸ್ಯರ ಗೌರವ ಧನ ಹಾಗೂ ಕೌನ್ಸಿಲ್ ವೆಚ್ಚಕ್ಕೆ ೫೩ ಲಕ್ಷ, ಘನತಾಜ್ಯ ವಸ್ತು ವಾಹನಗಳ ದುರಸ್ತಿ ಮತ್ತು ನಿರ್ವಹಣೆ ೨.೧೩ ಕೋಟಿ, ಪೌರಕಾರ್ಮಿಕರ ಹೊರಗುತ್ತಿಗೆ ಸೇವೆಗಳ ವೆಚ್ಚ ೧.೫ ಕೋಟಿ, ಕುಡಿವ ನೀರಿನ ಸ್ಥಾವರಗಳ ವಿದ್ಯುತ್ ಶುಲ್ಕ ಮತ್ತು ಇತರೆ ವೆಚ್ಚ ೬.೬೫ ಕೋಟಿ, ಘನತಾಜ್ಯ ವಸ್ತು ನಿರ್ವಹಣೆಗೆ ಸಂಬಂಧಿಸಿದ ಕಾಮಗಾರಿಗಳು ೬ ಕೋಟಿ, ಬೀದಿ ದೀಪಗಳ ವಿದ್ಯುತ್ ಶುಲ್ಕ ಮತ್ತು ಇತರೆ ವೆಚ್ಚಗಳು ೨.೯೪ ಕೋಟಿ, ಕುಡಿವ ನೀರಿನ ಕಾಮಗಾರಿಗಳ ಇತರೆ ವೆಚ್ಚಗಳು ೭.೦೭ ಕೋಟಿ, ಒಳಚರಂಡಿ ಕಾಮಗಾರಿಯ ವೆಚ್ಚ ೧.೩೭ ಕೋಟಿ, ರಸ್ತೆ ಹಾಗೂ ಎಸ್‌ಟಿಪಿ ಅಭಿವೃದ್ಧಿಗೆ ಭೂಸ್ವಾಧೀನಕ್ಕೆ ೬ ಕೋಟಿ, ಕಟ್ಟಡ ನಿರ್ಮಾಣ ಇತರೆ ಮೂಲಭೂತ ಸೌಕರ್ಯಗಳಿಗೆ ೧.೧೮ ಕೋಟಿ, ರಸ್ತೆ ಅಭಿವೃದ್ಧಿಗೆ ೪.೨ಕೋಟಿ, ಚರಂಡಿ ಅಭಿವೃದ್ಧಿಗೆ ಮತ್ತು ಆರ್‌ಸಿಸಿ ಡೆಕ್ ಸ್ಲಾಬ್ ನಿರ್ಮಾಣಕ್ಕೆ ೫ಕೋಟಿ, ಮಳೆ ನೀರು ಚರಂಡಿಗೆ ೪.೨ ಕೋಟಿ, ಉದ್ಯಾನವನ ಅಭಿವೃದ್ಧಿ ಮತ್ತು ಶಿಕ್ಷಣಕ್ಕೆ ೮೦ಲಕ್ಷ, ಬೀದಿ ದೀಪ ಸರಬರಾಜು ಹಾಗೂ ಅಳವಡಿಕೆಗೆ ೩೩ ಲಕ್ಷ, ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆಗಳು, ಸೆಸ್ ಮತ್ತು ಇತರೆ ಅಸಾಧಾರಣ ವೆಚ್ಚಕ್ಕೆ ೧ ಕೋಟಿ, ಫುಟ್‌ಪಾತ್ ನಿರ್ಮಾಣಕ್ಕೆ ೫೦ ಲಕ್ಷ ಹಾಗೂ ಇತರೆ ವೆಚ್ಚಗಳು ಸೇರಿದಂತೆ ೬೫೯೦.೫೦ ಕೋಟಿ ವೆಚ್ಚವಾಗುವುದಾಗಿ ಅಂದಾಜಿಸಲಾಗಿದೆ.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಶ್ರೀನಿವಾಸ್‌ಮೂರ್ತಿ, ಪೌರಾಯುಕ್ತ ಮಹೇಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಸದಸ್ಯರಾದ ಸುಮಾ ರವೀಶ್, ಜಯಮಾಲ, ಲಿಯಾಕತ್, ನಾಗೇಶ್, ಲೋಕೇಶ್, ರಫೀಕ್ ಇತರರಿದ್ದರು.ಪ್ರಮುಖ ಯೋಜನೆಗಳು
೧. ನಗರ ವ್ಯಾಪ್ತಿಯಲ್ಲಿ ೯೪.೩೭ಕೋಟಿ ಅನುದಾನದಲ್ಲಿ ಒಳ ಚರಂಡಿ ನಿರ್ಮಾಣ ಕಾಮಗಾರಿ ಅನುಮೋದನೆ.೨. ಒಳಚರಂಡಿ ನಿರ್ಮಾಣ ಕಾಮಗಾರಿಗೆ ವೆಟ್‌ವೆಲ್‌ಗಳು ಹಾಗೂ ಎಸ್‌ಟಿಪಿಗಳ ಭೂ ಸ್ವಾಧೀನಕ್ಕೆ ಹೆಚ್ಚುವರಿ ೬ ಕೋಟಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ.
೩. ಅಮೃತ್-೨.೦ರ ಯೋಜನೆಯಡಿ ೪೦.೬೨ ಕೋಟಿ ಅನುದಾನದಲ್ಲಿ ನಗರಕ್ಕೆ ೩ ಮೇಲ್ಮಟ್ಟದ ಜಲ ಸಂಗ್ರಹಗಾರ ಹಾಗೂ ಪೈಪ್‌ಲೈನ್‌ಗಳ ನಿರ್ಮಾಣ.೪. ಅಮೃತ್-೨.೦ರ ಯೋಜನೆಯಡಿ ೫೫.೬೮ ಲಕ್ಷ ರು. ಅನುದಾನದಲ್ಲಿ ೩ ಶೌಚಾಲಯ ನಿರ್ಮಾಣ.
೫. ಅಮೃತ್-೨.೦ರ ಯೋಜನೆಯಡಿ ೧೫೦.೦೦ ಲಕ್ಷಗಳಲ್ಲಿ ನೆಲ ಭರ್ತಿ ಜಾಗದಲ್ಲಿ ಎಂಆರ್‌ಎಫ್ ಸೆಂಟರ್ ನಿರ್ಮಾಣ.೬. ಅಮೃತ್-೧.೦ರ ಯೋಜನೆಯಡಿ ೫ ಕೋಟಿ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಜಾಗದಲ್ಲಿ ಕಾಂಪೌಂಡ್, ಸ್ಯಾನಿಟರಿ ಲ್ಯಾಂಡ್ ಪಿಲ್‌ಗಳ ನಿರ್ಮಾಣ.
೭. ನಗರ ವ್ಯಾಪ್ತಿಯಲ್ಲಿ ೫೦ ಲಕ್ಷ ವೆಚ್ಚದಲ್ಲಿ ಫುಡ್ ಕೋರ್ಟಗಳ ನಿರ್ಮಾಣ.೮. ಎಸ್‌ಎಫ್‌ಸಿ ವಿಶೇಷ ಅನುದಾನದಲ್ಲಿ ೨೦ ಕೋಟಿ ಅನುದಾನದಲ್ಲಿ ರಸ್ತೆ, ಚರಂಡಿ ನಿರ್ಮಾಣ.
೯. ಎಸ್‌ಎಫ್‌ಸಿ ಅನುದಾನದಲ್ಲಿ ೩೧ ಕೋಟಿ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿಗಳ ನಿರ್ಮಾಣ.೧೦. ಎಸ್‌ಎಫ್‌ಸಿ ವಿಶೇಷ ಅನುದಾನದಲ್ಲಿ ೧೦ ಕೋಟಿ ವೆಚ್ಚದಲ್ಲಿ ನಗರಸಭೆಯ ನೂತನ ಕಚೇರಿ ಕಟ್ಟಡ ನಿರ್ಮಾಣ
೧೧. ನಗರೋತ್ಥಾನ ಹಂತ-೪ರ ಯೋಜನೆಯಡಿ ೧೭೦.೦೦ ಲಕ್ಷದಲ್ಲಿ ಅಂಗನವಾಡಿಗಳ ನಿರ್ಮಾಣ೧೨. ೩೦ ಲಕ್ಷ ವೆಚ್ಚದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಜಾಹೀರಾತು ಫಲಕಗಳ ನಿರ್ಮಾಣ.
೧೩. ೨೫ ಲಕ್ಷದಲ್ಲಿ ಬೆಂ-ಮೈ ರಸ್ತೆಯಲ್ಲಿ ಉಳಿಕೆ ಸೆಂಟರ್ ಮೀಡಿಯನ್ಸ್ ಲೈಟ್‌ಗಳ ಅಳವಡಿಕೆ ಕಾಮಗಾರಿ.೧೪. ೪೦ ಲಕ್ಷದಲ್ಲಿ ಬೆಂ-ಮೈ ರಸ್ತೆ ಹಾಗೂ ಸಾತನೂರು ರಸ್ತೆಯಲ್ಲಿ ಸ್ವಾಗತ ಕಾಮಾನುಗಳ ನಿರ್ಮಾಣ
೧೫. ೩೦ ಲಕ್ಷ ಅನುದಾನದಲ್ಲಿ ಪೇಟೆಚೇರಿ, ಎಲೆಕೇರಿ ಹಾಗೂ ಇಂದಿರಾ ಕಾಟೇಜ್‌ಗಳಲ್ಲಿರುವ ಸ್ಮಶಾನ ಅಭಿವೃದ್ಧಿ.೧೬. ೪೦ ಲಕ್ಷ ವಚ್ಚದಲ್ಲಿ ಬಟ್ಟೆ ಬ್ಯಾಗ್ ವಿತರಣೆ ಮತ್ತು ಪೆಟ್ ಬಾಟಲ್‌ಗಳ ಕ್ರಶಿಂಗ್ ಯಂತ್ರ ಅಳವಡಿಕೆ