ರಂಗಕಲೆಗಿದೆ ಸಮಾಜ ಪರಿವರ್ತನೆಯ ಶಕ್ತಿ: ಸಾಹಿತಿ ಸತೀಶ ಕುಲಕರ್ಣಿ

| Published : Mar 27 2025, 01:02 AM IST

ರಂಗಕಲೆಗಿದೆ ಸಮಾಜ ಪರಿವರ್ತನೆಯ ಶಕ್ತಿ: ಸಾಹಿತಿ ಸತೀಶ ಕುಲಕರ್ಣಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಟಕ ಒಳ್ಳೆಯ ಮಾತು ಕಲಿಸುವ ಒಂದು ಮಾಧ್ಯಮ. ಯಾವಾಗಲೂ ಸಮಾಜಮುಖಿಯಾಗಿ ಹೇಳುವುದು ಕೇಳುವುದನ್ನು ಕಲಿಸುತ್ತದೆ.

ಹಾನಗಲ್ಲ: ರಂಗಭೂಮಿ ಯಾರಿಗೂ ಕಾಯುವುದಿಲ್ಲ, ಎಂದೂ ನಿಲ್ಲುವುದಿಲ್ಲ, ಚಲನಶೀಲತೆಯೇ ಅದರ ಗುಟ್ಟು, ಸಮಾಜ ಪರಿವರ್ತನೆಯೇ ಇದರ ಶಕ್ತಿ ಎಂದು ಸಾಹಿತಿ ಸತೀಶ ಕುಲಕರ್ಣಿ ತಿಳಿಸಿದರು.ತಾಲೂಕಿನ ರಂಗಗ್ರಾಮ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ಬೆಂಗಳೂರಿನ ರಂಗಶಂಕರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗಜಾನನ ಯುವಕ ಮಂಡಳ ಶೇಷಗಿರಿಯ ಸಹಯೋಗದಲ್ಲಿ ಆಯೋಜಿಸಿದ 4 ದಿನಗಳ ಕನ್ನಡ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ನಾಟಕ ಒಳ್ಳೆಯ ಮಾತು ಕಲಿಸುವ ಒಂದು ಮಾಧ್ಯಮ. ಯಾವಾಗಲೂ ಸಮಾಜಮುಖಿಯಾಗಿ ಹೇಳುವುದು ಕೇಳುವುದನ್ನು ಕಲಿಸುತ್ತದೆ ಎಂದರು.ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ ಮಾತನಾಡಿ, ಶೇಷಗಿರಿ ನಾಲ್ಕೈದು ದಶಕಗಳ ರಂಗ ಪ್ರೀತಿಯಿಂದಾಗಿ ರಂಗಗ್ರಾಮವಾಗಿದೆ. ಇಲ್ಲಿನ ಪ್ರೇಕ್ಷಕರಿಗೆ ಎಂತಹ ಕಠಿಣ ನಾಟಕವನ್ನೂ ಆಸ್ವಾದಿಸುವ, ರಸಗ್ರಹಣ ಮಾಡುವ ಶಕ್ತಿ ಸಹಜವಾಗಿಯೇ ಕರಗತವಾಗಿದೆ. ನೂರಾರು ನಾಟಕಗಳನ್ನು ರಂಗದಲ್ಲಿ ನೋಡಿ ಸಾವಿರಾರು ಚಿಂತನೆಗಳನ್ನು ಅನುಭವಿಸಿದ ಹಿರಿಮೆ ಶೇಷಗಿರಿ ಗ್ರಾಮಕ್ಕಿದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಪಂ ಅಧ್ಯಕ್ಷ ಪರಶುರಾಮ ಅಂಬಿಗೇರ, ಒಂದು ಪುಟ್ಟ ಹಳ್ಳಿ ಎಂತಹ ಪಟ್ಟಣಗಳಿಗೂ ಮಾದರಿಯಾದ ರಂಗ ಕಾಳಜಿ, ಪರಿಶ್ರಮದ ಮೂಲಕ ಹೆಸರು ಮಾಡಿದೆ. ಹಳ್ಳಿಯ ಯುವಕರ ರಂಗ ಪ್ರೀತಿಯೇ ಇದರ ಯಶಸ್ಸು ಎಂದರು.ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಪ್ರಭು ಗುರಪ್ಪನವರ ಹಾಗೂ ಸಿದ್ದಪ್ಪ ರೊಟ್ಟಿ, ಯುವ ನಾಯಕ ಶಿವಲಿಂಗಪ್ಪ ತಲ್ಲೂರ, ತಿಳವಳ್ಳಿಯ ಸಾಯಿ ಸೇವಾ ಸಂಸ್ಥೆಯ ಅಧ್ಯಕ್ಷ ಬಿ.ವಿ. ಬಿರಾದಾರ, ಗ್ರಾಪಂ ಸದಸ್ಯ ಬಸವರಾಜ ಬಡೆಮ್ಮಿ, ನಿಜಗುಣಿ ರೊಟ್ಟಿ, ಚಂದ್ರಶೇಖರ ಮಾಳಗಿ, ಎಸ್.ಆರ್. ಹಿರೇಮಠ, ಗೂಳಪ್ಪ ಅರಳೀಕಟ್ಟಿ ಅತಿಥಿಗಳಾಗಿದ್ದರು. ಕಲಾವಿದ ಸಿದ್ದು ಕೊಂಡೋಜಿ ಕಾರ್ಯಕ್ರಮ ನಿರೂಪಿಸಿದರು.ಸಂವಾದ: ಮೊದಲ ದಿನದ ಶ್ರೀನಿವಾಸ ಮೂರ್ತಿ ಅವರ ನಿರ್ದೇಶನದ ಬಹುಮುಖಿ ನಾಟಕ ಪ್ರದರ್ಶನದ ನಂತರ ನಡೆದ ಸಂವಾದದಲ್ಲಿ ಮಾತನಾಡಿದ ಉಪನ್ಯಾಸಕ ಡಾ. ಮಹದೇವಿ ಕಣವಿ, ಶಮಂತಕುಮಾರ, ಸುನಿತಾ ಉಪ್ಪಿನ, ಗೂಳಪ್ಪ ಅರಳಿಕಟ್ಟಿ ಸಾಮಾಜಿಕ ಸಾಮರಸ್ಯದ ಜೀವಂತಿಕೆಯ ಸಂಗತಿಗಳನ್ನು ಒಳಗೊಂಡ ಬಹುಮುಖತೆಯ ನಾಟಕ ಉತ್ತಮವಾಗಿ ಮೂಡಿತು ಎಂದರು.ಹೆಚ್ಚುವರಿಗೆ ಸಾರಿಗೆ ಸೌಲಭ್ಯ

ಹಾವೇರಿ: ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಸಾರ್ವಜನಿಕರ ಅನುಕೂಲಕ್ಕಾಗಿ ವಾ.ಕ.ರ.ಸಾ. ಸಂಸ್ಥೆಯ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಚಿಕ್ಕೋಡಿ ಮತ್ತು ಬಾಗಲಕೋಟೆ ವಿಭಾಗಗಳಿಂದ ಸುಮಾರು 137 ಹೆಚ್ಚುವರಿ ವಿಶೇಷ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.

ಮಾ. 30ರಂದು ಯುಗಾದಿ ಮತ್ತು ಮಾ. 31ರಂದು ರಂಜಾನ್ ಹಬ್ಬವಿರುವುದರಿಂದ ಬೆಂಗಳೂರು ಮತ್ತು ಇತರೇ ಪ್ರಮುಖ ಸ್ಥಳಗಳಿಂದ ಹೆಚ್ಚಿನ ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುವುದು. ಬೆಂಗಳೂರಿನಿಂದ ರಾಜ್ಯ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಗೆ ತೆರಳಲು ಮಾ. 28ರಿಂದ ಮಾ. 30ರ ವರೆಗೆ ಹೆಚ್ಚುವರಿ ವಿಶೇಷ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ವಿಶೇಷ ಹೆಚ್ಚುವರಿ ಸಾರಿಗೆಗಳ ಸದುಪಯೋಗ ಪಡೆದುಕೊಳ್ಳುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.